ನಮ್ಮ ಭಾರತ ದೇಶ ಸಾಕಷ್ಟು ವರ್ಷಗಳಿಂದಲೂ ಕೂಡ ಕೃಷಿ ಹಾಗೂ ಹೈನುಗಾರಿಕೆಯನ್ನು ಪ್ರಮುಖವಾಗಿ ನಂಬಿಕೊಂಡು ಬಂದಿರುವಂತಹ ದೇಶವಾಗಿದ್ದು, ಇದೇ ಕಾರಣಕ್ಕಾಗಿ ರೈತರನ್ನ ಭಾರತ ದೇಶದ ಬೆನ್ನೆಲುಬು ಎಂಬುದಾಗಿ ಕರೆಯಲಾಗುತ್ತದೆ. ಈ ಕ್ಷೇತ್ರದಲ್ಲಿ ರೈತರಿಗೆ ಸಹಾಯ ಆಗಲಿ ಎನ್ನುವ ಕಾರಣಕ್ಕಾಗಿ ಸರ್ಕಾರಗಳು ಕಳೆದ ಸಾಕಷ್ಟು ವರ್ಷಗಳಿಂದಲೂ ಬೇರೆ ಬೇರೆ ರೀತಿಯ ಯೋಜನೆಗಳನ್ನು ಕೂಡ ಜಾರಿಗೆ ತರುವ ಮೂಲಕ ಇಂತಹ ಕೆಲಸಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡುವಂತಹ ಕೆಲಸವನ್ನು ಕೂಡ ಮಾಡಲಾಗುತ್ತಿದೆ.
ಇದೇ ರೀತಿಯಲ್ಲಿ ಈಗ ಕೇಂದ್ರ ಸರ್ಕಾರ ಜಾನುವಾರು ಸಾಲ ಯೋಜನೆ (Animal Loan Scheme) ಅಡಿಯಲ್ಲಿ ಹೈನುಗಾರರಿಗೆ 90 ಪ್ರತಿಶತ ಸಬ್ಸಿಡಿ ದರದಲ್ಲಿ ಸಾಲವನ್ನು ನೀಡುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಈ ಯೋಜನೆ ಅಡಿಯಲ್ಲಿ ಮೊದಲ ಬಾರಿಗೆ 2 ಲಕ್ಷಗಳ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇವುಗಳ ಖರೀದಿ, ಬೇಕಾಗಿರುವಂತಹ ಮೇವು ಹಾಗೂ ಅವುಗಳ ಆಶ್ರಯ ಸೇರಿದಂತೆ ಸಂಬಂಧಪಟ್ಟಂತಹ ಯಾವುದೇ ಖರ್ಚುಗಳಿಗೂ ಕೂಡ ಈ ಹಣವನ್ನು ಬಳಸಿಕೊಳ್ಳಬಹುದಾಗಿದೆ. ರೈತರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಇಂತಹ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ 60,000ಗಳ ಸಾಲ ನೀಡುತ್ತಿದೆ
- ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಎಮ್ಮೆಗೆ 80000 ಹಾಗೂ ಹಸುವಿಗೆ 60,000 ರೂಪಾಯಿಗಳ ಸಾಲ ನೀಡುತ್ತಿದೆ.
- ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ ಬ್ಯಾಂಕ್ ಆಫ್ ಬರೋಡದಲ್ಲಿ 10 ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
ಈ ಎಲ್ಲಾ ಅಂಕಿ ಅಂಶಗಳು ಖರೀದಿಸುವಂತಹ ಜಾನುವಾರುಗಳ ಮೇಲೆ ನಿರ್ಧರಿತವಾಗಿರುತ್ತದೆ.
ಅರ್ಹತೆಗಳು!
- ಸಾಲ ಪಡೆದುಕೊಂಡು ನಿಗದಿತ ಸಮಯದ ಒಳಗೆ ಸಾಲ ಮರುಪಾವತಿ ಮಾಡಿದರೆ ಹೆಚ್ಚಿನ ಹಣವನ್ನು ಸಾಲ (Loan) ರೂಪದಲ್ಲಿ ಪಡೆದುಕೊಳ್ಳಬಹುದು.
- ವರ್ಷಕ್ಕೊಮ್ಮೆ ಮಾತ್ರ ರೈತರಿಗೆ ಸಿಗುವಂತಹ ಸಾಲ ಯೋಜನೆಯಾಗಿದೆ.
- ಪಶು ಪಾಲನೆಯಲ್ಲಿ ಅನುಭವ ಹೊಂದಿರುವಂತಹ ಭಾರತೀಯ ಪ್ರಜೆಗಳಿಗೆ ಮಾತ್ರ ಅನ್ವಯಿಸುತ್ತದೆ.
ಡಾಕ್ಯೂಮೆಂಟ್ಸ್!
- ಆಧಾರ್ ಕಾರ್ಡ್
- ಬ್ಯಾಂಕ್ ಅಕೌಂಟ್ ಪಾಸ್ ಬುಕ್
- ಪ್ಯಾನ್ ಕಾರ್ಡ್
- ರೆಸಿಡೆನ್ಸಿ ಅಡ್ರೆಸ್
- ಜಾತಿ ಪ್ರಮಾಣ ಪತ್ರ
- ಲೇಟೆಸ್ಟ್ ಪಾಸ್ಪೋರ್ಟ್ ಸೈಜ್ ಫೋಟೋ
- ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್
- ಜಮೀನಿನ ಡಾಕ್ಯೂಮೆಂಟ್ಸ್
- ಜಾನುವಾರಿನ ಪ್ರಮಾಣ ಪತ್ರಗಳು
ಅಪ್ಲಿಕೇಶನ್ ವಿಧಾನಗಳು!
- ಮೊದಲಿಗೆ ಈ ಯೋಜನೆಯನ್ನು ಹತ್ತಿರ ಬ್ಯಾಂಕಿಗೆ ಭೇಟಿ ನೀಡಿ ಅಧಿಕಾರಿಗಳ ಬಳಿ ಈ ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಿ.
- ನಂತರ ಅಧಿಕಾರಿಗಳಿಂದ ಅರ್ಜಿ ನಮೂನೆಯನ್ನು ಪಡೆದುಕೊಂಡು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ಅಗತ್ಯ ಪಟ್ಟಂತಹ ದಾಖಲೆಗಳನ್ನು ಕೂಡ ಅವುಗಳ ಜೊತೆ ಅಟ್ಯಾಚ್ ಮಾಡಿ ಸಬ್ಮಿಟ್ ಮಾಡಿ.
- ಬ್ಯಾಂಕಿನ ಮ್ಯಾನೇಜರ್ ಅರ್ಜಿ ನಮೂನೆಯನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿ, ನೀವು ಅರ್ಹರಾಗಿದ್ರೆ ನಿಮ್ಮ ಅರ್ಜಿಯನ್ನು ಮಂಜೂರು ಮಾಡಿ ಸಾಲದ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತಾರೆ.