ಬಹುಶ: ಇಂದು ಟಾಟಾ (Tata) ಕಂಪನಿಯ ಒಂದೇ ಒಂದು ವಸ್ತುವನ್ನಾದರೂ ದೇಶದ ಪ್ರತಿಯೊಂದು ಮನೆಯಲ್ಲಿಯೂ ಕಾಣಬಹುದು. ಅಷ್ಟು ದೊಡ್ಡ ಅದ್ಭುತ ಕೊಡುಗೆಯನ್ನು ದೇಶಕ್ಕೆ ಕೊಟ್ಟವರು ರತನ್ ಟಾಟಾ. ದೇಶದ ಪ್ರಮುಖ ಕೈಗಾರಿಕೋದ್ಯಮಿ ರತನ್ ಡಾಟಾ (Ratan Tata) ಈಗ ನಮ್ಮ ನಡುವೆ ಇಲ್ಲ. ಮುಂಬೈನ ಬ್ರಿಚ್ ಕ್ಯಾಂಡಿ ಹಾಸ್ಪಿಟಲ್ ನಲ್ಲಿ ಕೆಲವು ದಿನಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ರತನ್ ಜಿ ಅಸು ನೀಗಿದ್ದಾರೆ. ಅವರನ್ನು ಟ್ರೀಟ್ ಮಾಡಿದ ಡಾಕ್ಟರ್ ಶಾರುಖ್ ಗೋಲ್ವಾಲ ರತನ್ ಅವರ ದೇಹ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಲೋ ಬಿಪಿ ಸಮಸ್ಯೆ ಎದುರಿಸುತ್ತಿದ್ದರು!
ರತನ್ ಟಾಟಾ (Ratan Tata) ಅವರಿಗೆ ಕಡಿಮೆ ರಕ್ತದೊತ್ತಡ ಅಂದರೆ ಲೋ ಬಿಪಿ ಸಮಸ್ಯೆ ಕಾಡುತ್ತಿತ್ತು. ಇದರಿಂದಾಗಿ ಅವರ ದೇಹದ ಸ್ಥಿತಿ ಬಹಳ ಟ್ರೀಟ್ಮೆಂಟ್ ನಂತರವೂ ಸುಧಾರಣೆ ಆಗಿಲ್ಲ ಅದು ಅಲ್ಲದೆ ಹೈಪೋಟೆನ್ಶನ್ (Hypotension) ಮತ್ತು ಡಿಹೈಡ್ರೇಶನ್ (Dehydration) ಸಮಸ್ಯೆ ಕೂಡ ಅವರನ್ನು ಕಾಡುತ್ತಿತ್ತು. ಹೀಗಾಗಿ ರತನ್ ಜಿ ನಿಧಾನವಾಗಿ ಇತರ ಅಂಗಾಂಗಗಳ ವೈಫಲ್ಯಕ್ಕೆ ಗುರಿಯಾಗಬೇಕಾಯಿತು ಅವರ ದೇಹ ಸರಿಯಾಗಿ ಚಿಕಿತ್ಸೆಗೆ ರೆಸ್ಪೋನ್ಡ್ ಮಾಡುತ್ತಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಲೋ ಬಿಪಿ ಎನ್ನುವುದು ಎಷ್ಟು ಅಪಾಯಕಾರಿ ಗೊತ್ತಾ?
ರತನ್ ಟಾಟಾ (Ratan Tata) ಅವರಿಗೆ ಲೋ ಬಿಪಿ (Low BP) ಸಮಸ್ಯೆ ಎದುರಾಗಿತ್ತು. ಅವರಿಗೆ ವಯಸ್ಸು ಆಗಿರುವ ಹಿನ್ನೆಲೆಯಲ್ಲಿ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ರಕ್ತದ ಒತ್ತಡ 90/ 60ಕ್ಕಿಂತ ಕಡಿಮೆ ಇದ್ದರೆ ಅದನ್ನು ಕಡಿಮೆ ರಕ್ತದೊತ್ತಡ ಎಂದು ಪರಿಗಣಿಸಲಾಗುತ್ತದೆ. ವಯಸ್ಸಾಗಿರುವವರಿಗೆ ಬಿಪಿ ಕಡಿಮೆ ಆದರೆ ಮೆದುಳು ಹೃದಯ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ದೇಹಕ್ಕೆ ಸರಿಯಾಗಿ ರಕ್ತ ಪರಿಚಲನೆ ಆಗುವುದಿಲ್ಲ. ದೇಹದಲ್ಲಿ ಬಿಪಿ ಇದ್ದಕ್ಕಿದ್ದಂತೆ ಕಡಿಮೆಯಾದರೆ ಮೆದುಳಿಗೆ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಇದರಿಂದ ಆಮ್ಲಜನಕ ಪೂರೈಕೆ ಕೊರತೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ತಲೆ ತಿರುಗುವುದು ತಲೆ ಸುತ್ತು ಬರುವುದು ಮೂರ್ಚೆ ಹೋಗುವುದು ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಕಡಿಮೆ ರಕ್ತದೊತ್ತಡ ಸಮಸ್ಯೆ ಉಂಟಾದರೆ ಏನು ಮಾಡಬೇಕು?
ಲೋ ಬಿಪಿ ಕಂಡು ಬಂದರೆ ಮೊದಲಿಗೆ ವೈದ್ಯರನ್ನು ಸಂಪರ್ಕಿಸಬೇಕು ಇನ್ನು ನೀವು ಸೇವಿಸುವ ಆಹಾರ ಉತ್ತಮವಾಗಿರಬೇಕು ಲೋ ಬಿಪಿ ಕಾಣಿಸಿಕೊಂಡಾಗ ಸ್ವಲ್ಪ ಪ್ರಮಾಣದಲ್ಲಿ ಉಪ್ಪು ಸೇವನೆ ಒಳ್ಳೆಯದು. ಯಾವುದೇ ಕಾರಣಕ್ಕೂ ಡಿ ಹೈಡ್ರೇಟ್ ಆಗದಂತೆ ನೋಡಿಕೊಳ್ಳಿ ಅಂದರೆ ದ್ರವ ಪದಾರ್ಥವನ್ನು ಸೇವಿಸಿ. ನೀರನ್ನು ಹೆಚ್ಚಾಗಿ ಕುಡಿಯಿರಿ. ಹಾಸಿಗೆಯಿಂದ ಮೇಲೆ ಏಳುವಾಗ ಸಪೋರ್ಟ್ ತೆಗೆದುಕೊಂಡು ಹೇಳಿ. ಕಾರ್ಬೋಹೈಡ್ರೇಟ್ಸ್ ಸೇವನೆಯನ್ನು ಕಡಿಮೆ ಮಾಡಬೇಕು.
ಮಲಗುವಾಗ ಸಣ್ಣ ದಿಂಬು ಬಳಸಿ ತಲೆಯನ್ನು ಮೇಲೆ ಎತ್ತಿ ಮಲಗಿದರೆ ಒಳ್ಳೆಯದು ನಿಯಮಿತವಾದ ವ್ಯಾಯಾಮ ವಾಕಿಂಗ್ ಅತ್ಯುತ್ತಮ ಚಿಕಿತ್ಸೆ ಎನ್ನಬಹುದು. ಊಟವಾದ ನಂತರ ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು. ಇನ್ನು ಹೆಚ್ಚು ಸಮಯ ನಿಂತಿರುವುದು, ಭಾರ ಎತ್ತುವುದು ಇಂತಹ ಕೆಲಸ ಮಾಡುವುದನ್ನು ತಪ್ಪಿಸಿ. ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಆಹಾರ ಮತ್ತು ವಿಶ್ರಾಂತಿ ಬಹಳ ಮುಖ್ಯ.