ಇಡೀ ವಿಶ್ವ ಕಂಡಂತಹ ಅತ್ಯಂತ ಉದಾತ್ತ ದಾನಿ ಆಗಿರುವಂತಹ ರತನ್ ಟಾಟಾ (Ratan Tata) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮನ್ನೆಲ್ಲ ದೈಹಿಕವಾಗಿ ಅಗಲಿದ್ದಾರೆ. ಕಳೆದ ಸಾಕಷ್ಟು ಸಮಯಗಳ ಹಿಂದೆ ಬಹು ಅಂಗಾಂಗ ವೈಫಲ್ಯದ ಕಾರಣದಿಂದಾಗಿ ಮುಂಬೈನ ಬ್ರಿಚ್ ಕ್ಯಾಂಡಿ ಹಾಸ್ಪಿಟಲ್ ನಲ್ಲಿ ದಾಖಲಾಗಿದ್ದರು. ಅಕ್ಟೋಬರ್ 9ನೇ ತಾರೀಖಿನಂದು ರಾತ್ರಿಯ ಸಂದರ್ಭದಲ್ಲಿ ರತನ್ ಟಾಟಾ (Ratan Tata) ರವರು ತಮ್ಮ ಕೊನೆ ಉಸಿರನ್ನು ಎಳೆದಿದ್ದಾರೆ.
ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಕಲ ಸರ್ಕಾರಿ ಗೌರವಗಳ ಜೊತೆಗೆ ರತನ್ ಟಾಟಾ ರವರಿಗೆ ಅಂತಿಮ ವಿದಾಯವನ್ನು ಕೋರಲಾಗಿದೆ. ಈಗ ಪ್ರತಿಯೊಬ್ಬರ ಎದುರು ಕಂಡುಬರುತ್ತಿರುವಂತಹ ಒಂದೇ ಒಂದು ಪ್ರಶ್ನೆಯೆಂದರೆ 30 ಲಕ್ಷ ಕೋಟಿ ರೂಪಾಯಿ ಮೌಲ್ಯದ ಟಾಟಾ ಗ್ರೂಪ್ ಅನ್ನು ಮುನ್ನಡೆಸಿಕೊಂಡು ಹೋಗುವಂತಹ ಉತ್ತರಾಧಿಕಾರಿ ಯಾರು ಎನ್ನುವುದರ ಬಗ್ಗೆ. ಯಾಕೆಂದ್ರೆ ರತನ್ ಟಾಟಾ ರವರು ಮದುವೆ ಆಗದ ಕಾರಣ ಅವರಿಗೆ ಮಕ್ಕಳು ಇಲ್ಲ ಹೀಗಾಗಿ ವಂಶ ಪಾರಂಪರ್ಯ ಉತ್ತರಾಧಿಕಾರಿಗಳು ಕೂಡ ಇಲ್ಲ. ಇದೇ ಕಾರಣಕ್ಕಾಗಿ ಟಾಟಾ ಗ್ರೂಪ್ಸ್ ಸಂಸ್ಥೆಯ ಮುಂದಿನ ಮುಂದಾಳು ಯಾರು ಎನ್ನುವುದೇ ಈಗ ದೊಡ್ಡ ಪ್ರಶ್ನೆಯಾಗಿದೆ.
ಸದ್ಯದ ಮಟ್ಟಿಗೆ ಟಾಟಾ ಸನ್ಸ್ (Tata Sons) ಅನ್ನು ಚೇರ್ ಪರ್ಸನ್ ಆಗಿ ಎನ್ ಚಂದ್ರಶೇಖರನ್ ರವರು ಕಳೆದ 2017 ರಿಂದಲೂ ಕೂಡ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಟಾಟಾ ಕಂಟ್ಸಲ್ಟೆನ್ಸಿ ಸರ್ವಿಸ್ ಸಂಸ್ಥೆಯ CEO ಆಗಿ ಕೂಡ ಚಂದ್ರಶೇಖರನ್ ವರು ಕಾರ್ಯನಿರ್ವಹಿಸಿಕೊಂಡು ಬಂದು ಕಂಪನಿಯನ್ನು ಜಾಗತಿಕ ಮಟ್ಟದಲ್ಲಿ ದೊಡ್ಡ ಸಾಫ್ಟ್ ವೇರ್ ಕಂಪನಿ ಹಾಗೂ ಹಾಗೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಇನ್ನು ಕುಟುಂಬದಿಂದ ಟಾಟಾ ಗ್ರೂಪ್ಸ್ (Tata Group’s) ಅನ್ನು ರತನ್ ಟಾಟಾ (Ratan Tata) ರವರ ರೀತಿಯಲ್ಲಿ ಮುಂದುವರಿಸುವುದಕ್ಕೆ ಅರ್ಹರಾಗಿರುವ ಪಟ್ಟಿಯಲ್ಲಿ ಅವರ ಸಹೋದರರಾಗಿರುವಂತಹ ನೋಯಲ್ ಟಾಟಾ (Noel Tata) ರವರ ಮಕ್ಕಳಾಗಿರುವಂತಹ ಲಿಯ ಟಾಟಾ, ಮಾಯಾ ಟಾಟಾ (Maya Tata) ಹಾಗೂ ನೆವಿಲ್ಲೆ ಟಾಟಾ (Neville Tata) ಪ್ರಮುಖ ಸ್ಪರ್ಧಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಮೂವರು ಕೂಡ ಈಗಾಗಲೇ ಟಾಟಾ ಗ್ರೂಪ್ಸ್ ಸಂಸ್ಥೆಗಳಲ್ಲಿ ಒಂದಲ್ಲ ಒಂದು ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಇವರಲ್ಲಿ ಯಾರು ಪ್ರಮುಖ ಚುಕ್ಕಾಣಿಯನ್ನು ಹಿಡಿಯುತ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ. ಸದ್ಯಕ್ಕಂತೂ ಈ ಮೂರಲ್ಲಿ ಒಬ್ಬರು ಈ ಅಧಿಕಾರವನ್ನು ಪಡೆದುಕೊಳ್ಳುವಂತಹ ಅವಕಾಶ ಹೆಚ್ಚಿದೆ.