Karnataka TImes
Trending Stories, Viral News, Gossips & Everything in Kannada

Vamshika: ಅನುಶ್ರಿಗಿಂತ ದುಪ್ಪಟ್ಟು ಸಂಭಾವನೆ ಪಡೆದು ಹೊಸ ಕೆಲಸ ಗಿಟ್ಟಿಸಿಕೊಂಡ ವಂಶಿಕ

ಸದ್ಯ ಕಿರುತೆರೆ ಲೋಕದ ರಿಯಾಲಿಟಿ ಶೋಗಳು ಅಥವಾ ಯಾವುದೇ ಸಿನಿಮಾ ಈವೆಂಟ್ ಗಳನ್ನು ನಡೆಸಿಕೊಡಲು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂದು ಸಿನಿಮಾ ತಜ್ಞರನ್ನು ಕೇಳಿದರೆ ಅವರಿಂದ ಬರುವ ಮೊದಲ ಉತ್ತರ ಆ್ಯಂಕರ್ ಅನುಶ್ರೀ. ಹೌದು ಸದ್ಯ ಇದೀಗ ಕನ್ನಡ ಕಿರುತೆರೆ ಲೋಕದಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿರುವ ನಟಿ ನಿರೂಪಕಿ ಅನುಶ್ರೀ ಅವರು ಕಳೆದ ಒಂದು ದಶಕ ಗಳಿಂದಲೂ ಕೂಡ ಏಕವಾಹಿನಿಯಲ್ಲಿ ಪರ್ಮನೆಂಟ್ ನಿರೂಪಕಿಯಾಗಿದ್ದಾರೆ. ಬಹುಶಃ ಇದು ದಾಖಲೆಯೂ ಹೌದು.

ಜೀ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋ ಗಳನ್ನು ನಡೆಸಿ ಕೊಡುವ ಅನುಶ್ರೀ ಕನ್ನಡ ಕಿರುತೆರೆಯ ನಂಬರ್ ವನ್ ನಿರೂಪಕಿಯಾಗಿದ್ದು ಬಹುಶಃ ಈ ರಿಯಾಲಿಟಿ ಶೋಗಳಲ್ಲಿ ಅನುಶ್ರೀ ಅವರನ್ನು ಬಿಟ್ಟು ಬೇರೆ ಯಾರು ಬಂದರೂ ಕೂಡ ಜನರು ಅವರನ್ನು ಒಪ್ಪುವುದು ಬಹಳ ಕಷ್ಟವೇ. ಇನ್ನೂ ಜೀ ಜಾತ್ರೆ ಸೇರಿದಂತೆ ದೊಡ್ಡ ದೊಡ್ಡ ಸಿನಿಮಾ ಈವೆಂಟ್ ಗಳನ್ನು ಕೂಡ ನಡೆಸಿಕೊಡುವ ಆಂಕರ್ ಅನುಶ್ರೀ ಯವರು ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದು ಲಕ್ಷ ಲಕ್ಷ ಹಣವನ್ನು ಕೂಡ ಸಂಪಾದನೆ ಮಾಡುತ್ತಿದ್ದಾರೆ.

ಇನ್ನು ಇದರ ಜೊತೆಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಕೂಡ ತೆರೆದಿರುವ ಆಂಕರ್ ಅನುಶ್ರೀ ಚಿಟ್ ಚಾಟ್ ಶೋಗಳಿಂದ ನಡೆಸಿಕೊಡುತ್ತಿದ್ದು ಈ ಶೋನಲ್ಲಿ ಸಿಲ ಸೆಲೆಬ್ರಿಟಿಗಳನ್ನು ಕರೆಸಿ ಸಿನಿಮಾದ ಪ್ರಮೋಷನ್ ಗಳ ಜೊತೆ ಅವರ ವ್ಯಕ್ತಿಕವಾದ ಕೆಲವು ವಿಚಾರಗಳನ್ನು ತೆರೆದಿಡುತ್ತಾರೆ. ಹೀಗೆ ದಶಕಗಳಿಗಿಂತ ಹೆಚ್ಚಿನ ಸಮಯದಿಂದ ಕರುನಾಡ ಮನೆ ಮಾತಾಗಿರುವ ಅನುಶ್ರೀ ಇಂದು ಈ ಮಟ್ಟದಲ್ಲಿ ಬೆಳೆದು ನಿಂತಿದ್ದಾರೆ ಎಂದರೆ ಅದಕ್ಕೆ ಅವರ ಪರಿಶ್ರಮವೇ ಕಾರಣ.

vanshika,vamshika,vanshika gicha gili gili,vanshika interview,vamshika master,vamshika master anand in dharmasthala,vamshika interview,vamshika mother acting,vamshika gicha gili gili

ಹೌದು ಮೂಲತಃ ಮಂಗಳೂರಿನವರಾದ ಅನುಶ್ರೀ ಅವರಿಗೆ ತಾಯಿ ಹಾಗೂ ಓರ್ವ ತಮ್ಮನಿದ್ದು ಚಿಕ್ಕ ವಯಸ್ಸಿನಲ್ಲಿಯೇ ತಂದೆ ಮನೆ ಬಿಟ್ಟು ಹೋದ ಕಾರಣ ಸಂಸಾರದ ಜವಾಬ್ಧಾರಿ ಅನುಶ್ರೀ ಅವರ ಹೆಗಲ ಮೇಲೆ ಬೀಳುತ್ತದೆ. ಆ ಸಮಯದಲ್ಲಿ ಯಾವುದೇ ಯೋಚನೆ ಮಾಡದೆ ತಮ್ಮ ತಾಯಿ ಹಾಗೂ ತಮ್ಮನನ್ನು ಸಾಕಲೇಬೇಕು ಎಂದು ದೃಢಸಂಕಲ್ಪ ಮಾಡಿದ ಅನುಶ್ರೀ ಕಾಲೇಜಿನಲ್ಲಿ ನಡೆಯುತ್ತಿದ್ದಂತಹ ಕೆಲವು ಇವೆಂಟ್ ಗಳನ್ನ ನಿರೂಪಣೆ ಮಾಡುತ್ತಿದ್ದರು.

ಅವರ ಮಾತಿನ ಶೈಲಿಯನ್ನು ಗಮನಿಸಿದ ಲೋಕಲ್ ಚಾನೆಲ್ ಒಂದು ಅನುಶ್ರೀಅವರಿಗೆ ನಿರೂಪಣೆ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿತು ಹೀಗೆ ತಮ್ಮ ನಿರೂಪಣೆ ಜೀವನವನ್ನು ಪ್ರಾರಂಭಿಸಿದ ಅನುಶ್ರೀ ನಂತರ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸುತ್ತಾರೆ. ಆದರೆ ಅಲ್ಲಿ ಅವರ ಜೀವನ ಹೇಳಿಕೊಳ್ಳುವಷ್ಟು ಸುಲಭವಾಗಿರಲಿಲ್ಲ ಬಹಳ ಕಷ್ಟಪಟ್ಟು ಒಂದೊಂದು ಮೆಟ್ಟಿಲನ್ನು ಏರುತ್ತಾ ಬಂದ ಅನುಶ್ರೀ ಮೊದಲ ಬಾರಿಗೆ ನಿರೂಪಣೆಯಲ್ಲಿ ಪಡೆದುಕೊಂಡ ಸಂಬಳ ಇನ್ನೂರ ಐವತ್ತು ರೂ. ಸದ್ಯ ಇದೀಗ ಅನುಶ್ರೀ ಒಂದು ಸಂಚಿಕೆಯ ನಿರೂಪಣೆ ಮಾಡುವುದಕ್ಕೆ ಲಕ್ಷ ಲಕ್ಷ ಸಂಭಾವನೆ ಪಡೆದುಕೊಳ್ಳುತ್ತಿದ್ದು ನಿಜಕ್ಕೂ ಇದು ಅನೇಕ ಹೆಣ್ಣುಮಕ್ಕಳಿಗೆ ಮಾದರಿ ಅಂತಾನೇ ಹೇಳಬಹುದು.

ಆದರೆ ಈಗ ಅನುಶ್ರೀ ಅವರನ್ನೆ ಮೀರಿಸಿದ್ದಾರೆ ಕನ್ನಡದ ಹೊಸ ನಿರೂಪಕಿ. ಅವರು ಯಾರು ಗೊತ್ತಾ? ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿ ಎಲ್ಲರ ಮನಗೆದ್ದಿರುವ ಮುದ್ದು ಬೊಂಬೆ ಅಂದರೆ ಅದರು Vamshika  ಅಂಜನಿ ಕಶ್ಯಪ. ನನ್ನಮ್ಮ ಸೂಪರ್ ಸ್ಟಾರ್ ಶೋ ಮೂಲಕ ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ದಂಪತಿಯ ಈ ಮುದ್ದು ಮಗಳು ಕಿರುತೆರೆಗೆ ಎಂಟ್ರಿ ಕೊಟ್ಟು ಇಂದು ಮನೆಮಾತಾಗಿದ್ದಾಳೆ. ಅದರಲ್ಲೂ ವಂಶೀಕಳಾ ಪಟಪಟ ಮಾತುಗಳನ್ನ ಕೇಳಿ ಎಂಜಾಯ್ ಮಾಡದೆ ಇರುವವರು ಸಾಧ್ಯವಿಲ್ಲ. ನನ್ನಮ್ಮ ಸೂಪರ್ ಸ್ಟಾರ್ ಶೋನ ವಿಜೇತಳಾದಳು ಆಗಿದ್ದಾಳೆ ವಂಶಿಕಾ.

ಇದರ ಜತೆಗೆ ಗೆಜ್ಜೆಯ ಗಿಲಿಗಿಲಿ ಎಂಬ ಕಾರ್ಯಕ್ರಮದಲ್ಲೂ ಕೂಡ ಕಾಣಿಸಿಕೊಂಡ ವಂಶಿಕ ತನ್ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಳು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಹ ವಂಶಿಕಾ ಹವಾ ಯಾರಿಗಿಂತ ಕಡಿಮೆ ಇಲ್ಲ. ಇದೀಗ Vamshika  ರಿಯಾಲಿಟಿ ಶೋ ನಿರೂಪಣೆ ಕೂಡ ಮಾಡಲಿದ್ದಾಳೆ ಎಂದು ಪ್ರೊಮೊಗಳ ಮೂಲಕ ನಿರೀಕ್ಷಿಸಲಾಗಿದ್ದು ವಂಶಿಕಾ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಶೋ ನಿರೂಪಣೆ ಮಾಡುತ್ತಿದ್ದು ಈ ಶೋ ನಿರೂಪಣೆಗೆ ಅನುಶ್ರೀ ಅವರನ್ನು ಮೀರಿಸುವಷ್ಟು ಸಂಭಾವನೆ ಪಡೆಯುತ್ತಿದ್ದಾಳೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಹೌದು ಒಂದು ಎಪಿಸೋಡ್ ಗೆ ಬರೋಬ್ಬರಿ 1.8 ಲಕ್ಷ ರೂಪಾಯಿ ಸಂಭಾವನೆಯನ್ನು ವಂಶಸ್ಥರಿಗೆ ನೀಡಲಾಗುತ್ತಿದ್ದು ಇದು ಅನುಶ್ರೀ ಅವರಿಗಿಂತ ಹೆಚ್ಚಿನ ಸಂಭಾವನೆ ಆಗಿದೆ.