Karnataka TImes
Trending Stories, Viral News, Gossips & Everything in Kannada

ಮಜಾ ಟಾಕೀಸ್ ಶ್ವೇತಾ ಚಂಗಪ್ಪ ಕೆನ್ನೆ ಕಚ್ಚಿದ ಮಗ….ಕ್ಯೂಟ್ ವಿಡಿಯೋ

shwetha changappa son: ಸದ್ಯ ಶ್ವೇತಾ ಚಂಗಪ್ಪ ರವರು ಕಿರುತೆರೆಯಲ್ಲಿ ಅಭಿನಯ ಡ್ಯಾನ್ಸ್​ ಹಾಗೂ ನಿರೂಪಣೆಯ ಮೂಲಕ ಛಾಪು ಮೂಡಿಸಿದ್ದು ಎಲ್ಲಾ ವಿಭಾಗದಲ್ಲಿ ಅವರು ಹೆಸರು ಮಾಡಿದ್ದಾರೆ. ಹೌದು ಕಲರ್ಸ್​ ಕನ್ನಡ ವಾಹಿನಿಯ ಮಜಾ ಟಾಕೀಸ್​ನಲ್ಲಿ ರಾಣಿಯಾಗಿ ಮೆರೆದ ನಟಿ ಸ್ವಲ್ಪ ತೆರೆಯ ಹಿಂದೆ ಸರಿದಿದ್ದು ಸಿನಿಮಾಗಳನ್ನು ಒಪ್ಪಿಕೊಂಡಿರುವ ಶ್ವೇತಾ ಚೆಂಗಪ್ಪ ಕಿರುತೆರೆಯಲ್ಲಿ ಕಾಣಿಸಿಕೊಂಡಿರಲಿಲ್ಲ.

ಆದರೆ ಸದ್ಯ ಇದೀಗ ಮರಳಿ ಬಂದಿದ್ದು ನಿರೂಪಣೆಯತ್ತ ಮುಖ ಮಾಡಿದ್ದಾರೆ. ಶ್ವೇತಾ ಚಂಗಪ್ಪ ರವರು ಸದ್ಯ ಜೀ ಕನ್ನಡ ವಾಹಿನಿಯ ಜೋಡಿ ನಂಬರ್ 1 ಮೂಲಕ ನಿರೂಪಣೆಗೆ ಬಂದಿದ್ದು ಅವರ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ. ಈಗಾಗಲೇ ಅವರ ನಿರೂಪಣೆ ನೋಡಿರುವವರಿಗೆ ಅವರ ಬಗ್ಗೆ ಗೊತ್ತಿರುತ್ತದೆ. ಹೌದು ಅವರು ನಿರೂಪಣೆ ಮಾಡುವ ಶೈಲಿ ಬಹಳಷ್ಟು ಜನರಿಗೆ ಇಷ್ಟ ಎನ್ನಬಹುದು.

ಇನ್ನು ಈ ಬಗ್ಗೆ ಶ್ವೇತಾ ಚೆಂಗಪ್ಪ ಕೂಡ ತಮ್ಮ ಸಾಮಾಜಿಕ ಜಾಲಾತಾಣದ ಖಾತೆಯಲ್ಲಿ ಹಂಚಿಕೊಂಡಿದ್ದು ಸಂತೋಷವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇನ್ನು ಮುದ್ದು ಮಗನ ತಾಯಿಯಾಗಿರುವ ಶ್ವೇತಾ ಚೆಂಗಪ್ಪ ತನ್ನ ಮುದ್ದಾದ ಮಗ ಜಿಯಾನ್​ ಅಯ್ಯಪ್ಪ ಜೊತೆ ಸಮಯ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಶ್ವೇತಾ ಆಗಾಗ ಮಗನ ಜೊತೆ ಇರುವ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ.

ಈಗಾಗಲೇ ಅನೇಕ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಶ್ವೇತಾ ಗಳಿಸಿದ್ದು ಸುಕನ್ಯಾ ಸುಮತಿ ಕಾದಂಬರಿ ಪುನರ್ಜನ್ಮ ಅರುಂಧತಿ ಗೆಜ್ಜೆನಾದ ಬಾ ನನ್ನ ಸಂಗೀತ ಸೇರಿದಂತೆ ವಿವಿಧ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಯಾರಿಗುಂಟು ಯಾರಿಗಿಲ್ಲ ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್ ರಿಯಾಲಿಟಿ ಶೋ ತಂಗಿಗಾಗಿ ಸೇರಿದಂತೆ ಕೆಲ ಚಲನಚಿತ್ರಗಳ ಮೂಲಕ ನಾಡಿನ ಮನೆಮಾತಾಗಿರುವ ಮುದ್ದುಮುಖದ ಗೃಹಿಣಿ ಎನ್ನಬಹುದು.

ಇನ್ನು ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ಚಂಗಪ್ಪ ಅವರು ತಮ್ಮ ಪುತ್ರ ಜಿಯಾನ್ ಸ್ಯಾಂಡಲ್‍ವುಡ್ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆಗೆ ಕಳೆದ ಮುದ್ದಾದ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ಹಂಚಿಕೊಂಡಿದ್ದರು. ಜಿಯಾನ್ ಸಾಮಾನ್ಯವಾಗಿ ಜನರ ಬಳಿಗೆ ಹೋಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾನೆ. ಹೌದು ಆದರೆ ರವಿ ಸರ್ ಜೊತೆ ತುಂಬಾ ಆರಾಮವಾಗಿದ್ದು ಅವರನ್ನು ರವಿ ಮಾಮ ಎಂದು ಕರೆದಿದ್ದಾನೆ.

ಜಿಯಾನ್ ಹುಟ್ಟಿದ ದಿನ ರವಿ ಸರ್ ಬಂದಿದ್ದರು ಈಗ 2 ವರ್ಷಗಳ ನಂತರ ಭೇಟಿಯಾಗಿದ್ದೇವೆ. ಜಿಯಾನ್‍ಗಾಗಿ ಚಾಕ್ಲೇಟ್‍ಗಳನ್ನು ತಂದಿದ್ದರು ಈ ವಿಶೇಷ ವೀಡಿಯೊವನ್ನು ಪೋಸ್ಟ್ ಮಾಡದೆ ಇರಲು ನನಗೆ ಸಾಧ್ಯವಾಗಲಿಲ್ಲ. ಸಮಯ ತೆಗೆದುಕೊಂಡು ಮನೆಗೆ ಬಂದು ಕೆಲವು ಸಮಯ ಕಳೆದಿದ್ದೀರಾ ರವಿ ಸರ್ ನಮ್ಮೆಲ್ಲರ ಪ್ರೀತಿ ಸದಾ ನಿಮ್ಮ ಮೇಲೆ ಇರುತ್ತದೆ ಎಂದು ಬರೆದುಕೊಂಡು ಮುದ್ದಾದ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ನಡುವೆ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ಮನೆಯಲ್ಲಿ ಮಗನ ಜೊತೆ ಶ್ವೇತಾ ಹೇಗಿರುತ್ತಾರೆ ನೀವೆ ನೋಡಿ.