Karnataka TImes
Trending Stories, Viral News, Gossips & Everything in Kannada

Amulya: ದಸರಾ ಸಂಭ್ರಮದಲ್ಲಿ ಕುಣಿದ ನಟಿ ಅಮೂಲ್ಯ …ವಿಡಿಯೋ ಚಿಂದಿ

ನಮ್ಮ ಚೆಂದನವನದಲ್ಲಿ ಒಂದು ಕಾಲದಲ್ಲಿ ಗೋಲ್ಡನ್ ಕ್ವೀನ್ ಎಂದೇ ಜನಪ್ರಿಯತೆ ಗಳಿಸಿ ಚಿತ್ರರಂಗದ ಬಹು ಬೇಡಿಕೆ ಹಾಗೂ ಪಡ್ಡೆ ಹುಡಗರ ರಾಣಿಯಾಗಿದ್ದವರು ಮುದ್ದು ಮುಖದ ನಟಿ ಅಮೂಲ್ಯರವರು. 2001 ರಲ್ಲಿ ವಿಷ್ಣುವರ್ಧನ್ ರವರ ಪರ್ವ ಎಂಬ ಸಿನಿಮಾದ ಮೂಲಕ ಬಾಲ ನಟಿಯಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟ ಇವರು ದರ್ಶನ್ ಅಭಿನಯದ ಲಾಲಿಹಾಡು ಅಪ್ಪು ಜೊತೆ ನಮ್ಮ ಬಸವ ಇನ್ನೂ ಮುಂತಾದ ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.

ತದನಂತರ 2007 ರಲ್ಲಿ ಎಸ್ ನಾರಾಯಣ್ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಎ್ಬ ಸಿನಿಮಾದಲ್ಲಿ ಕೇವಲ 13 ನೇ ವಯಸ್ಸಿನಲ್ಲಿರುವಾಗಲೇ ನಟಿಸಿದ ಅಮೂಲ್ಯ ಕರ್ನಾಟಕ ಸಿನಿ ರಸಿಕರ ಮನಸ್ಸನ್ನು ಕದಿಯುತ್ತಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಅಜಯ್ ರಾವ್ ಪ್ರೇಮ್ ಚಿರಂಜೀವಿ ಸರ್ಜಾ ಇನ್ನು ಮುಂತಾದ ಸ್ಟಾರ್ ನಟರ ಜೊತೆಗೆ ಕೂಡ ಅಮೂಲ್ಯ ನಾಯಕಿಯಾಗಿ ಮಿಂಚಿದ್ದು ಅಲ್ಪ ಅವಧಿಯಲ್ಲಿ ದೊಡ್ಡ ಹೆಸರನ್ನು ಕೂಡ ಸಂಪಾದಿಸಿದ್ದರು.

ಇನ್ನೂ ನಟಿ ಅಮೂಲ್ಯ ಅವರು ಗೋಲ್ಡನ್ ಸ್ಟಾರ್ ಗಣೇಶ್ ರವರ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದು ಇವರಿಬ್ಬರ ಜೋಡಿಯನ್ನು ಸಿನಿ ರಸಿಕರು ಬಹಳಾನೇ ಮೆಚ್ಚಿಕೊಂಡಿದ್ದರು. ಸೆಪ್ಟೆಂಬರ್ 14, 1993 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ನಟಿ ಅಮೂಲ್ಯ ರವರು ಚಿಕ್ಕಂದಿನಿಂದಲೂ ಬಹಳ ಚೂಟಿಯಾಗಿದ್ದರು. ಇವರ ತಂದೆ ಬ್ಯುಸಿನೆಸ್ ಮ್ಯಾನ್ ಆಗಿದ್ದು ಅನಾರೋಗ್ಯ ಸಮಸ್ಯೆಯಿಂದ 2009 ರಲ್ಲಿಯೇ ಇಹಲೋಕ ತ್ಯಜಿಸುತ್ತಾರೆ.

 

ಇನ್ನೂ ಅಮೂಲ್ಯ ಅವರ ಅಣ್ಣ ದೀಪಕ್ ಅರಸ್ ಅವರು ಮನಸಾಲಜಿ ಎಂಬ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದು ಅಮೂಲ್ಯ ರವರು ಚಿಕ್ಕಂದಿನಿಂದಲೂ ಜೂಡ ನಟನೆ ಮಾತ್ರವಲ್ಲ ಡ್ಯಾನ್ಸ್ ಕರಾಟೆ ಹೀಗೆ ಹಲವು ಚಟುವಟಿಕೆಗಳಲ್ಲಿ ಯಾವಾಗಲೂ ಮುಂದಿದ್ದರು. ಹೌದು ಅಷ್ಟೇ ಅಲ್ಲದೇ ನಟನೆಯಲ್ಲಿ ತೊಡಗಿಕೊಂಡೇ ಬಿಕಮ್ ಪದವಿಯನ್ನು ಕೂಡ ಮುಗಿಸುತ್ತಾರೆ. ತಮ್ಮೆಲ್ಲರಿಗೂ ತಿಳಿದಿರುವ ಹಾಗೆ 2017 ರಲ್ಲಿ ರಾಜಕಾರಣಿಯವರ ಜಗದೀಶ್ ಅವರ ಜೊತೆ ಅಮೂಲ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇದೀಗ ಅಮೂಲ್ಯ ಅವರು ತನ್ನ ಸಂಸಾರದ ಜವಾಬ್ದಾರಿ ಜೊತೆ ತನ್ನ ಪತಿಯ ರಾಜಕೀಯ ಕೆಲಸಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

9 ಚಿತ್ರಗಳಲ್ಲಿ ಬಾಲ ನಟಿಯಾಗಿ ನಟಿಸಿದ ಅಮೂಲ್ಯ ಅವರು ಸ್ಟಾರ್ ನಟಿಯಾಗಿ 14 ಚಿತ್ರಗಳಲ್ಲಿ ನಟಿಸಿದ್ದು ಇವರ ಚೆಲುವಿನ ಚಿತ್ತಾರ ಸಿನಿಮಾದಲ್ಲಿನ ಅತ್ಯುತ್ತಮ ನಟನೆಗೆ ಉದಯ ಅವಾರ್ಡ್ ಅನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಮದುವೆಯ ನಂತರ ಅಮೂಲ್ಯ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಲಿಲ್ಲ ಅತಿ ಹೆಚ್ಚು ರಾಜಕೀಯ ಕೆಲಸಗಳಲ್ಲಿ ನಿರತರಾಗಿದ್ದಾರೆ. ಸದ್ಯ ಇದೀಗ ನಟಿ ಅಮೂಲ್ಯ ರವರಿಗೆ ಅವಳಿ ಮಕ್ಕಳು ಜನಿಸಿದ್ದು ಮಕ್ಕಳ ಹಾರೈಕೆಯಲ್ಲಿ ಬಹಳಾನೇ ಬ್ಯೂಸಿಯಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ವಿಚಾರದಿಂದ ಸುದ್ದಿಯಲ್ಲಿರುವ ಅಮೂಲ್ಯ ರವರು ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು ಸೈಮಾ ಅವಾರ್ಡ್ ನಲ್ಲಿ ಅಪ್ಪು ಎದುರು ಎಷ್ಟು ಅದ್ಬುತವಾಗಿ ಕುಣಿದಿದ್ದಾರೆ ನೀವೆ ನೋಡಿ.