ಮಕ್ಕಳಿಂದ ಹಿಡಿದು ಮುದುಕರ ತನಕ ನಮ್ಮ ಭಾರತ ದೇಶದಲ್ಲಿ ಪ್ರತಿಯೊಬ್ಬರೂ ಕೂಡ ದೂರ ಪ್ರಯಾಣಕ್ಕಾಗಿ ಬಳಸುವಂತಹ ಮೂಲ ಸಾಧನ ಅಂದ್ರೆ ಅದು ರೈಲ್ವೆ ನೆಟ್ವರ್ಕ್. ಹೌದು ರೈಲ್ವೆ ಪ್ರಯಾಣವನ್ನೇ ನಂಬಿಕೊಂಡು ಪ್ರತಿದಿನ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಾರೆ. ರೈಲ್ವೆ ಇಲಾಖೆ ರೈಲ್ವೆ ಪ್ರಯಾಣಕ್ಕೆ ಸಂಬಂಧಪಟ್ಟಂತೆ ಅನೇಕ ನಿಯಮಗಳನ್ನು ಜಾರಿಗೆ ತಂದಿದೆ. ಅದರಲ್ಲೂ ವಿಶೇಷವಾಗಿ ಲೋವರ್ ಬರ್ತ್ ಸೀಟ್ (Lower Berth Seat) ಗಳಿಗೆ ಸಂಬಂಧಪಟ್ಟ ಹೊಸ ನಿಯಮಗಳು ಜಾರಿಗೆ ಬಂದಿವೆ.
IRCTC ತಿಳಿಸಿರುವ ಅಧಿಕೃತ ಮಾಹಿತಿಯ ಪ್ರಕಾರ, ಲೋವರ್ ಬರ್ತ್ ಸೀಟ್ (Lower Berth Seat) ಗಳನ್ನು ಹಿರಿಯ ನಾಗರಿಕರಿಗಾಗಿ ಕಾಯ್ದಿರಿಸಲು ಅಧಿಕೃತ ಆಜ್ಞೆಯನ್ನು ಹೊರಡಿಸಿದೆ. ಇತ್ತೀಚಿಗಷ್ಟೇ ಒಬ್ಬ ಗ್ರಾಹಕರು ಕೂಡ ತಮ್ಮ ಟ್ವೀಟ್ ನಲ್ಲಿ ತಮ್ಮ ಚಿಕ್ಕಪ್ಪನಿಗಾಗಿ ಟಿಕೆಟ್ ಬುಕ್ ಮಾಡಿದಾಗ ಅವರಿಗೆ ಲೋವರ್ ಬರ್ತ್ ಸೀಟ್ ಅನ್ನು ಮೊದಲ ಆದ್ಯತೆ ನೀಡಲಾಗಿತ್ತು ಎಂಬುದಾಗಿ ಬರೆದುಕೊಂಡಿದ್ದರು. ಹಿರಿಯ ನಾಗರಿಕರಿಗೆ ಇರುವಂತಹ ಆರೋಗ್ಯ ಸಮಸ್ಯೆಗಳಿಗೆ ಅನುಕೂಲಕರ ಆಗಲಿ ಎನ್ನುವ ಕಾರಣಕ್ಕಾಗಿ ಲೋವರ್ ಬರ್ತ್ ನಿಯಮಗಳನ್ನು ಜಾರಿಗೆ ತರಲಾಗಿದೆ.
ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿರುವ ಮತ್ತೊಂದು ಪ್ರಮುಖ ವಿಚಾರ ಅಂದ್ರೆ ಒಂದು ವೇಳೆ ಈ ರೀತಿಯ ಲೋವರ್ ಬರ್ತ್ ಸೀಟ್ಗಳು ಇದ್ದಾಗ ಮಾತ್ರ ಟಿಕೆಟ್ ರಿಸರ್ವ್ ಮಾಡುವಾಗ ಮೊದಲ ಪ್ರಾಮುಖ್ಯತೆ ಕೊಡಲಾಗುತ್ತದೆ. ಒಂದು ವೇಳೆ ಸೀಟ್ಗಳು ಇಲ್ಲದೆ ಹೋದಲ್ಲಿ ಈ ಅವಕಾಶಗಳು ಸಿಗೋದಿಲ್ಲ. ಇನ್ನು ಲೋವರ್ ಬರ್ತ್ ಸೀಟ್ಗಳು ಕೂಡ ಮೊದಲು ಬಂದವರಿಗೆ ಮೊದಲ ಆದ್ಯತೆ ಎನ್ನುವ ರೀತಿಯಲ್ಲಿ ಒದಗಿಸಲಾಗುತ್ತದೆ. ಒಂದು ವೇಳೆ ಅಗತ್ಯ ಇರುವ ಸಂದರ್ಭದಲ್ಲಿ ನೀವು ಟಿಟಿಇ ಬಳಿ ಹೋಗಿ ನಿಮಗೆ ಬೇಕಾಗಿರುವಂತಹ ಕೆಳ ವರ್ಗದ ಸೀಟ್ ನ್ನು ಅವರ ಬಳಿ ಕೇಳಿ ಪಡೆದುಕೊಳ್ಳಬಹುದಾಗಿದೆ. ಅದು ಕೂಡ ಲಭ್ಯ ಇದ್ದಲ್ಲಿ ಮಾತ್ರ ನೀವು ಲೋ ಬರ್ತ್ ಸೀಟ್ ಅನ್ನು ಪಡೆದುಕೊಳ್ಳುವಂತಹ ಅವಕಾಶ ಇದೆ.