Karnataka TImes
Trending Stories, Viral News, Gossips & Everything in Kannada

ಪತ್ನಿ ಜ್ಯೋತಿಕಾ ಜೊತೆ ತಮಿಳು ನಟ ಸೂರ್ಯ ಸೆಲ್ಫಿ…ಚಿಂದಿ ವಿಡಿಯೋ

Surya And Jyothika Cute Visuals At Siima Awards 2022: ಖ್ಯಾತ ನಟ ಸರವಣನ್ ಶಿವಕುಮಾರ್ ಅಂದರೆ ಖಂಡಿತವಾಗಿಯೂ ಯಾರಿಗೂ ಕೂಡ ಗೊತ್ತಾಗುವುದಿಲ್ಲ. ಆದರೆ ತಮಿಳು ನಟ ಸೂರ್ಯ ಅಂದರೆ ಕೇವಲ ಕಾಲಿವುಡ್ ಮಾತ್ರವಲ್ಲ ದಕ್ಷಿಣ ಭಾರತೀಯ ಚಿತ್ರರಂಗದವರಿಗೆ ಈ ಹೆಸರು ಚಿರಪರಿಚಿತ. ಹೌದು ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟ ಸೂರ್ಯ.
ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟ ಸೂರ್ಯ ರವರು ಸಿನಿಮಾ ಹೊರತಾಗಿ ಸರಳತೆ ಹಾಗೂ ಸೌಮ್ಯ ಸ್ವಭಾವದ ಮೂಲಕವಾಗಿ ಚಿತ್ರಪ್ರಿಯರ ಹೃದಯಗೆದ್ದಿದ್ದಾರೆ.

ಇನ್ನು ತಮಿಳಿನ ಖ್ಯಾತ ನಟ ಶಿವಕುಮರ್ ಪುತ್ರ ಸೂರ್ಯ. 1997ರಿಂದ ಬಣ್ಣದ ಲೋಕದ ಪಯಣ ಪ್ರಾರಂಭಿಸಿರುವ ಸೂರ್ಯ ಇಂದು ಸ್ಟಾರ್ ನಟನಾಗಿ ಖ್ಯಾತಿಗಳಿಸಿದ್ದಾರೆ.ಸೂರ್ಯ ಚಿತ್ರರಂಗದಲ್ಲಿ ಸ್ಟಾರ್ ಆಗಿ ಗುರುತಿಸಿಕೊಳ್ಳುವ ಮೊದಲೇ ಖ್ಯಾತ ನಟಿಯಾಗಿ ಮೆರೆಯುತ್ತಿದ್ದ ಜ್ಯೋತಿಕಾ ಅವರ ಪ್ರೀತಿಯ ಬಲೆಯಲ್ಲಿ ಸಿಲುಕಿಕೊಳ್ಳುತ್ತಾರೆ.

ಹೌದು 1999ರಲ್ಲಿ ನಟ ಸೂರ್ಯ ಪುವೆಲ್ಲಂ ಕೇಟ್ಟುಪ್ಪರ್ ಸಿನಿಮಾ ಸೆಟ್ ನಲ್ಲಿ ಮೊದಲ ಬಾರಿಗೆ ನಟಿ ಜೋತಿಕಾ ಅವರನ್ನು ಭೇಟಿಯಾಗಿದ್ದು ಈ ಸಿನಿಮಾ ಸೂರ್ಯ ಅಭಿನಯದ 5ನೇ ಸಿನಿಮಾ. ಜ್ಯೋತಿಕಾಗಿ 3ನೇ ಸಿನಿಮಾ. ಆ ಸಿನಿಮಾ ಮಾಡುವಾಗ ಇಬ್ಬರು ಸಹ ಇನ್ನೂ ಸ್ಟಾರ್ ಆಗಿ ಹೊರಹೊಮ್ಮಲಿಲ್ಲ. ಹೌದು ನಟಿ ಜ್ಯೋತಿಕಾ ಮುಂಬೈ ಮೂಲದವರಾಗಿದ್ದರಿಂದ ತಮಿಳಿಗೆ ಬರುತ್ತಿರಲಿಲ್ಲ.

ಇನ್ನು ಜ್ಯೋತಿಕಾ ಕಷ್ಟಪಟ್ಟು ತಮಿಳು ಕಲಿಯುತ್ತಿದ್ದು ಜ್ಯೋತಿಕಾ ಆಗಿನ್ನು ತಮಿಳು ಕಲಿಯುತ್ತಿದ್ದರೂ ಸ್ಪಷ್ಟವಾಗಿ ಡೈಲಾಗ್ ಹೇಳುವ ರೀತಿಗೆ ಸೂರ್ಯ ಫಿದಾ ಆಗಿದ್ದರು. ಇನ್ನು ಪುವೆಲ್ಲಂ ಕೇಟ್ಟುಪ್ಪರ್ ಸಿನಿಮಾ ಬಳಿಕ ಜ್ಯೋತಿಕಾ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಾರೆ. ಹೌದು ತಮಿಳು ಚಿತ್ರರಂಗದಲ್ಲಿ ಜ್ಯೋತಿಕಾ ಸ್ಟಾರ್ ನಟಿಯಾಗಿ ಗುರುತಿಕೊಳ್ಳುತ್ತಾರೆ. ಜ್ಯೋತಿಕಾ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದ ವೇಳೆ ಸೂರ್ಯ ಹಾದು ಹೋಗುತ್ತಾರೆ. ಆಗ ಜ್ಯೋತಿಕಾ ಸಹಚರರನ್ನು ಕಳುಹಿಸಿ ಸೂರ್ಯರನ್ನು ಕರೆಸಿಕೊಳ್ಳುತ್ತಾರೆ. ಹೌದು ತದ ನಂತರ ಇಬ್ಬರು ಉತ್ತಮ ಸ್ನೇಹಿತರಾಗುತ್ತಾರೆ. ಇನ್ನು ಅಲ್ಲಿಂದ ಪ್ರಾರಂಭವಾದ ಇಬ್ಬರ ಸ್ನೇಹ ನಂತರ ಪ್ರೀತಿಗೆ ತಿರುಗುತ್ತೆ.

ಕೊನೆಗೆ ಇಬ್ಬರು 2006 ಸೆಪ್ಟಂಬರ್ ನಲ್ಲಿ ಹಸೆಮಣೆ ಏರುತ್ತಾರೆ. ಚೆನೈನ ಪಾರ್ಕ್ ಶರಟನ್ ಹೋಟೆಲ್ ನಲ್ಲಿ ಇಬ್ಬರು ಹಸೆಮಣೆ ಏರುತ್ತಾರೆ. ಹೌದು ಸರಳವಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇಬ್ಬರ ಮದುವೆಗೆ ಚಿತ್ರರಂಗದ ಗಣ್ಯರು ಬರದಿದ್ದು ಕೆಲವು ರಾಜಕೀಯ ಗಣ್ಯರು ಹಾಜರಾಗಿ ಆಶೀರ್ವಾದ ಮಾಡುತ್ತಾರೆ. ಇನ್ನು ಮದುವೆ ಬಳಿಕ ಜ್ಯೋತಿಕಾ ಅಭಿನಯಕ್ಕೆ ಗುಡ್ ಬೈ ಹೇಳುತ್ತಾರೆ. ಮುಂಬೈನಿಂದ ನಂತರ ಚೆನ್ನೈಗೆ ಸ್ಥಳಾಂತರ ಆಗುತ್ತಾರೆ.

ಇಬ್ಬರು ತಮಿಳಿನ ಖ್ಯಾತ ತಾರಾ ಜೋಡಿಯಾಗಿ ಇತರರಿಗೆ ಮಾದರಿಯಾಗಿದೆ. ಈ ಮುದ್ದಾದ ಜೋಡಿಗೆ ದಿಯಾ ಮತ್ತು ದೇವ್ ಇಬ್ಬರು ಮಕ್ಕಳಿದ್ದು ಸೂರ್ಯ ಸದ್ಯ ಸೂರರೈ ಪೊಟ್ರು ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದರು. ಗ್ಯಾಪ್ ನಂತರ ಜ್ಯೋತಿಕಾ 2015ರಲ್ಲಿ 36 ವಯದಿನಿಲೆ ಸಿನಿಮಾ ಮೂಲಕ ಮತ್ತೆ ಬಣ್ಣಹಚ್ಚುತ್ತಾರೆ. ಸದ್ಯ ಇದೀಗ ಜೋಡಿಯ ಕ್ಯೂಟ್ ವಿಡಿಯೋ ವೊಂದು ವೈರಲ್ ಆಗಿದ್ದು ಈ ಲೇಖನಿಯ ಕೆಳಗೆ ಇದನ್ನು ನೋಡಬಹುದು.