ಇಂದು ಪ್ರತಿಯೊಬ್ಬ ವ್ಯಕ್ತಿಗೂ ಸ್ವಂತವಾದ ಮನೆ ಮಾಡಬೇಕು,ತಮ್ಮ ಕನಸಿನಂತೆ ಮನೆ ನಿರ್ಮಾಣ ಆಗಬೇಕು ಎನ್ನುವ ಆಸೆ,ಕನಸುಗಳು ಬಹಳಷ್ಟು ಇರಲಿದೆ. ಆದರೆ ಇಂದು ಮನೆ ನಿರ್ಮಾಣದ ಖರ್ಚು ವೆಚ್ಚಗಳು ಹೆಚ್ಚು ಆಗಿರುವುದರಿಂದ ಸುಲಭವಾಗಿ ಮನೆ ನಿರ್ಮಾಣ ಮಾಡಲು ಸಾಧ್ಯ ಇಲ್ಲ. ಇದಕ್ಕಾಗಿ ಗೃಹ ಸಾಲ (Home Loan) ವನ್ನು ಮಾಡಬೇಕಾಗುತ್ತದೆ. ಆದರೆ ನೀವು ಗೃಹ ಸಾಲ ಪಡೆಯುವ ಮುನ್ನ ಅನೇಕ ವಿಚಾರಗಳ ಬಗ್ಗೆ ಗಮನ ಇಟ್ಟುಕೊಳ್ಳ ಬೇಕು. ಮತ್ತು ಗೃಹ ಸಾಲ ಮಾಡುವ ಮುನ್ನ ಯಾರ ಹೆಸರಿನಲ್ಲಿ ಮಾಡಿದರೆ ಲಾಭಕರ ಎನ್ನುವುದನ್ನು ತಿಳಿದುಕೊಂಡು ಸಾಲ ಮಾಡಿದರೆ ಉತ್ತಮ.
ಅದರಲ್ಲೂ ನೀವು ಜಂಟಿಯಾಗಿ ಗೃಹ ಸಾಲ (Home Loan) ಮಾಡುವುದರಿಂದ ಅನೇಕ ಪ್ರಯೋಜನಗಳು ಸಿಗಲಿದೆ. ಹೌದು ನಿಮ್ಮ ಹೆಂಡತಿಯೊಂದಿಗೆ ಜಂಟಿ ಗೃಹ ಸಾಲವನ್ನು ತೆಗೆದುಕೊಳ್ಳುವ ಮೂಲಕ ಅನೇಕ ರೀತಿಯ ಲಾಭ ಪಡೆಯಬಹುದು. ಹಾಗೆಯೇ ಗೃಹ ಸಾಲದ ಜಂಟಿ ಖಾತೆಯಲ್ಲಿ ನಿಮ್ಮ ತಾಯಿ, ಸಹೋದರಿ ಅಥವಾ ಇತರ ಯಾವುದೇ ಮಹಿಳೆಯ ಹೆಸರನ್ನು ಸೇರಿಸುವ ಮೂಲಕ ನೀವು ಜಂಟಿ ಗೃಹ ಸಾಲ ಪಡೆಯಬಹುದು.
ಹೆಂಡತಿ ಹೆಸರಿನಲ್ಲಿ ಸಾಲ ಪಡೆದರೆ ಲಾಭ ಏನು? ನೀವು ಹೆಂಡತಿಯ ಹೆಸರಿನಲ್ಲಿ ಜಂಟಿ ಗೃಹ ಸಾಲ (Home Loan) ವನ್ನು ಪಡೆದರೆ 0.05% ವರೆಗಿನ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು.
- ನೀವು ತೆರಿಗೆ ಪ್ರಯೋಜನಗಳನ್ನು ಪಡೆಯಲು ಕೂಡ ಸಾಧ್ಯ ಇದೆ.
- ಮಹಿಳೆಯರಿಗೆ ಉತ್ತಮ ಮತ್ತು ಸುಲಭವಾದ ರೀತಿಯಲ್ಲಿ ಸಾಲ ನೀಡುವುದರಿಂದ ಅತೀ ಬೇಗನೆ ಸಾಲ ಪಡೆಯಬಹುದು.
- ಇನ್ನು ಕೆಲವೊಂದು ರಾಜ್ಯದಲ್ಲಿ ಮಹಿಳೆಯರು ಮನೆ ಖರೀದಿಸಿದರೆ ಸ್ಟ್ಯಾಂಪ್ ಡ್ಯೂಟಿ ಮೊತ್ತದಲ್ಲಿ ಕನ್ಸಿಷನ್ ಕೊಟ್ಟಿದೆ. ಆಸ್ತಿಯ ಜಂಟಿ ಮಾಲೀಕರಾದರೂ ಈ ರಿಯಾಯಿತಿ ಮಹಿಳೆಯರಿಗೆ ಸಿಗಲಿದೆ.
- ಮಹಿಳೆಯರಿಗೆ ಸ್ಟಾಂಪ್ ಡ್ಯೂಟಿಯಲ್ಲಿ 2 ರಿಂದ 3 ರಷ್ಟು ರಿಯಾಯಿತಿ ಸಿಗಲಿದ್ದು ಪುರುಷರು ಶೇಕಡಾ 6 ರ ದರದಲ್ಲಿ ಸ್ಟ್ಯಾಂಪ್ ಸುಂಕವನ್ನು ಪಾವತಿಸಬೇಕು.ಈ ಲಾಭ ವನ್ನು ಸಹ ಮಹಿಳೆಯರು ಪಡೆಯಬಹುದು.
- ಮಹಿಳಾ ಒಡೆತನ ಉತ್ತೇಜಿಸಲು ಸರಕಾರ ಹಲವು ರೀತಿಯ ಸೌಲಭ್ಯ ನೀಡ್ತಾ ಇದ್ದು ಮಹಿಳೆಯರಿಗೆ ಕಡಿಮೆ ಬಡ್ಡಿ ಸಬ್ಸಿಡಿ ಸಿಗುತ್ತದೆ.
- ಇನ್ನು ಜಂಟಿ ಗೃಹ ಸಾಲವನ್ನು ಪಡೆದರೆ ನಿಮ್ಮ ಹೆಂಡತಿಗೂ ಆಸ್ತಿಯ ಮೇಲೆ ಹಕ್ಕು ಇರಲಿದ್ದು ಅನೇಕ ಸರಕಾರದ ಸೌಲಭ್ಯ ಪಡೆಯಬಹುದು.