ಪ್ರತಿಯೊಬ್ಬರು ಕೂಡ ಒಂದಲ್ಲ ಒಂದು ವಿಚಾರದಲ್ಲಿ ಹಣದ ಬಳಕೆಯನ್ನು ಮಾಡ್ತೆವೆ ಹಾಗೂ ಕೆಲವೊಮ್ಮೆ ನಮ್ಮ ಅಗತ್ಯಗಳಿಗೆ ಅನುಕೂಲವಾಗುವಷ್ಟು ಹಣ ನಮ್ಮ ಬಳಿ ಇರುವುದಿಲ್ಲ ಆ ಸಂದರ್ಭದಲ್ಲಿ ಬ್ಯಾಂಕುಗಳಲ್ಲಿ ಪರ್ಸನಲ್ ಲೋನ್ (Personal Loan) ಮಾಡಿ ಅಲ್ಲಿಂದ ಸಿಗುವಂತಹ ಹಣದ ಮೂಲಕ ನಮ್ಮ ಅಗತ್ಯತೆಗಳನ್ನ ಪೂರೈಸಿಕೊಳ್ಳುತ್ತೇವೆ. ನೀವು ICICI Bank ನಲ್ಲಿ 5 ವರ್ಷಗಳ ಅವಧಿಗೆ ಭರ್ಜರಿ 8 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ ಪಡೆದುಕೊಂಡರೆ ನೀವು ಎಷ್ಟು EMI ಕಟ್ಟಬೇಕಾಗುತ್ತೆ ಎನ್ನುವ ಲೆಕ್ಕಾಚಾರ ತಿಳಿಯೋಣ.
ಸದ್ಯದ ಮಟ್ಟಿಗೆ ICICI Bank ಪರ್ಸನಲ್ ಲೋನ್ (Personal Loan) ವಿಭಾಗದಲ್ಲಿ 10.85% ಆರಂಭಿಕ ಬಡ್ಡಿ ದರದಲ್ಲಿ ಸಾಲವನ್ನು ಗ್ರಾಹಕರಿಗೆ ನೀಡುತ್ತಿದೆ. ಇನ್ನು ಈ ಸಾಲವನ್ನು ಪಡೆದುಕೊಳ್ಳುವುದಕ್ಕಾಗಿ ನೀವು ಉತ್ತಮ Credit Score ಹೊಂದಿರಬೇಕಾಗಿರುವುದು ಕೂಡ ಪ್ರಮುಖವಾಗಿರುತ್ತದೆ ಅನ್ನೋದು ನೆನಪಿರಲಿ. ಐಸಿಐಸಿಐ ಬ್ಯಾಂಕ್ ವಿಚಾರದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಕನಿಷ್ಠಪಕ್ಷ 800 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು ಅನ್ನೋದು ಕಡ್ಡಾಯ ನಿಯಮವಾಗಿದೆ.
ಈ ಸಂದರ್ಭದಲ್ಲಿ ನೀವು ಈ ಬಡ್ಡಿ ದರದಲ್ಲಿ ಹಾಗೂ ಕ್ರೆಡಿಟ್ ಸ್ಕೋರ್ ಅರ್ಹತೆಯನ್ನು ಹೊಂದಿದ ನಂತರ ಐದು ವರ್ಷಗಳ ಅವಧಿಗೆ 8 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ ಪಡೆದು ಕೊಂಡಾಗ ಪ್ರತಿ ತಿಂಗಳು ನಿಮಗೆ ಕಟ್ಟಲು ಬರುವಂತಹ ಕಂತಿನ ಹಣದ ಒಟ್ಟಾರೆ ಮೊತ್ತ ಎಷ್ಟು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗಿದೆ. ಯಾಕೆಂದ್ರೆ ಆ ಕಂತಿನ ಹಣವನ್ನು ಮರುಪಾವತಿ ಮಾಡುವಂತಹ ಸಾಮರ್ಥ್ಯ ಇದ್ದಲ್ಲಿ ಮಾತ್ರ ಸಾಲವನ್ನು ಪಡೆದುಕೊಳ್ಳುವುದು ಉತ್ತಮ.
ಈ ಲೆಕ್ಕಾಚಾರದಲ್ಲಿ ನಿಮ್ಮ ಪ್ರತಿ ತಿಂಗಳ EMI 17334 ರೂಪಾಯಿ ಆಗಿದೆ. ಅಂದರೆ ನೀವು ಪಡೆದುಕೊಂಡಿರುವಂತಹ 8 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ (Personal Loan) ಹಣದ ಮೇಲೆ ಇರುವಂತಹ ಇಂಟರೆಸ್ಟ್ ಲೆಕ್ಕಾಚಾರದಲ್ಲಿ 5 ವರ್ಷಗಳಲ್ಲಿ ಹೆಚ್ಚುವರಿ 2.40 ಲಕ್ಷ ರೂಪಾಯಿಗಳನ್ನು ಕಟ್ಟಬೇಕಾಗಿರುತ್ತದೆ. ಅಂದರೆ ಪಡೆದುಕೊಂಡಿರುವಂತಹ 8 ಲಕ್ಷ ರೂಪಾಯಿ ಹಣವನ್ನು ಐದು ವರ್ಷದಲ್ಲಿ ಮರುಪಾವತಿ ಮಾಡುವ ಸಂದರ್ಭದಲ್ಲಿ ಒಟ್ಟಾರೆಯಾಗಿ ನೀವು 10.40 ಲಕ್ಷ ರೂಪಾಯಿಗಳನ್ನು ಪಾವತಿ ಮಾಡಬೇಕಾಗಿರುತ್ತದೆ. ಒಂದು ವೇಳೆ ಹಣವನ್ನ ನೀವು ಹೆಚ್ಚಾಗಿ ಹಾಗೂ ಕಡಿಮೆ ಸಮಯದಲ್ಲಿ ಪಾವತಿ ಮಾಡಿದ್ರೆ ನೀವು ಕಟ್ಟಬೇಕಾಗಿರುವಂತಹ ಬಡ್ಡಿ ಕೂಡ ಕಡಿಮೆ ಆಗಿರುತ್ತೆ.