Karnataka TImes
Trending Stories, Viral News, Gossips & Everything in Kannada

ಮಗು ಜೊತೆ ತಮಾಷೆ ಮಾಡಿದ ಅಪ್ಪು ಅಶ್ವಿನಿ…ಹಳೆ ವಿಡಿಯೋ ನೋಡಿ ಚಿಂದಿ

Power Star PuneethRajkumar and Ashwini PuneethRajkumar old Photo Viral: ನಮ್ಮ ಕನ್ನಡ ಚಿತ್ರರಂಗ ಮುತ್ತು ಹಾಗೂ ಪವರ್ ಸ್ಟಾರ್ ಡಾ ಪುನೀತ್ ರಾಜ್‌ಕುಮಾರ್ ಅಗಲಿ ಈಗಾಗಲೇ ಒಂದು ವರ್ಷ ಕಳೆದಿದ್ದು ಏನಿದು ಅದಾಗಲೇ ಅಪ್ಪು ಇಲ್ಲದೆ 365 ದಿನ ಆಯ್ತಾ? ಯಾರಿಂದಲ್ಲೂ ಕೂಡ ನಂಬಲು ಆಗುತ್ತಿಲ್ಲ. ಗಂಧದ ಗುಡಿ ಸಿನಿಮಾ ಬಿಡುಗಡೆ ಆಗಿರುವ ಕಾರಣ ಸಿನಿಮಾ ಪ್ರಚಾರ ಮಾಡುತ್ತಿದ್ದು ಇಲ್ಲೇ ಎಲ್ಲೋ ಹೋಗಿದ್ದಾರೆ ವಿದೇಶದಲ್ಲಿ ಇದ್ದಾರೆ ಅನ್ನುವ ಭಾವನೆಯಲ್ಲಿ ಅಭಿಮಾನಿಗಳು ದಿನ ಸಾಗಿಸುತ್ತಿದ್ದಾರೆ. ಇನ್ನು ಗಂಧದ ಗುಡಿ ಬಿಡುಗಡೆಯಾಗಿದೆ ಅನ್ನೋ ಸಂಭ್ರಮದಲ್ಲಿ ಮುಳುಗಬೇಕಾ ಅಥವಾ ಅವರಿಲ್ಲದೆ ಒಂದು ವರ್ಷ ಅನ್ನೋ ಬೇಸರ ಪಡಬೇಕಾ ಎಂಬುದು ಗೊತ್ತಾಗುತ್ತಿಲ್ಲ.

ಇನ್ನು ರಾಜ್ಯಾದ್ಯಂತ ಮಕ್ಕಳುಗಳು ಅಪ್ಪು ಸ್ಮರಣೆ ಮಾಡಿದ್ದಾರೆ.
ಇನ್ನು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಮಲ್ಲಾಪುರ ಗ್ರಾಮ ಸರ್ಕಾರಿ ಶಾಲೆಯಲ್ಲಿ ಅಪ್ಪು ಪುಣ್ಯಸ್ಮರಣೆ ಕಾರ್ಯಕ್ರಮ ನಡೆದಿದ್ದು ಇತಿಹಾಸದಲ್ಲಿ ಮೊದಲ ಬಾರಿಗೆ ಓರ್ವ ನಟನ ಪುಣ್ಯಸ್ಮರಣೆ ಮಾಡಿದ ಶಾಲೆ ಇದು. ಈ ಶಾಲೆ ಏಳಿಗೆ ಬಗ್ಗೆ ಚಿಂತಿಸಿ ಅಪ್ಪು ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದರು ಎನ್ನಲಾಗಿದ್ದು ಹೀಗಾಗಿ ಅಪ್ಪು ಭಾವ ಚಿತ್ರಕ್ಕೆ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದ್ದಾರೆ.

ಹೌದು ಅಪ್ಪು ಕೊನೆಯ ಸಿನಿಮಾ ಜೇಮ್ಸ್‌ ಚಿತ್ರೀಕರಣ ಮಾಡುವಾಗ ಈ ಶಾಲೆಗೆ ಭೇಟಿ ಕಟ್ಟು ಬಡ ಮಕ್ಕಳ ಕಲಿಕೆಗೆ ತೊಂದರೆ ಆಗಬಾರದು ಎಂದು ಎರಡು ಸ್ಮಾರ್ಟ್‌ ಕ್ಲಾಸ್ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇನ್ನು ಅಪ್ಪು ನೆನೆದು ಪ್ರತಿದಿನ ಕ್ಲಾಸ್ ಆರಂಭವಾಗುತ್ತದೆ. ಹೌದು ಕೊಪ್ಪಳ ನಗರದ ಬಸ್ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಅನ್ನ ಸಂತರ್ಪಣೆ ನಡೆಸಿದ್ದಾರೆ. 1 ಕ್ವಿಂಟಲ್ ಬಗರಖಾನ್ ದಾಲ್ ಚಾ ಮಾಡಿಸಿದ್ದಾರೆ ಅಭಿಮಾನಿಗಳು.

ಮೈಸೂರು ಅಂದರೆ ಅಪ್ಪುಗೆ ತುಂಬಾನೇ ಇಷ್ಟ. ಹೌದು ದೇವರಾಜ ಮೊಹಲ್ಲಾ ವಿನೋಬಾ ರಸ್ತೆಯಲ್ಲಿ ಪುಣ್ಯ ಸ್ಮರಣೆ ಮಾಡಿದ್ದು ಅಪ್ಪು ಚಿತ್ರಕ್ಕೆ ಹೂವಿನ ಅಲಂಕಾರ ಮಾಡಿದ್ದು ಸಾವಿರಾರೂ ಮಂದಿ ಸೇರಿಕೊಂಡು ಪೂಜೆ ಸಲ್ಲಿಸಿದ್ದಾರೆ. ಇನ್ನು ಪುಣ್ಯ ಸ್ಮರಣೆ ಹಿನ್ನಲೆಯಲ್ಲಿ ಅನ್ನ ಸಂತರ್ಪಣೆ ಮಾಡಿದ್ದಾರೆ.

ಹುಬ್ಬಳ್ಲಿಯಲ್ಲಿರುವ ಚನ್ನಮ್ಮ ವೃತ್ತದಲ್ಲಿ ಅಪ್ಪು ಭಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದು ಫೋಟೊಗೆ ಬಾಡೂಟದ ನೈವೇದ್ಯ ಅರ್ಪಿಸಿದ್ದು ಆಗಮಿಸಿದ್ದ ಪ್ರತಿಯೊಬ್ಬರಿಗೂ ಸಸಿಗಳ ವಿತರಣೆ ಮಾಡಿದ್ದಾರೆ. ಹೌದು ಅಪ್ಪುಗೆ ಪ್ರೀಯವಾದ ಮಟನ್ ಕಬಾಬ್ ನೈವೇದ್ಯ ಇಡಲಾಗಿದ್ದು ಅಪ್ಪು ಹೆಸರಿನಲ್ಲಿ ಸಮಾಜ ಕಾರ್ಯ ಮಾಡಲು ಶುರು ಮಾಡಿದ್ದಾರೆ

ಇನ್ನು ಅಪ್ಪು ಮೊದಲನೇ ವರ್ಷದ ಪುಣ್ಯಸ್ಮರಣೆಯಲ್ಲಿ ಮಡಿಕೇರಿಯಲ್ಲಿ ಅಂಗಾಂಗ ದಾನ ನೇತ್ರದಾನ ಮತ್ತು ರಕ್ತದಾನ ಶಬಿರ ನಡೆಯುತ್ತಿದ್ದು 15 ಜನರಿಂದ ನೇತ್ರದಾನಕ್ಕೆ ಸಹಿ 20 ಕ್ಕೂ ಹೆಚ್ಚು ಜನರಿಂದ ರಕ್ತದಾನ ಮತ್ತು 6 ಜನರಿಂದ ದೇಹದಾನಕ್ಕೆ ಸಹಿ ಮಾಡಿಸಿದ್ದಾರೆ.

ಇನ್ನು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದಲ್ಲಿ ಡಾ.ಪುನೀತ್ ರಾಜಕುಮಾರ ಪುತ್ಥಳಿ ಅನಾವರಣ ಮಾಡಿದ್ದು ಅಪ್ಪು ಪುತ್ಥಳಿ ಅನಾವರಣಗೊಳಿಸಿದ ಶಾಸಕ ಶರಣಬಸಪ್ಪ ದರ್ಶನಾಪುರ. ಪುತ್ಥಳಿಗೆ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು ಜೊತೆ ಪುನೀತ್ ಸರ್ಕಲ್ ಉದ್ಘಾನೆ ಮಾಡಿದ್ದಾರೆ. ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ ಸೇರಿ ನೂರಾರು ಜನ ಭಾಗಿಯಾಗಿದ್ದರು. ಇನ್ನು ಈ ವಿಚಾರದ ಬಗ್ಗೆ ಮಾತನಾಡಲು ಒಂದು ಕಾರಣವಿದ್ದು ಈ ಲೇಖನಿಯ ಕೆಳಗಿರುವ ವಿಡಿಯೋದಲ್ಲಿ ಅಪ್ಪು ಪತ್ನಿ ಜೊತೆ ಹಾಗೂ ಮಕ್ಕಳ ಜೊತೆ ಹೇಗೆ ಕಾಲಕಳೆಯುತ್ತಿದ್ದರು ಎಂದು ನೋಡಬಹುದು.