Karnataka TImes
Trending Stories, Viral News, Gossips & Everything in Kannada

Jio 5G: ಯೋಜನೆಗಳು, ಸಿಮ್, ಲಾಂಚ್ ಡೇಟ್, ಸಿಟಿಗಳು ಮತ್ತು ಸ್ಪೀಡ್ ಟೆಸ್ಟ್.

ದೇಶದಲ್ಲಿ5 ಜಿ ಯುಗ ಆರಂಭವಾಗಿದೆ. ಇದರ ಬೆನ್ನಲ್ಲಿಯೇ ಹಲವಾರು ಪ್ರಶ್ನೆಗಳೂ ಆರಂಭವಾಗಿದೆ. 4ಜಿ ಮೊಬೈಲ್‌ನಲ್ಲಿ 5ಜಿ ಬರುತ್ತಾ, ಮೊಬೈಲ್‌ ಕಂಪನಿಗಳು 5ಜಿ ಸೇವೆಗೆ ವಿಧಿಸುವ ಚಾರ್ಜ್‌ ಎಷ್ಟು? ಯಾವೆಲ್ಲಾ ನಗರಗಳಲ್ಲಿ ಮೊದಲ ಹಂತದಲ್ಲಿ 5ಜಿ ಸೇವೆ ಆರಂಭವಾಗಲಿದೆ ಎನ್ನುವ ಕುತೂಹಲ ಆರಂಭವಾಗಿದೆ. ಪ್ರಗತಿ ಮೈದಾನದಲ್ಲಿ 5ಜಿ ಸೇವೆಯನ್ನು ಅನಾವರಣ ಮಾಡಿದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿವಿಧ ವಿಭಾಗಗಳಲ್ಲಿ 5ಜಿ ಸೇವೆ ಯಾವ ರೀತಿ ಕಾರ್ಯ ನಿರ್ವಹಿಸಲಿದೆ ಎನ್ನುವ ಡೆಮೋಅನ್ನೂ ಪಡೆದುಕೊಂಡರು.

ವಿಡಿಯೋಗೇಮಿಂಗ್‌, ವರ್ಚುವಲ್‌ ರಿಯಾಲಿಟಿ, ಕನೆಕ್ಟಿವಿಟಿ ವಿಭಾಗದಲ್ಲಿ 5ಜಿ ಸೇವೆ ಯಾವ ರೀತಿ ಕಾರ್ಯನಿರ್ವಹಿಸಲಿದೆ ಎಂದು ದೇಶದ ಟೆಲಿಕಾಂ ಕಂಪನಿಗಳು ಪ್ರಧಾನಿ ಮೋದಿಗೆ ತೋರಿಸಿದವು. 4ಜಿಗಿಂತ 10 ಪಟ್ಟು ವೇಗದಲ್ಲಿ 5ಜಿ ಸೇವೆ ಇರಲಿದ್ದು, ಇದರಿಂದ ದೇಶದ ಟೆಲಿಕಾಂ ಸೇರಿದಂತೆ ಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗುವುದು ನಿಶ್ಚಯವಾಗಿದೆ. ಹಾಗಂತ, 5ಜಿ ಒಂದೇ ಬಾರಿಗೆ ದೇಶದ ಎಲ್ಲೆಡೆ ಆರಂಭವಾಗುವುದಿಲ್ಲ.

5G ಅನ್ನು ಮೊದಲು ಪ್ರಾರಂಭಿಸುವ ನಗರಗಳು ಯಾವುವು?

ಮೊದಲ ಹಂತದಲ್ಲಿದೇಶದ 13 ಪ್ರಮುಖ ನಗರಗಳಲ್ಲಿ 5ಜಿ ಸೇವೆಯನ್ನು ಆರಂಭ ಮಾಡುವುದಾಗಿ ಟೆಲಿಕಾಂ ಕಂಪನಿಗಳು ಘೋಷಣೆ ಮಾಡಿವೆ, ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗಲಿದೆ. ಬೆಂಗಳೂರು ಸೇರಿದಂತೆ, ದೆಹಲಿ, ಮುಂಬೈ, ಚೆನ್ನೈ,ಕೋಲ್ಕತ್ತಾ, ಚಂಡೀಗಢ, ಗುರುಗ್ರಾಮ, ಹೈದರಾಬಾದ್‌, ಲಕ್ನೋ, ಪುಣೆ, ಗಾಂಧಿನಗರ, ಅಹಮದಾಬಾದ್‌ ಹಾಗೂ ಜಾಮ್‌ನಗರದಲ್ಲಿ ಸೇವೆ ಆರಂಭಿಸುವುದಾಗಿ ಕಂಪನಿಗಳು ತಿಳಿಸಿವೆ.

ಯಾವ ಸ್ಮಾರ್ಟ್‌ಫೋನ್‌ಗಳಲ್ಲಿ 5G ನೆಟ್ವರ್ಕ್ ಬೆಂಬಲಿಸುತ್ತದೆ ?

ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ತಮ್ಮ ಎಜಿಎಂ ಸಮಯದಲ್ಲಿ, 5G ಕೇವಲ ಗಣ್ಯರಿಗೆ ಸೀಮಿತವಾಗಿರಬಾರದು ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಿದ್ದಾರೆ. ಇದರರ್ಥ ಜಿಯೋದ 5G ದರಗಳು ಜನಸಾಮಾನ್ಯರಿಗೂ ಎಟುಕುವಂತಿರುತ್ತದೆ ಎಂದು ಹೇಳಿದ್ದರು.ಬಹುತೇಕ ಎಲ್ಲರ ಪ್ರಶ್ನೆ ಇದೇ ಇದೆ. 5ಜಿ ಸೇವೆ ಆರಂಭವಾಗಿದೆ. ಇದನ್ನು ಅನುಭವಿಸಲು 5ಜಿ ತಂತ್ರಜ್ಞಾನ ಇರುವ ಮೊಬೈಲ್‌ ಹಾಗೂ ಸಿಮ್‌ ಇರಬೇಕಾಗುತ್ತದೆ. ಇತ್ತೀಚಿನ ವರ್ಷಗಳ ಅಂದರೆ, 1 ರಿಂದ ಒಂದೂವರೆ ವರ್ಷಗಳಲ್ಲಿ ಖರೀದಿಸಿದ್ದ ಮೊಬೈಲ್‌ ಆಗಿದ್ದರೆ, ಅದರಲ್ಲಿ 5ಜಿ ತಂತ್ರಜ್ಞಾನ ಎನೇಬಲ್‌ ಆಗಿರಲಿದೆ. ಹಳೆಯ ಮೊಬೈಲ್‌ಗಳಲ್ಲಿ ಈ ತಂತ್ರಜ್ಞಾನ ಇದ್ದಿರುವುದಿಲ್ಲ. ಅದಕ್ಕಾಗಿ 5ಜಿ ತಂತ್ರಜ್ಞಾನ ಇರುವ ಮೊಬೈಲ್‌ಅನ್ನು ಖರೀದಿ ಮಾಡಬೇಕಾಗುತ್ತದೆ.

ಇದರಿಂದ ಜನರ ಕೆಲಸ ಸುಲಭವಾಗುವುದಲ್ಲದೆ ಮನರಂಜನೆ ಮತ್ತು ಸಂವಹನ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಯಾಗಲಿದೆ. 5G ಗಾಗಿ ಕೆಲಸ ಮಾಡುವ ಕಂಪನಿಯಾದ ಎರಿಕ್ಸನ್, ಭಾರತದಲ್ಲಿ 5 ವರ್ಷಗಳಲ್ಲಿ 500 ದಶಲಕ್ಷಕ್ಕೂ ಹೆಚ್ಚು 5G ಇಂಟರ್ನೆಟ್ ಬಳಕೆದಾರರು ಇರುತ್ತಾರೆ ಎಂದು ಹೇಳಿದೆ.ಫಿಫ್ತ್‌ ಜನರೇಷನ್‌ ಇಂಟರ್ನೆಟ್‌ ಅಥವಾ ಐದನೇ ಯುಗದ ಇಂಟರ್ನೆಟ್‌ ಸೇವೆಗೆಗಳಿಗೆ 5ಜಿ ಎನ್ನುತ್ತಾರೆ. ಇದು ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಯಾಗಿದ್ದು, ಅಲೆಗಳ ಮೂಲಕ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತದೆ. ಇದರಲ್ಲಿ ಮುಖ್ಯವಾಗಿ ಮೂರು ರೀತಿಯ ಫ್ರೀಕ್ವೆನ್ಸಿ ಬ್ಯಾಂಡ್ ಗಳಿವೆ.