Karnataka TImes
Trending Stories, Viral News, Gossips & Everything in Kannada

Kantara: ಕಾಂತಾರ ಸಿನೆಮಾ ಭರ್ಜರಿ ಹಿಟ್ ಕಾಣುವಾಗಲೇ ರಿಷಬ್ ಶೆಟ್ಟಿಗೆ ದೊಡ್ಡ ಹೊಡೆತ….

ಕಠಿಣ ಪರಿಶ್ರಮ ಪಟ್ಟರೆ ಎಲ್ಲರಿಗೂ ಒಂದೊಳ್ಳೆ ಕಾಲ ಬಂದೇ ಬರುತ್ತದೆ. ಆದರೆ ಅದಕ್ಕಾಗಿ ಕಾಯಬೇಕು ಅಷ್ಟೆ. ನಂಬಿಕೆ ಕಳೆದುಕೊಳ್ಳದೇ ಶ್ರಮಪಟ್ಟರೆ ಯಶಸ್ಸು ಎಂಬುದು ಕಟ್ಟಿಟ್ಟಬುತ್ತಿ. ಹೌದು ಯಾಕೆ ಈ ಮಾತಿ ಅಂತೀರ? ರಿಷಬ್ ಶೆಟ್ಟಿ ವಿಚಾರದಲ್ಲಿ ಈ ಮಾತು ಸದ್ಯ ಇದೀಗ ಅಕ್ಷರಶಃ ನಿಜವಾಗಿದ್ದು ಸರಿ ಸುಮಾರು 7 ವರ್ಷಗಳ ಹಿಂದೆ ಮಂಗಳೂರಿನ ಅದೇ ಮಲ್ಟಿಪ್ಲೆಕ್ಸ್‌ನಲ್ಲಿ ತಮ್ಮ ಚಿತ್ರಕ್ಕೆ ಒಂದೇ ಒಂದೇ ಶೋ ಕೊಡಿ ಎಂದು ಕಾಡಿ ಬೇಡಿಕೊಂಡಿದ್ದರು.

ಆದರೆ ಇಂದು ಆ ಮಲ್ಟಿಪ್ಲೆಕ್ಸ್‌ನ ಎಲ್ಲಾ ಶೋಗಳಲ್ಲೂ ಕಾಂತಾರ ಸಿನಿಮಾ ಹೌಸ್‌ಫುಲ್ ಆಗಿದ್ದು ಸಕ್ಸಸ್ ಎನ್ನುವುದು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಒಮ್ಮೊಮ್ಮೆ ಸಿಗುವ ಸಕ್ಸಸ್ ಹಳೇ ನೋವನ್ನೆಲ್ಲಾ ಮರೆಸಿಬಿಡುತ್ತದೆ ಎನ್ನಬಹುದು. ಸದ್ಯ ರಿಷಬ್ ಶೆಟ್ಟಿ ಚಿತ್ರರಂಗದ ಸಖತ್ ಶೈನ್ ಆಗಿದ್ದು ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಾ ಬಂದ ರಿಷಬ್ ರವರು ಇಂದು ಮಾಸ್ ಹೀರೊ ಆಗಿ ಎಲ್ಲರ ಹೃದಯ ಗೆದ್ದಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ Kantara ಚಿತ್ರದ ಮೂಲಕ ದೊಡ್ಡ ಹಿಟ್ ತಂದುಕೊಟ್ಟಿದ್ದು ಆದರೆ ರಿಷಬ್ ಇದೀಗ ಕೈ ಮುಗಿದು ದಯವಿಟ್ಟು ನಮ್ಮ ಸಿನಿಮಾ ಪರೈಸಿ ಮಾಡಿಬೇಡಿ ಎಂದು ಕೇಳಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ..

ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಯಾರೂ ಕೂಡ ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಬಂದ ರಿಷಬ್ ಶೆಟ್ಟಿ ಯವರು ಆರಂಭದ ದಿನಗಳಲ್ಲಿ ಸಾಕಷ್ಟು ಸೈಕಲ್ ಹೊಡೆದಿದ್ದಾರೆ. ಹೌದು ಸಾಕಷ್ಟು ಅವಮಾನಗಳನ್ನು ಎದುರಿಸಿದ್ದು ಏನೇನೋ ಮಾಡಿ ಒಂದು ಸಿನಿಮಾ ನಿರ್ದೇಶನ ಮಾಡಿದರೂ ಕೂಡ ಅದನ್ನು ಪ್ರೇಕ್ಷಕರಿಗೆ ತೋರಿಸಲು ಬಹಳ ಸರ್ಕಸ್ ಮಾಡುವಂತಾಗಿತ್ತು.


ಇನ್ನು ರಿಷಬ್ ಶೆಟ್ಟಿ ನಿರ್ದೇಶನದ ಚೊಚ್ಚಲ ಸಿನಿಮಾ ರಿಕ್ಕಿ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಹರಿಪ್ರಿಯಾ ಚಿತ್ರದ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದು ಸಿನಿಮಾ ಒಂದು ಮಟ್ಟಿಗೆ ಸದ್ದು ಮಾಡಿತ್ತು. ಆದರೆ ಚಿತ್ರಕ್ಕೆ ಥಿಯೇಟರ್‌ಗಳಲ್ಲಿ ಶೋಗಳನ್ನೇ ಕೊಟ್ಟಿರಲಿಲ್ಲ. ಹೌದು ಕಾಡಿ ಬೇಡಿ ಅವರಿವರ ಕೈಕಾಲು ಹಿಡಿದು ಶೋ ತೆಗೆದುಕೊಂಡಿದ್ದರು. ಆದರೆ ಇದೀಗ ರಿಷಬ್ ರವರ ಕೈಕಾಲು ಹಿಡಿಯುವ ಪರಿಸ್ಥಿತಿ ನಿರ್ಮಾಣ ವಾಗಿದೆ.

ಸದ್ಯ ಸಿನಿಮಾತಂಡ ಎಷ್ಟೇ ಕಾಳಜಿ ಮತ್ತು ಎಚ್ಚರಿಕೆ ವಹಿಸಿದರೂ ಪೈರಸಿ ಕಾಟದಿಂದ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೌದು ಈ ಹಿಂದೆ ಪೈರಸಿ ಕಾಟದಿಂದಾಗಿ ಕನ್ನಡದ ಹಲವು ಸಿನಿಮಾಗಳಲ್ಲಿ ದೊಡ್ಡ ಮಟ್ಟದಲ್ಲಿ ತೊಂದರೆಯಾಗಿತ್ತು. ಇನ್ನು ಸಿನಿಮಾ ಬಿಡುಗಡೆಯಾದ ಕೇವಲ ಒಂದೆರಡು ದಿನಗಳಲ್ಲಿಯೇ ಸಿನಿಮಾದ ಲಿಂಕ್ ಗಳು ಮೊಬೈಲ್ ಗಳಲ್ಲಿ ಹರಿದಾಡುತ್ತಿದ್ದವು.

ಸದ್ಯ ಇದೀಗ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಂಡು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿರುವ ಕಾಂತಾರ ಸಿನಿಮಾಗೂ ಕೂಡ ಪೈರಸಿ ಜ್ವರ ಶುರುವಾಗಿದ್ದು ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ನಟ ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಈಗಾಗಲೇ ಈ ವರ್ಷದ ಹಿಟ್ ಲಿಸ್ಟ್ ಗೆ ಸೇರಿಕೊಂಡಿದೆ. ಸಿನಿಮಾ ನೋಡಲು ಎಲ್ಲೆಡೆ ಜನರು ಮುಗಿ ಬಿದ್ದು ಚಿತ್ರಮಂದಿರಕ್ಕೆ ತೆರಳುತ್ತಿದ್ದಾರೆ.

ಸದ್ಯ ಸಿನಿಮಾ ಚಿತ್ರಮಂದಿರಗಳಲ್ಲಿ ಇರುವಾಗಲೇ ಮೊಬೈಲ್ ನಲ್ಲಿ ಸಂಪೂರ್ಣ ಸಿನಿಮಾ ಹರಿದಾಡುತ್ತಿದ್ದು ಸಿನಿಮಾವನ್ನು ಲೀಕ್ ಮಾಡಿರುವ ಪೈರಸಿ ಕಳ್ಳರು ಈಗಾಗಲೇ ಕೆಲವು ವೆಬ್ ಸೈಟ್ ಗಳಿಗೆ ಅಪ್ ಲೋಡ್ ಮಾಡಿದ್ದಾರೆ. ಸಿನಿಮಾ ತಂಡ ಪೈರಸಿ ಯಿಂದ ತಪ್ಪಿಸಿಕೊಳ್ಳಲು ಅದೆಷ್ಟೇ ಕಟ್ಟೆಚ್ಚರ ವಹಿಸಿದ್ದರೂ ಸಹ ಬಿಡುಗಡೆಯಾದ ಕೇವಲ ಎರಡೇ ದಿನಕ್ಕೆ ಸಿನಿಮಾ ಪೈರಸಿ ಆಗಿಬಿಟ್ಟಿದೆ.ಸಾಕಷ್ಟು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಸಿನುಮಾವನ್ನು ಮೊಬೈಲ್ ಮೂಲಕ ರೆಕಾರ್ಡ್ ಮಾಡುತ್ತಿದ್ದು ಚಿತ್ರಮಂದಿರದವರು ಇತ್ತ ಗಮನಹರಿಸಿ ಸಿನಿಮಾವನ್ನು ವೀಡಿಯೋ ಮಾಡದೇ ಇರುವ ಹಾಗೆ ತಡೆಯಿರಿ.

ಪೈರಸಿ ವಿಚಾರವಾಗಿ ಸಾಕಷ್ಟು ಕ್ರಮ ವಹಿಸಿದ್ದು ನಮ್ಮ ಆಂಟಿ ಪೈರಸಿ ತಂಡ ದಿನಸ ಇಪ್ಪತ್ತಾಲ್ಕು ಗಂಟೆಗಳ ಕಾಲ ಕೆಲಸ ಮಾಡುತ್ತಲೇ ಇದೆ. ಸದ್ಯ ಈಗಾಗಲೇ ಸಾಕಷ್ಟು ಆನ್ ಲೈನ್ ವೆಬ್ ಸೈಟ್ ಹಾಗೂ ಯೂಟ್ಯೂಬ್ ಚಾನೆಲ್ ಗಳ ಮೇಲೆ ಕ್ರಮ ವಹಿಸಿದ್ದು ನಿಮ್ಮ ಖುಷಿಯನ್ನು ಹಂಚುವ ಭರದಲ್ಲಿ ಸಿನಿಮಾದ ಮುಖ್ಯ ದೃಶ್ಯಗಳನ್ನು ಶೇರ್ ಮಾಡಬೇಡಿ ದಯವಿಟ್ಟು ಯಾರೂ ಕೂಡ ನಮ್ಮ ಸಿನಿಮಾವನ್ನು ಪೈರಸಿ ಮಾಡಬೇಡಿ ಹಾಗೂ ನೋಡಬೇಡಿ ಎಂದು ರಿಷಬ್ ಶೆಟ್ಟಿ ಅವರು ಕೈ ಮುಗಿದು ಕೇಳಿಕೊಂಡಿದ್ದಾರೆ.