Karnataka TImes
Trending Stories, Viral News, Gossips & Everything in Kannada

Kantara: ನಮಗೆ ಮೋಸ ಆಗುತ್ತಿದೆ ಕಾಂತಾರ ಚಿತ್ರದ ಬಗ್ಗೆ ಬೇರೆಯೇ ಸತ್ಯ ತಿಳಿಸಿದ ಶರಣ್

ಕಾಂತಾರ ಸಿನಿಮಾದಿಂದ ದೊಡ್ಡ ಹೊಡೆತ ಬಿದ್ದಿದೆ. ಹೌದು ಆ ಸಿನಿಮಾ ಮತ್ಯಾವುದೂ ಅಲ್ಲ ಶರಣ್ ಅಭಿನಯದ ಗುರು ಶಿಷ್ಯರು ಸಿನಿಮಾ . ಈ ಸಿನಿಮಾ ಕೂಡ ಅಪ್ಪಟ ಕನ್ನಡದ ಮಣ್ಣಿನ ಸಿನಿಮಾವಾಗಿದ್ದು ಖೋಖೋ ಕ್ರೀಡೆಯ ಮೇಲೆ ಹೆಣೆದ ಕತೆ ಇದಾಗಿದೆ. ಚಿತ್ರ ನೋಡಿದ ಪ್ರತಿಯೊಬ್ಬರೂ ಕೂಡ ಮೆಚ್ಚಿಕೊಂಡಿದ್ದು ಆದರೆ ಕಾಂತಾರ ದಾಳಿಯಿಂದಾಗಿ ಗುರು ಶಿಷ್ಯರು ಎತ್ತಂಗಡಿಯಾಗುತ್ತಿದೆ ಸದ್ಯ ಈ ಕುರಿತು ಮಾತನಾಡಿರುವ ನಟ ಶರಣ್ ರವರು ನಮಗೆ ಮೋಸ ಆಗುತ್ತಿದೆ ದಯವಿಟ್ಟು ನಮ್ಮ ಸಿನಿಮಾವನ್ನು ಕೂಡ ನೋಡಿ ಎಂದು ಮಾಧ್ಯಮಗಳ ಮುಂದೆ ಬೇಡಿಕೊಂಡಿದ್ದು ದಯವಿಟ್ಟು ಒಳ್ಳೆಯ ಕಥೆ ಹೊಂದಿರುವ ಪ್ರತಿಯೊಂದು ಸಿನಿಮಾವನ್ನು ಗೆಲ್ಲಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಸದ್ಯ ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಚಿತ್ರರಂಗ ಬೆಳ್ಳಿ ರಥದ ಮೇಲೆ ಕುಳಿತು ರಾರಾಜಿಸುತ್ತಿದೆ ಎಂದು ಹೇಳಿದರೆ ಖಂಡಿತವಾಗಿಯೂ ತಪ್ಪಾಗಲಾರದು. ಹೌದು ಇತ್ತೀಚೆಗೆ ತೆರೆಕಾಣುತ್ತಿರುವ ಸಾಕಷ್ಟು ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಹೆಸರು ಮಾಡುತ್ತಿದ್ದು ಕನ್ನಡ ಸಿನಿಮಾಗಳು ಎಂದರೆ ಮೂಗು ಮುರಿಯುತ್ತಿದ್ದದಂತಹ ಹಲವರು ಇದೀಗ ಕನ್ನಡ ಚಿತ್ರ ಗಳಿಗೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು ಸ್ಟಾರ್ ನಟರಿಂದ ಹಿಡಿದು ಅನೇಕ ಸಿನಿಮಾಗಳು ಪರಭಾಷೆಯಲ್ಲೂ ಕೂಡ ಸದ್ದು ಮಾಡುತ್ತಿದ್ದು ಕನ್ನಡಿಗರ ಕಥೆ ಹಾಗೂ ಮೇಕಿಂಗ್ ಸ್ಟೈಲ್ ಗೆ ಪರಭಾಷಿಗರು ತಲೆ ಬಾಗಿದ್ದಾರೆ.

ಈ ರೀತಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸಿನಿಮಾ ಮಾಡುವ ಪ್ರಯತ್ನಕ್ಕೆ ನಾಂದಿ ಹಾಡಿದವರು ನಟ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಎಂದು ಹೇಳಿದರೆ ಖಂಡಿತ ತಪ್ಪಾಗಲಾರದು. ಹೌದು ಕೆಜಿಎಫ್ ಮೊದಲ ಭಾಗ ಬಿಡುಗಡೆಯಾದಗ ಈ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ವ್ಯವಹಾರ ಮಾಡುತ್ತರೆ ಎಂದು ಸ್ವತಃ ಚಿತ್ರತಂಡದವರೇ ನಿರೀಕ್ಷಿಸಿರಲಿಲ್ಲ ಎಂದಿನಿಸುತ್ತದೆ.ನಟ ಯಶ್ ರವರ ಎರಡು ವರುಷಗಳ ಪರಿಶ್ರಮ ನಿರ್ದೇಶಕ ಪ್ರಶಾಂತ್ ನೀಲ್ ರವರ ವಿಭಿನ್ನ ಪ್ರಯತ್ನ ನಿರ್ಮಾಪಕ ವಿಜಯ್ ಕಿರಂಗದೂರ್ ರವರ ಸಹಕಾರದಿಂದಾಗಿ ಕೆಜಿಎಫ್ ಚಾಪ್ಟರ್ 1 ಬರೋಬ್ಬರಿ 100 ಕೋಟಿ ವ್ಯವಹಾರ ಮಾಡಿ ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಮಾಡುತ್ತದೆ.

ಬಳಿಕ ಕೆಜಿಎಫ್ ಚಾಪ್ಟರ್ 2 ಗಾಗಿ ಇಡೀ ವಿಶ್ವವೇ ಎದುರು ನೋಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಚಿತ್ರದಲ್ಲಿ ಸಂಜತ್ ದತ್ ಹಾಗೂ ತಂಡನ್ ಅಭಿನಯಿಸಿದ್ದರಿಂದ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಾಟ್ಟಾಗಿತ್ತು. ಇನ್ನು ಸಿನಿಮಾದ ಟ್ರೈಲ್ ಬಿಡುಗಡೆ ಆಗುತ್ತಿದ್ದಂತೆ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದು ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ವಿಕ್ಷಣೆ ಪಡೆದ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಬಳಿಕ ಚಿತ್ರ ವಿಶ್ವ ಮಟ್ಟದಲ್ಲಿ ತೆರೆಕಂಡು ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಬಾಹುಬಲಿ ಸರಣಿ ಹಾಗೂ ಹಿಂದೆ ಇದ್ದ ಎಲ್ಲಾ ದಾಖಲೆ ಮುರಿದು ಸದ್ಯ ನಂಬರ್ ವನ್ ಪಟ್ಟ ಅಲಂಕರಿಸಿದೆ.

ಈ ಸಿನಿಮಾ ಬಳಿಕ ಕನ್ನಡಕ್ಕೆ ಬೇಡಿಕೆ ಹೆಚ್ಚಾಗಿದ್ದು ಸಾಕಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳು ಬಂದವು. ಹೌದು ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಹಾಗೂ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾಗಳು ಕೂಡ ವಿಭಿನ್ನತೆಯಿಂದ ಕೂಡಿದ ಕಾರಣ ಇವು ಕೂಡ ಸದ್ದು ಮಾಡಿದವು. ಸದ್ಯ ಇದೀಗ ತೆರಕಂಡ ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗದೆಯಿದ್ದರು ಕೂಡ ಕರುನಾಡ ಗಡಿ ದಾಟಿ ರಾರಾಜಿಸುತ್ತದೆ. ಹೌದು ಆ ಸಿನಿಮಾ ಮತ್ಯಾವುದು ಅಲ್ಲ ರಿಷಬ್ ಶೆಟಿ ನಿರ್ದೇಶನದಲ್ಲಿ ಹಾಗೂ ಸ್ವತಃ ಅವರೆ ನಟಿಸಿ ತೆರೆ ಕಂಡಿರುವ ಕಾಂತರ ಸಿನಿಮಾ.

 

ಹೌದು ಕಾಂತಾರ ಸಿನಿಮಾ ನಿಜಕ್ಕೂ ತೆರೆಮೇಲೆ ಚಮತ್ಕಾರ ಮಾಡಿದ್ದು ಸಿನಿರಸಿಕರು ಸಿನಿಮಾ ನೋಡಲು ದೊಡ್ಡಮಟ್ಟದಲ್ಲಿ ಮುಗಿಬಿದ್ದಿದ್ದು ಐದನೇ ದಿನವಾದ ಇಂದು ಕೂಡ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ದಸರಾ ಹಬ್ಬದ ಸಂಭ್ರಮದಲ್ಲಿ ಪ್ರೇಕ್ಷಕರು ಫ್ಯಾಮಿಲಿ ಸಮೇತ ಸಿನಿಮಾ ನೋಡಲು ಟಿಕೆಟ್ ಬುಕ್‌ ಮಾಡಿಕೊಳ್ಳುತ್ತಿದ್ದು ಪರಿಣಾಮ ನಾಳೆ ನಾಡಿದ್ದು ಶೋಗಳ ಟಿಕೆಟ್ಸ್ ಹಾಟ್‌ ಕೇಕ್ ತರ ಸೇಲ್ ಆಗುತ್ತಿದೆ.

ಕಳೆದ 3 ದಿನಗಳಿಂದ ಹಲವೆಡೆ  Kantara ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಈ ಚಿತ್ರಕ್ಕೆ ನಾಲ್ಕನೇ ದಿನವೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಒಮ್ಮೆ ಬುಕ್‌ಮೈ ಶೋ ವೆಬ್‌ಸೈಟ್ ಓಪನ್ ಮಾಡಿ ನೋಡಿದರೆ ಕಾಂತಾರ ಸಿನಿಮಾ ಹವಾ ಹೇಗಿದೆ ಎನ್ನುವುದು ಗೊತ್ತಾಗುತ್ತದೆ. ಅಪ್ಪಟ ಕನ್ನಡ ಮಣ್ಣಿನ ಸಿನಿಮಾ ಇದಾಗಿದ್ದು ದೈವಿಕ ಚಿತ್ರ ಎಂದು ಎಲ್ಲರೂ ಕೊಂಡಾಡುತ್ತಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನದ ಜೊತೆಗೆ ನಟನೆಯಲ್ಲೂ ಸೈ ಎನ್ನಿಸಿಕೊಂಡಿದ್ದು ಕೆಲವರು ಈ ಬಾರಿ ರಿಷಬ್‌ಗೆ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಸಿಗುತ್ತದೆ ಎನ್ನುತ್ತಿದ್ದಾರೆ. KGF- 2 ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಇಂತಹ ರೆಸ್ಪಾನ್ಸ್ ಪಡೆದುಕೊಳ್ತಿರೋ ಮತ್ತೊಂದು ಸಿನಿಮಾ ಕಾಂತಾರ ಎನ್ನಬಹುದು.ಆದರೆ ಮಾತ್ರ ಈ ಸಿನಿಮಾದಿಂದ ಮತ್ತೊಂದು ಸಿನಿಮಾಗೆ ಭಾರಿ ಹೊಡೆತ ಬಿದ್ದಿದ್ದು ಕಾಂತಾರ ಬಿಡುಗಡೆಯಾಗುವ ಒಂದು ವಾರಕ್ಕೂ ಮುನ್ನ ಈ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿತ್ತು.

ಆದರೆ ಕಾಂತಾರ ಸಿನಿಮಾದಿಂದ ದೊಡ್ಡ ಹೊಡೆತ ಬಿದ್ದಿದೆ. ಹೌದು ಆ ಸಿನಿಮಾ ಮತ್ಯಾವುದೂ ಅಲ್ಲ ಶರಣ್ ಅಭಿನಯದ ಗುರು ಶಿಷ್ಯರು ಸಿನಿಮಾ . ಈ ಸಿನಿಮಾ ಕೂಡ ಅಪ್ಪಟ ಕನ್ನಡದ ಮಣ್ಣಿನ ಸಿನಿಮಾವಾಗಿದ್ದು ಖೋಖೋ ಕ್ರೀಡೆಯ ಮೇಲೆ ಹೆಣೆದ ಕತೆ ಇದಾಗಿದೆ. ಚಿತ್ರ ನೋಡಿದ ಪ್ರತಿಯೊಬ್ಬರೂ ಕೂಡ ಮೆಚ್ಚಿಕೊಂಡಿದ್ದು ಆದರೆ ಕಾಂತಾರ ದಾಳಿಯಿಂದಾಗಿ ಗುರು ಶಿಷ್ಯರು ಎತ್ತಂಗಡಿಯಾಗುತ್ತಿದೆ ಸದ್ಯ ಈ ಕುರಿತು ಮಾತನಾಡಿರುವ ನಟ ಶರಣ್ ರವರು ನಮಗೆ ಮೋಸ ಆಗುತ್ತಿದೆ ದಯವಿಟ್ಟು ನಮ್ಮ ಸಿನಿಮಾವನ್ನು ಕೂಡ ನೋಡಿ ಎಂದು ಮಾಧ್ಯಮಗಳ ಮುಂದೆ ಬೇಡಿಕೊಂಡಿದ್ದು ದಯವಿಟ್ಟು ಒಳ್ಳೆಯ ಕಥೆ ಹೊಂದಿರುವ ಪ್ರತಿಯೊಂದು ಸಿನಿಮಾವನ್ನು ಗೆಲ್ಲಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.