ದೇಶದ ನಂಬರ್ ಒನ್ ಸ್ಕೂಟರ್ ಆಕ್ಟಿವಾ (Honda Activa) ವನ್ನು ಇನ್ನು ಮುಂದೆ ಸಿ ಎಸ್ ಡಿ ಮೂಲಕ ಖರೀದಿ ಮಾಡಬಹುದು. ಇದರಿಂದ ಗ್ರಾಹಕರಿಗೆ ಸಾಕಷ್ಟು ಹಣ ಉಳಿತಾಯವಾಗಲಿದೆ. ಸಿಎಸ್ಡಿ ಅಂದರೆ ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್ಮೆಂಟ್, ಸೈನಿಕರಿಗಾಗಿ ಈ ಕ್ಯಾಂಟೀನ್ ನ ಮೂಲಕ ಎಲ್ಲಾ ವಿವಿಧ ಮೋಟಾರ್ ಕಂಪನಿಗಳ ಬೈಕ್ ಸ್ಕೂಟರ್ ಮತ್ತು ಕಾರುಗಳು ಅತಿ ಕಡಿಮೆ ಬೆಲೆಗೆ ಲಭ್ಯವಿರುತ್ತದೆ.
CSD ಮೂಲಕ ಕಡಿಮೆ ಟ್ಯಾಕ್ಸ್ ಪೇ ಮಾಡಿ!
ದೇಶಕ್ಕಾಗಿ ಸೇವೆ ಸಲ್ಲಿಸುವ ಸೈನಿಕರಿಗಾಗಿ CSD ಯಲ್ಲಿ ಎಲ್ಲ ವಿಧದ ವಾಹನಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಉದಾಹರಣೆಗೆ 28%, ಬದಲಿಗೆ 14% GST ಪಾವತಿಸಿ ವಾಹನ ಖರೀದಿಸಬಹುದು.
ಹೋಂಡಾ ಆಕ್ಟಿವಾ ದ ಬೆಲೆ!
ಹೋಂಡಾ ಆಕ್ಟಿವಾ ದ STD ರೂಪಾಂತರದ ಬೆಲೆ (ಎಕ್ಸ್ ಶೋರೂಮ್ ಪ್ರಕಾರ) 76,684 ರೂಪಾಯಿಗಳು. ಇದೇ ಆಕ್ಟಿವಾ ವನ್ನು CSD ಎಕ್ಸ್ ಶೋ ರೂಮ್ ನಲ್ಲಿ ಖರೀದಿಸಿದರೆ 66,286 ರೂಪಾಯಿಗಳಿಗೆ ಲಭ್ಯವಿದೆ. ಅಂದರೆ ಬರೋಬ್ಬರಿ 10,398 ರೂಪಾಯಿಗಳಷ್ಟು ಅಗ್ಗವಾಗಲಿದೆ. ಹೋಂಡಾ ಆಕ್ಟಿವಾದಲ್ಲಿ ಎರಡು ರೂಪಾಂತರಗಳು ಲಭ್ಯವಿದ್ದು ಅವುಗಳ ಬೆಲೆಗಳನ್ನು ನೋಡೋಣ.
ಹೋಂಡಾ ಆಕ್ಟಿವಾ ಎಸ್ ಟಿ ಡಿ
- CSD ಎಕ್ಸ್ ಶೋರೂಮ್ ಬೆಲೆ 66,286 ರೂ.
- CSD ಆನ್ ರೋಡ್ ಪ್ರೈಸ್ – 81,733 ರೂ
ಹೋಂಡಾ ಆಕ್ಟಿವಾ DLX
- CSD ಎಕ್ಸ್ ಶೋರೂಮ್ ಬೆಲೆ – 68,504 ರೂ.
- CSD ಆನ್ ರೋಡ್ ಪ್ರೈಸ್ – 84 266 ರೂ.
ಹೋಂಡಾ ಆಕ್ಟಿವಾ ವಿಶೇಷತೆಗಳು!
ಸೈಲೆಂಟ್ ಸ್ಟಾರ್ಟ್ ಸಿಸ್ಟಮ್ ಅಳವಡಿಸಲಾಗಿದೆ. ಅಲಾಯಿ ವೀಲ್ಸ್ ಹೊಸ ಮಾದರಿಯಲ್ಲಿ ಕೊಡಲಾಗಿದೆ. ಜೊತೆಗೆ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಸಿಂಗಲ್ ರಿಯಲ್ ಸ್ಪ್ರಿಂಗ್ ಮತ್ತು ಎರಡು ಡ್ರಮ್ ಬ್ರೇಕ್ ಗಳನ್ನು ಕಾಣಬಹುದು. 109.5 cc ಎಂಜಿನ್, 7.73bhp ಮತ್ತು 8.9 nm ಟಾರ್ಕ್ ಉತ್ಪಾದಿಸಲಾಗುವುದು.
ಈ ಸ್ಕೂಟನಲ್ಲಿ ಸ್ಮಾರ್ಟ್ – ಕೀ ಬಳಕೆ ಮಾಡುವುದರಿಂದ ಎಷ್ಟೇ ದೊಡ್ಡ ಕ್ಯೂನಲ್ಲಿ ನಿಮ್ಮ ಸ್ಕೂಟರ್ ಇದ್ದರೂ ಕಂಡುಹಿಡಿಯುವುದು ಸುಲಭ ಒಟ್ಟಿನಲ್ಲಿ ಅತಿ ಕಡಿಮೆ ಬೆಲೆಗೆ ಹುಂಡೈ, ಆಕ್ಟಿವಾ ಕೊಂಡುಕೊಳ್ಳಲು ಪ್ಲಾನ್ ಮಾಡಿದ್ದರೆ ಇದು ಸಕಾಲ.