ಸಿಮೆಂಟ್ನ (Cement) ಬೇಡಿಕೆ ಹೆಚ್ಚಾಗುತ್ತಿದ್ದ ಹಾಗೆ ಬೆಲೆಯಲ್ಲಿಯೂ ಕೂಡ ಸಾಕಷ್ಟು ಏರಿಕೆ ಆಗಲಿದ್ದು ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡಿರುವವರಿಗೆ ಇದರಿಂದ ಹೆಚ್ಚು ನಷ್ಟ ಉಂಟಾಗಬಹುದು. FY25ನಲ್ಲಿ ಬೇಡಿಕೆಯು ಶೇಕಡ 5% ಹೆಚ್ಚಾಗುವ ನಿರೀಕ್ಷೆ ಇದೆ.
ಸದ್ಯ ಸಿಮೆಂಟ್ ಕಂಪನಿಗಳು ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಮುಂದಿನ ಆರ್ಥಿಕ ವರ್ಷದ ವೇಳೆಗೆ ಸಿಮೆಂಟ್ನ (Cement) ಬೇಡಿಕೆ ಹೆಚ್ಚಾಗುವುದರಿಂದ, ಸಿಮೆಂಟ್ ಕಂಪನಿಗಳು ಬೆಲೆ ಏರಿಕೆಯನ್ನು ಮಾಡಲಿವೆ ಇಂದು ವರದಿ ಆಗಿದೆ.
2025ರ ವೇಳೆಗೆ ಹೆಚ್ಚಾಗಿದೆ ಸಿಮೆಂಟ್ ಬೇಡಿಕೆ!
ಕೆಲವು ರಾಜಕೀಯ ನೀತಿಗಳು ಹಾಗೂ ಪ್ರಕೃತಿಯ ವಿಕೋಪದಿಂದಾಗಿ ಕಟ್ಟಡ ನಿರ್ಮಾಣ ಮೊದಲಾದ ಕಾರ್ಯಗಳು ವಿಳಂಬವಾಗಿವೆ. ಈ ಹಿನ್ನಲೆಯಲ್ಲಿ ಸಿಮೆಂಟ್ನ ಬೇಡಿಕೆ 5-6% ನಷ್ಟು ಇಳಿತವನ್ನು ಕಂಡಿತ್ತು. ಆದರೆ ಮುಂಬರುವ ದಿನಗಳಲ್ಲಿ ನಿರ್ಮಾಣ ಕಾರ್ಯ ಹೆಚ್ಚಾಗಲಿದ್ದು ಕನಿಷ್ಠ 2.7% ನಷ್ಟು ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ.
ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ 1.5% ನಷ್ಟು ಸಿಮೆಂಟ್ನ ಬೆಲೆಯಲ್ಲಿ ಇಳಿಕೆ ಕಂಡಿತ್ತು. ಆದರೆ ಬೇಡಿಕೆ ಹೆಚ್ಚಾದರೆ H2FY25 ನಲ್ಲಿ ಸಿಮೆಂಟ್ ಕಂಪನಿಗಳು (Cement Companies) ಉತ್ತಮ ಆದಾಯ ಗಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸೆಂಟ್ರಮ್ ವರದಿ ಮಾಡಿದೆ. ಅಗಸ್ಟ್ ನಿಂದು ಸೆಪ್ಟೆಂಬರ್ ವರೆಗೆ ಬೆಲೆ ಏರಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಸ್ವಲ್ಪ ಮಟ್ಟಿಗೆ ಬೇಡಿಕೆಯನ್ನು ನಿರೀಕ್ಷಿಸಿದ್ದೇವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.