ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ರಾಜ್ಯದ ಯುವಜನತೆಗೆ ಇದೀಗ ಸಿಹಿ ಸುದ್ದಿಯೊಂದು ಸಿಕ್ಕಿದೆ. ಸಾಮಾನ್ಯವಾಗಿ ಪೊಲೀಸ್ ಅಥವಾ ಕಂದಾಯ ಇಲಾಖೆಯ ನೇಮಕಾತಿಗಾಗಿ ಕಾಯುವವರೇ ಹೆಚ್ಚು. ಆದರೆ, ಇದೀಗ ರಾಜ್ಯದ ಪ್ರಮುಖ ಸಹಕಾರಿ ಸಂಸ್ಥೆಯೊಂದರಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅನೇಕ ದಿನಗಳಿಂದ ಖಾಲಿ ಉಳಿದಿದ್ದ ಕ್ಲರ್ಕ್, ಸೇಲ್ಸ್ ಅಸಿಸ್ಟೆಂಟ್ ಸೇರಿದಂತೆ ಹಲವು ವೃಂದದ ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದ್ದು, ಉತ್ತಮ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಹಾಗಾದರೆ ಯಾವ ಹುದ್ದೆಗೆ ಎಷ್ಟು ಸಂಬಳ? ವಿದ್ಯಾರ್ಹತೆ ಏನಿರಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾವ ಇಲಾಖೆಯಲ್ಲಿ ನೇಮಕಾತಿ?
ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕರ ಮಹಾಮಂಡಳ ನಿಯಮಿತ (KSCCF) ವತಿಯಿಂದ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯಾದ್ಯಂತ ಇರುವ ಶಾಖೆಗಳಲ್ಲಿ ಖಾಲಿ ಇರುವ ಒಟ್ಟು 34 ಹುದ್ದೆಗಳನ್ನು ಭರ್ತಿ ಮಾಡಲು ಈ ಹೊಸ ಅಧಿಸೂಚನೆಯನ್ನು (KSCCF Recruitment) ಹೊರಡಿಸಲಾಗಿದೆ.
ಹುದ್ದೆ ಮತ್ತು ವೇತನ ವಿವರ (Salary Details)
ಅಭ್ಯರ್ಥಿಗಳ ಆಯ್ಕೆಯ ನಂತರ ಅವರಿಗೆ 7ನೇ ವೇತನ ಆಯೋಗದ ಅನ್ವಯ ಆಕರ್ಷಕ ಸಂಬಳ ದೊರೆಯಲಿದೆ. ಹುದ್ದುವಾರು ವೇತನ ಶ್ರೇಣಿ ಮತ್ತು ವಿದ್ಯಾರ್ಹತೆಯ ವಿವರವನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.
| ಹುದ್ದೆಯ ಹೆಸರು | ವಿದ್ಯಾರ್ಹತೆ | ವೇತನ ಶ್ರೇಣಿ (ತಿಂಗಳಿಗೆ) |
|---|---|---|
| ಫಾರ್ಮಸಿಸ್ಟ್ (Pharmacist) | ಬಿ.ಫಾರ್ಮಾ / ಡಿ.ಫಾರ್ಮಾ | ₹25,800 – ₹52,650 |
| ಪ್ರಥಮ ದರ್ಜೆ ಗುಮಾಸ್ತರು (FDC) | ಯಾವುದೇ ಪದವಿ (Degree) | ₹21,400 – ₹45,300 |
| ಸೇಲ್ಸ್ ಅಸಿಸ್ಟೆಂಟ್ | ದ್ವಿತೀಯ ಪಿಯುಸಿ (12th Pass) | ₹19,950 – ₹37,900 |
ವಯೋಮಿತಿ ಮತ್ತು ಅರ್ಜಿ ಶುಲ್ಕ
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಮೀಸಲಾತಿಗನುಗುಣವಾಗಿ ವಯೋಮಿತಿ ಸಡಿಲಿಕೆ ಇದ್ದು, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 40 ವರ್ಷಗಳವರೆಗೆ ಅವಕಾಶವಿದೆ.
- ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: ₹1,000 ಅರ್ಜಿ ಶುಲ್ಕ.
- ಎಸ್ಸಿ/ಎಸ್ಟಿ/ಪ್ರವರ್ಗ-1 ಅಭ್ಯರ್ಥಿಗಳಿಗೆ: ₹500 ಅರ್ಜಿ ಶುಲ್ಕ.
ಆಯ್ಕೆ ವಿಧಾನ ಹೇಗೆ?
ಈ ನೇಮಕಾತಿಯಲ್ಲಿ (KSCCF Recruitment) ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ನಡೆಸಲಾಗುತ್ತದೆ.
- ಲಿಖಿತ ಪರೀಕ್ಷೆ: ಶೇಕಡಾ 85% ಅಂಕಗಳನ್ನು ಪರಿಗಣಿಸಲಾಗುತ್ತದೆ.
- ಸಂದರ್ಶನ: ಶೇಕಡಾ 15% ಅಂಕಗಳಿಗೆ ಸೀಮಿತವಾಗಿರುತ್ತದೆ.
ಪ್ರಮುಖ ಸೂಚನೆ
ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಶುಲ್ಕ ಪಾವತಿ, ದಾಖಲೆಗಳ ಪರಿಶೀಲನೆ ಮತ್ತು ಕೊನೆಯ ದಿನಾಂಕದ (07-02-2026) ಮಾಹಿತಿಯನ್ನು ಅಧಿಕೃತ ವೆಬ್ಸೈಟ್ನಲ್ಲಿ ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು KSCCF ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಸರ್ವರ್ ಸಮಸ್ಯೆ ಉಂಟಾಗುವ ಮೊದಲೇ, ಅಂದರೆ ಕೊನೆಯ ದಿನಾಂಕಕ್ಕೂ ಮುನ್ನವೇ ಅರ್ಜಿ ಸಲ್ಲಿಸುವುದು ಉತ್ತಮ.








