ಕೇರಳ ರಾಜ್ಯದಲ್ಲಿ ನಡೆಯುವಂತಹ 25 ಕೋಟಿ ರೂಪಾಯಿಗಳ ಲಾಟರಿ ಬಗ್ಗೆ ಸಾಕಷ್ಟು ಜನರು ಕೇಳಿ ತಿಳಿದಿರಬಹುದು. ಈ ಬಾರಿ ಈ ಲಾಟರಿ ಸಿಕ್ಕಿರೋದು ಅಲ್ತಾಫ್ ಎನ್ನುವಂತಹ ಮೆಕ್ಯಾನಿಕ್ ಗೆ. ಈತನಿಗೆ ಸಿಕ್ಕಿರುವಂತಹ 25 ಕೋಟಿ ರೂಪಾಯಿಗಳ ಲಾಟರಿ (Lottery) ಪೂರ್ಣ ಪ್ರಮಾಣದಲ್ಲಿ ಆತನಿಗೆ ಸಿಕ್ಕಿಲ್ಲ ಅನ್ನೋದೇ ಬೇಸರದ ವಿಚಾರ. ನಮ್ಮ ದೇಶದಲ್ಲಿರುವಂತಹ ಟ್ಯಾಕ್ಸ್ (Tax) ವ್ಯವಸ್ಥೆ ಯಾವ ರೀತಿಯಲ್ಲಿ ಜನಜೀವನವನ್ನು ಅಸ್ತವ್ಯಸ್ತ ಮಾಡಿದನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ. ಯಾಕೆಂದ್ರೆ 25 ಕೋಟಿ ರೂಪಾಯಿಗಳನ್ನು ಗೆದ್ದಿರುವಂತಹ ಅಲ್ತಾಫ್ ಗೆ ಸಿಕ್ಕಿರೋದು ಪಂಗನಾಮ ಅಂತ ಅಂದ್ರು ಕೂಡ ತಪ್ಪಾಗಲ್ಲ.
500 ರೂಪಾಯಿಗಳಿಗೆ ಅಲ್ತಾಫ್ (Altaf) ಈ ಟಿಕೆಟ್ ಅನ್ನು ಖರೀದಿ ಮಾಡಿರುತ್ತಾನೆ. ಗೆದ್ದಿರುವಂತಹ 25 ಕೋಟಿ ರೂಪಾಯಿಗಳಲ್ಲಿ 10% ಅಂದರೆ 2.5 ಕೋಟಿ ರೂಪಾಯಿಗಳ ಏಜೆಂಟ್ ಕಮಿಷನ್ ಅನ್ನು ಆತ ನೀಡಬೇಕಾಗಿರುತ್ತದೆ. ಇನ್ನುಳಿದಿರುವಂತಹ ಹಣಕ್ಕೆ 6.75 ಕೋಟಿ ರೂಪಾಯಿಗಳ ತೆರಿಗೆಯನ್ನು ಆತ ಕಟ್ಟಬೇಕಾಗಿರುತ್ತದೆ ಹೀಗಾಗಿ ಈ ಹಣವನ್ನು ಅಲ್ಲಿ ಕಳೆಯಲಾಗುತ್ತದೆ. 5 ಕೋಟಿಗಿಂತ ಬಹುಮಾನದ ಹಣ ಹೆಚ್ಚಾಗಿದ್ದರೆ ಅಲ್ಲಿ 37% ಸರ್ಚಾರ್ಜ್ ಅನ್ನು ಕಟ್ಟಬೇಕಾಗಿರುತ್ತದೆ. ಹೀಗಾಗಿ ಟ್ಯಾಕ್ಸ್ ರೂಪದಲ್ಲಿ ಅಲ್ತಾಫ್ (Altaf) ಇಲ್ಲಿ ಒಟ್ಟಾರೆಯಾಗಿ 25 ಕೋಟಿ ರೂಪಾಯಿ ಬಹುಮಾನದಲ್ಲಿ 9.25 ಕೋಟಿ ರೂಪಾಯಿಗಳನ್ನು ಕಟ್ಟಿರುತ್ತಾನೆ. ಒಂದೇ ಒಂದು ರೂಪಾಯಿ ಖರ್ಚಿಲ್ಲದಿದ್ದರೂ ಕೂಡ ಸರ್ಕಾರ ಇಲ್ಲಿ ಸರಿಸುಮಾರು ಹತ್ತು ಕೋಟಿ ರೂಪಾಯಿಗಳ ಆಸುಪಾಸಿನಲ್ಲಿ ಹಣವನ್ನು ಪಡೆದುಕೊಂಡಿದೆ.
ಎಲ್ಲಕ್ಕಿಂತ ಆಶ್ಚರ್ಯ ಎನಿಸುವಂತಹ ಮತ್ತೊಂದು ವಿಚಾರ ಅಂದ್ರೆ ಈತ ಖರೀದಿ ಮಾಡಿದ್ದ ಈ 500 ರೂಪಾಯಿ ಲಾಟರಿ ಟಿಕೆಟ್ ಅನ್ನು ಲಾಟರಿ (Lottery) ಫಲಿತಾಂಶ ಬರುವ 48 ಗಂಟೆಗಳ ಮುಂಚೆ ಬೇರೆಯವರಿಗೆ ಮಾರಾಟ ಮಾಡುವುದಕ್ಕೆ ಕೂಡ ರೆಡಿಯಾಗಿರುವಷ್ಟು ಬಡತನ ಇತ್ತು. ಆದರೆ ಆತನ ಅದೃಷ್ಟ ಕನಿಷ್ಠಪಕ್ಷ ಇಷ್ಟು ಹಣವನ್ನು ಕೂಡ ಗೆಲ್ಲುವ ಹಾಗೆ ಮಾಡಿತ್ತು. ಬೇರೆ ದೇಶದಲ್ಲಿ ಲಾಟರಿ ಗೆದ್ದಷ್ಟು ಹಣವನ್ನು ಆ ಲಾಟರಿ ಗೆದ್ದ ವ್ಯಕ್ತಿಯೇ ಸಂಪೂರ್ಣವಾಗಿ ಪಡೆದುಕೊಳ್ಳುತ್ತಾನೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಟ್ಯಾಕ್ಸ್ ರೂಪದಲ್ಲಿ ಗೆದ್ದವನಿಗಿಂತ ಹೆಚ್ಚಾಗಿ ಸರ್ಕಾರವೇ ಟ್ಯಾಕ್ಸ್ ಹಣವನ್ನು ಪಡೆದುಕೊಳ್ಳುತ್ತದೆ. ಈ 25 ಕೋಟಿ ರೂಪಾಯಿಗಳ ಬಹುಮಾನ ಗೆದ್ದಿರುವಂತಹ ಅಲ್ತಾಫ್ ಮಂಡ್ಯ ಮೂಲದ ಮೆಕಾನಿಕ್ ಆಗಿದ್ದಾನೆ.