ಕಳೆದ ನಾಲ್ಕು ತಿಂಗಳಿಂದ ಫಲಾನುಭವಿ ಗೃಹಿಣಿಯರಿಗೆ ರಾಜ್ಯ ಸರ್ಕಾರ, ಕೊಡುತ್ತಿರುವ ಗೃಹಲಕ್ಷ್ಮಿ ಯೋಜನೆ (Gruha Lakshmi Yojane) ಯ 2,000 ಖಾತೆಗೆ ಜಮಾ ಆಗಿಲ್ಲ. ಈ ಬಗ್ಗೆ ಸಾಕಷ್ಟು ಮಹಿಳೆಯರು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇದೀಗ ಗೃಹಿಣಿಯರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಜುಲೈ ಹಾಗೂ ಅಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ಸರ್ಕಾರ ತಿಳಿಸಿದೆ.
ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ!
ಜುಲೈ ಮತ್ತು ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆ (Gruha Lakshmi Yojane) ಯ ಹಣವನ್ನು ಇದೇ ಬರುವ ಅಕ್ಟೋಬರ್ 7 ಮತ್ತು 9ನೇ ತಾರೀಕಿನಂದು ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದಾರೆ.
ಇತ್ತೀಚಿಗೆ ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ ಆರಂಭವಾದ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದ ಸಚಿವೆ, ‘ತಾಂತ್ರಿಕ ದೋಷದಿಂದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರ ಖಾತೆಗೆ ಹಾಕಲು ವಿಳಂಬವಾಗಿದೆ. ಆದರೆ ಈ ತಿಂಗಳು ಫಲಾನುಭವಿಗಳ ಖಾತೆಗೆ ಎರಡು ತಿಂಗಳ ಹಣ 4,000 ಒಟ್ಟಿಗೆ ಜಮ ಆಗುವುದು’ ಎಂದು ತಿಳಿಸಿದ್ದಾರೆ.
‘ಪಟ್ಟು ಹಿಡಿದು ಗೃಹಲಕ್ಷ್ಮಿ ಯೋಜನೆ ಜಾರಿಗೆ ಬರುವಂತೆ ಮಾಡಿದ್ದೇನೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇ ಈ ಹೆಣ್ಣುಮಗಳು ತುಂಬಾ ಕಿಲಾಡಿ ಅವರೇ ಹಠ ಮಾಡಿ ಮಹಾಲಕ್ಷ್ಮಿ ಯೋಜನೆಯನ್ನು ಜಾರಿಗೆ ಬರುವಂತೆ ಮಾಡಿದ್ದಾರೆ ಎಂದು ನನ್ನ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಅದೇ ರೀತಿ ಕಷ್ಟಪಟ್ಟು ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಕೈ ಸೇರುವಂತೆ ಮಾಡಿದ್ದೇನೆ. ಮುಂದೆಯೂ ಈ ಯೋಜನೆಯ ಹಣ ಫಲಾನುಭವಿಗಳಿಗೆ ಸಿಗುತ್ತದೆ. ಯಾರು ಈ ಬಗ್ಗೆ ಆತಂಕ ಪಟ್ಟುಕೊಳ್ಳುವ ಅಗತ್ಯ ಇಲ್ಲ’ ಎಂಬುದಾಗಿಯೂ ಅವರು ತಿಳಿಸಿದರು.
‘ನವರಾತ್ರಿ ಹಬ್ಬಕ್ಕೆ ಹಣ ನಿಮ್ಮ ಕೈ ಸೇರಲಿದೆ. ಮಹಿಳೆಯರು ಹೋಳಿಗೆ ಊಟ ಮಾಡಿ ಖುಷಿಯಿಂದ ಇರಿ ಅದೇ ನನಗೆ ಸಂತೋಷದ ವಿಷಯ’ ಎಂದು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದರು. ಸಚಿವೆಯ ಈ ಮಾತಿಗೆ ಸಭೆಯಲ್ಲಿ ಇದ್ದ ಪ್ರತಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಗೃಹಿಣಿಯರು ನವರಾತ್ರಿಗೆ ನಾಲ್ಕು ಸಾವಿರ ರೂಪಾಯಿಗಳನ್ನು ಸರ್ಕಾರದಿಂದ ಪಡೆದುಕೊಳ್ಳಲಿದ್ದಾರೆ.