Karnataka TImes
Trending Stories, Viral News, Gossips & Everything in Kannada

sudeepa: ಮುಲಾಜಿಲ್ಲದೆ ಚಿತ್ರರಂಗದ ಬಗ್ಗೆ ಆ ಸತ್ಯ ತಿಳಿಸಿದ ನಟ ಸುದೀಪ್ ಮಗಳು

ನಮ್ಮ ಕನ್ನಡ ಚಿತ್ರರಂಗದಲ್ಲಿ ಅನೇಕ ನಟರುಗಳು ಅನೇಕ ರೀತಿಯ ಏಳು ಬೀಳುಗಳನ್ನು ದಾಟಿಕೊಂಡು ಇದೀಗ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಇಡೀ ಭಾರತ ಚಿತ್ರರಂಗದಲ್ಲೇ ಹೆಸರು ಮಾಡುತ್ತಿದ್ದು ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದಾರೆ ಎನ್ನಬಹುದು. ಹೌದು ಈ ಸಾಲಿನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರನ್ನ ನಾವು ಮರೆಯುವಂತಿಲ್ಲ. ಹೋಟೆಲ್ ಉದ್ಯಮಿ ಸಂಜೀವ್ ಅವರ ಪುತ್ರರಾಗಿ ಜನಿಸಿದ ಕಿಚ್ಚ ಸುದೀಪ್ ರವರಿಗೆ ಬಾಲ್ಯದಿಂದಲೇ ಸಿನಿಮಾದ ಮೇಲೆ ಒಲವು ಮೂಡಿದ್ದು ಮೊದಮೊದಲು ಪೋಷಕ ಪಾತ್ರಧಾರಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ.

ತದನಂತರ ಸ್ಪರ್ಶ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕುರುಚಲು ಮೀಸೆ ಬಿಟ್ಟು ಕೊಂಡು ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ರವರ ಎತ್ತರ ನೋಡಿ ಅಕ್ಷರಶಃ ಎಲ್ಲರೂ ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು. ಇನ್ನು ಸ್ಪರ್ಶ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗದೇ ಇದ್ದರೂ ಕೂಡ ಸುದೀಪ್ ರವರನ್ನ ಚಿತ್ರರಂಗದ ಭರವಸೆಯ ನಟ ಎಂದೇ ಭಾವಿಸಿದ್ದರು. ಆದರೆ ಅದೇನಾಯಿತೋ ಏನೋ ನಟ sudeepa ರವರು ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನೇ ನೀಡುತ್ತಾ ಬರುತ್ತಾರೆ.

ಹೌದು ಸುದೀಪ್ ರವರು ಯಾವುದೇ ರೀತಿಯ ಪ್ರಯತ್ನ ಮಾಡಿದರೂ ಕೂಡ ಅದ್ಯಾವುದಕ್ಕೂ ಪ್ರತಿಫಲ ಸಿಗುವುದಿಲ್ಲ. ಕೊನೆಗೆ ಸುದೀಪ್ ಅವರನ್ನು ಯಾವ ಮಟ್ಟಕ್ಕೆ ಹೀಯಾಳಿಸುವುದಕ್ಕೆ ಶುರು ಮಾಡುತ್ತಾರೆ ಎಂದರೆ ಅವರನ್ನ ಐರನ್ ಲೆಗ್ ಎಂದು ಕೂಡ ಹೇಳಿಬಿಡುತ್ತಾರೆ. ಹೀಗೆ ಅನೇಕ ಅವಮಾನಗಳನ್ನು ಸಹಿಸಿಕೊಂಡು
ಚಿತ್ರರಂಗದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಪಣತೊಟ್ಟ ಸುದೀಪ್ ರವರಿಗೆ ದೊಡ್ಡ ಯಶಸ್ಸು ತಂದುಕೊಟ್ಟ ಸಿನಿಮಾ ಎಂದರೆ ಹುಚ್ಚ ಸಿನಿಮಾ. ಹೌದು ನಿರ್ದೇಶಕ ಓಂಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಮೂಡಿಬಂದ ಹುಚ್ಚ ಸಿನಿಮಾ ಯಾವ ಮಟ್ಟಕ್ಕೆ ಹಿಟ್ ಆಯಿತು ಎಂದರೆ ರಿಮೇಕ್ ಸಿನಿಮಾವಾದರೂ ಕೂಡ ಕಿಚ್ಚನ ಅಭಿನಯಕ್ಕೆ ಕನ್ನಡ ಸಿನಿ ರಸಿಕರು ಫಿದಾ ಆದರು.

ತದನಂತರ ಸಮಾನ್ಯ ಸಿಟ್ ಕೊಡುತ್ತಾ ಬಂದ ಸುದೀಪ್ ವಿಷ್ಣುವರ್ಧನ ಸಿನಿಮಾದ ಮೂಲಕ ತಮ್ಮ ಶೈಲಿಯಲ್ಲೇ ಬದಲಿಸಿಕೊಂಡಿದ್ದು ಇದರಿಂದಾಗಿ ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿಯವರ ಈಗ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಗುತ್ತದೆ. ಈ ಸಿನಿಮಾ ಅಭಿನಯದಿಂದ ಕಿಚ್ಚನ ರೇಂಜೇ ಬದಲಾಗಿದ್ದು ತದನಂತರ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಬಾಲಿವುಡ್ ಹೀಗೆ ಎಲ್ಲಾ ಚಿತ್ರರಂಗದಲ್ಲೂ ಕೂಡ ಸುದೀಪ್ ರವರಿಗೆ ಅದೃಷ್ಟ ಬಾಗಿಲು ತೆಗೆಯುತ್ತದೆ.

ನೋಡನೋಡುತ್ತಲೇ ಸೂಪರ್ ಸ್ಟಾರ್ ಆಗಿ ಬಿಟ್ಟ ಕಿಚ್ಚ ನಟನೆಯ ಜೊತೆಗೆ ವೀರ ಮದಕರಿ ಕೆಂಪೇಗೌಡ ಮಾಣಿಕ್ಯ ಹೀಗೆ ಸಾಲು ಸಾಲು ಸಿನಿಮಾಗಳನ್ನ ನಿರ್ದೇಶನ ಕೂಡ ಮಾಡಿದ್ದು ನಟನಾಗಿ ನಿರ್ದೇಶಕನಾಗಿ ನಿರ್ಮಾಪಕನಾಗಿ ಗಾಯಕನಾಗಿ ಇದೀಗ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟರಾಗಿದ್ದಾರೆ. ಇನ್ನು ಪ್ರಿಯ ಎಂಬುವರನ್ನು ಪ್ರೀತಿಸಿ ಸುಖದಾಂಪತ್ಯ ನಡೆಸುತ್ತಿರುವ ಕಿಚ್ಚ ದಂಪತಿಗೆ ಸಾನ್ವಿ ಎಂಬ ಮಗಳಿದ್ದಾಳೆ. ಸದ್ಯ ಇದೀಗ ಸಾನ್ವಿ ಯವರು ನೆಪೋಟಿಸಂ ಬಗ್ಗೆ ಧ್ವನಿ ಎತ್ತಿದ್ದಾರೆ.

Courtesy: Filmbeat

ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ನೆಪೋಟಿಸಂ ಬಗ್ಗೆ ಚರ್ಚೆ ನಡೆಯುತ್ತಲೇ ಇದ್ದು ಕೆಲವು ಸ್ಟಾರ್ ಮಕ್ಕಳು ನೆಪೋಟಿಸಂ ವಿರುದ್ಧ ನಡೆದ ಅಭಿಯಾನದಿಂದ ಬಾರಿ ಟೀಕೆಗೆ ಒಳಗಾಗಿದ್ದಾರೆ. ಹೌದು ಕೆಲ ಸ್ಟಾರ್ ಮಕ್ಕಳು ಈ ಟೀಕೆಗಳ ವಿರುದ್ಧ ತಿರುಗಿಬಿದ್ದಿದ್ದು ಇನ್ನು ಕೆಲವರು ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಇದೀಗ ಇದೇ ನೆಪೋಟಿಸಂ ವಿಚಾರವಾಗಿ ಸುದೀಪ್ ಪುತ್ರಿ ಸಾನ್ವಿ ಮನಬಿಚ್ಚಿ ಮಾತಾಡಿದ್ದು ಸೋಶಿಯಲ್‌ ಮೀಡಿಯಾದಲ್ಲಿ ಸಾನ್ವಿಗೆ ಕೇಳಿದ ಪ್ರಶ್ನೆಗಳಿಗೆ ನೇರವಾಗಿ ಉತ್ತರ ಕೊಟ್ಟಿದ್ದಾರೆ.

ಇನ್ನು ಅದೇ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಿಚ್ಚ ಸುದೀಪ್ ರವರು ಮುದ್ದಿನ ಮಗಳು ಸ್ವಾನ್ವಿ. ಅವರಿಗೂ ಕೂಡ ಅಷ್ಟೇ ಸುದೀಪ್ ಅಂದರೆ ಅಷ್ಟೇ ಪ್ರೀತಿ. ಅಪ್ಪನ ಸಿನಿಮಾಗಳ ಬಗ್ಗೆ ನೇರಾ ನೇರ ಕಮೆಂಟ್ ಮಾಡುವ ಸಾನ್ವಿಯ ಈ ಗುಣ ಸುದೀಪ್‌ಗೂ ಇಷ್ಟ. ಸದ್ಯ ಸಾನ್ವಿಯ ವಿದ್ಯಾಭ್ಯಾಸ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು ಅದಕ್ಕೆ ಸುದೀಪ್ ಬಿಡುವು ಸಿಕ್ಕಾಗಲೆಲ್ಲಾ ಹೈದರಾಬಾದ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದು ಈ ವೇಳೆ ಇನ್‌ಸ್ಟಾಗ್ರಾಂನಲ್ಲಿ ಜನರು ಕಿಚ್ಚ ಸುದೀಪ್ ಪುತ್ರಿ ಸ್ವಾನಿ ನೆಪೋಟಿಸಂ ಬಗ್ಗೆ ಪ್ರಶ್ನೆ ಮಾಡಿದ್ದರು. ಹೌದು ಅದಕ್ಕೆ ದ್ವೇಷ ಮಾಡಬೇಕು ಅಂತ ಉತ್ತರ ಕೊಟ್ಟಿದ್ದಾರೆ.

ಸುದೀಪ್ ರವರ ಪುತ್ರಿ ಸಾನ್ವಿಗೆ ಜನರು ನೆಪೋಟಿಸಂ ಬಗ್ಗೆ ಪ್ರಶ್ನೆ ಮಾಡಿದ್ದು ಅದಕ್ಕೆ ನೇರವಾಗಿ ಸರಳವಾಗಿ ಕೊಟ್ಟ ಉತ್ತರ ಹೀಗಿದೆ. ಸೆಲೆಬ್ರೆಟಿಗಳ ಮಕ್ಕಳನ್ನು ಅವರ ಹಿನ್ನೆಲೆಯ ಕಾರಣಕ್ಕೆ ದ್ವೇಷ ಮಾಡುವುದು ತುಂಬಾ ನೋವಿನ ವಿಷಯ. ಇದು ಅವರ ತಪ್ಪಲ್ಲ. ಅವರನ್ನು ದ್ವೇಷಿಸುವುದನ್ನು ನಿಲ್ಲಿಸಿ ಎಂದು ಸುದೀಪ್ ರವರ ಪುತ್ರಿ ಸ್ವಾನ್ವಿ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಸ್ವಾನಿ ನೆಪೋಟಿಸಂ ಅಂತಹ ಕಾಂಪ್ಲಿಕೇಟೆಡ್ ಮ್ಯಾಟರ್ ಬಗ್ಗೆ ನಿರ್ಭಯವಾಗಿ ಮಾತಾಡಿದ್ದಾರೆ.

ಇನ್ನು ಕಿಚ್ಚ ಸುದೀಪ್ ಪುತ್ರಿ ಸಾನ್ವಿ ವಿದ್ಯಾಭ್ಯಾಸದ ಜೊತೆ ಫ್ರೀ ಟೈಮ್‌ನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಾರೆ. ಸಾನ್ವಿ ಪೇಂಟಿಂಗ್ ಹಾಡುಗಾರಿಕೆ ಎಲ್ಲದರಲ್ಲೂ ಮುಂದಿದ್ದು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾನ್ವಿ ಹಾಡುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದರು. ಹೌದು ಕಿಚ್ಚ ಸುದೀಪ್ ನಟಿಸಿದ್ದ ವಿಕ್ರಾಂತ್ ರೋಣ ಸಿನಿಮಾದ ತಣ್ಣನೆ ಬೀಸೋ ಗಾಳಿ ಹಾಡನ್ನು ಹಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.