ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಆನ್ಲೈನ್ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಇ ಕಾಮರ್ಸ್ ಸಂಸ್ಥೆಗಳು ಕೂಡ ವೇಗವಾಗಿ ಬೆಳೆಯುತ್ತಿವೆ. ಆದರೆ ಈ ಸಿಸ್ಟಮ್ ಸರಿಯಾದ ದಿಕ್ಕಿನಲ್ಲಿ ಹೋಗಬೇಕು ಅಂತ ಅಂದ್ರೆ ಡೆಲಿವರಿ ಸರಿಯಾದ ಸಮಯಕ್ಕೆ ನಡೆಯಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಅದರಲ್ಲಿ ವಿಶೇಷವಾಗಿ ಅಮೆಜಾನ್ ಸಂಸ್ಥೆಯ ಡೆಲಿವರಿ ಫ್ರಾಂಚೈಸಿಯನ್ನು (Amazon Delivery Franchise) ಪಡೆದುಕೊಂಡು ನೀವು ಡೆಲಿವರಿ ಮಾಡಿರುವಂತಹ ಅವಕಾಶವನ್ನು ನೀಡಲಾಗುತ್ತಿದೆ. ನೀವು ಕೂಡ ಆಸಕ್ತ ರಾಗಿದ್ದರೆ ಈ ಮಾಹಿತಿ ನಿಮಗೆ ಸಹಾಯಕವಾಗಲಿದೆ.
ಅಮೆಜಾನ್ ಡೆಲಿವರಿ ಫ್ರಾಂಚೈಸಿ ಬಿಜಿನೆಸ್!
ಸದ್ಯದ ಮಟ್ಟಿಗೆ ಲಾಜಿಸ್ಟಿಕ್ ವ್ಯವಹಾರ ವೇಗವಾಗಿ ಬೆಳೆಯುತ್ತಿರುವಂತಹ ಇಂಡಸ್ಟ್ರಿ ಯಾಗಿದ್ದು ಅಮೆಜಾನ್ ಡೆಲಿವರಿ ಫ್ರಾಂಚೈಸಿ (Amazon Delivery Franchise) ಅನ್ನು ವ್ಯಾಪಾರವನ್ನಾಗಿ ಆಯ್ಕೆ ಮಾಡುವ ಮೂಲಕ ನೀವು ಕೈತುಂಬ ಲಾಭ ಸಂಪಾದನೆ ಮಾಡುವಂತಹ ಅವಕಾಶವನ್ನು ಹೊಂದಿದ್ದೀರಿ. 5 ರಿಂದ 10 ಲಕ್ಷ ರೂಪಾಯಿಗಳವರೆಗೆ ಪ್ರಾರಂಭದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುತ್ತದೆ.
ಆಫೀಸ್ ಸೆಟ್ ಅಪ್, ವಾಹನಗಳು, ಸ್ಟಾಕ್ ಭರ್ತಿ ಮಾಡುವಂತಹ ಅವಶ್ಯಕತೆ ಕೂಡ ಇರುತ್ತದೆ. ಮೂರರಿಂದ ಐದು ಬೈಕುಗಳು ಡೆಲಿವರಿಗಾಗಿ ನಿಮ್ಮ ಬಳಿ ಇರಲೇ ಬೇಕಾಗಿರುತ್ತದೆ. ನಿಮ್ಮ ಬಳಿ ಆಫೀಸಿನಲ್ಲಿ ಕಂಪ್ಯೂಟರ್ ಹಾಗೂ ಪ್ರಿಂಟರ್ ನಂತಹ ಡಿವೈಸ್ ಗಳ ಅವಶ್ಯಕತೆ ಕೂಡ ಇರುತ್ತದೆ.
ಫ್ರಾಂಚೈಸಿ ಗಾಗಿ ರಿಜಿಸ್ಟ್ರೇಷನ್ ಮಾಡಿಸುವುದಕ್ಕಾಗಿ ನಿಮ್ಮ ಬಳಿ, ಬ್ಯಾಂಕ್ ಅಕೌಂಟ್ ನಂಬರ್, ಜಿಎಸ್ಟಿ ರಿಜಿಸ್ಟ್ರೇಷನ್, ಇಮೇಲ್ ಐಡಿ, ಮೊಬೈಲ್ ನಂಬರ್, ಪಾಸ್ಪೋರ್ಟ್ ಸೈಜ್ ಫೋಟೋ, ಫ್ರಾಂಚೈಸಿ ಅಗ್ರಿಮೆಂಟ್ ಡಾಕ್ಯುಮೆಂಟ್ಸ್ ಗಳು ಕೂಡ ಬೇಕಾಗಿರುತ್ತದೆ.
ವರ್ಷಕ್ಕೆ 1.8 ರಿಂದ 3.6 ಕೋಟಿ ರೂಪಾಯಿಗಳವರೆಗು ಕೂಡ ನೀವು ಈ ಉದ್ಯಮದಿಂದ ಟರ್ನ್ಓವರ್ ಮಾಡಬಹುದಾಗಿದೆ. ಲಾಭದ ರೂಪದಲ್ಲಿ ನೀವು ವರ್ಷಕ್ಕೆ 19 ರಿಂದ 40 ಲಕ್ಷ ರೂಪಾಯಿಗಳ ಕಮಾಯಿ ಮಾಡಬಹುದಾಗಿದೆ. ಡೆಲಿವರಿ ಬಾಯ್ ಗೆ ಪ್ರತಿ ಡೆಲಿವರಿ ಮೇಲೆ ಐವತ್ತು ರೂಪಾಯಿಗಳ ಕಮಿಷನ್ ಸಿಗುತ್ತದೆ ಹಾಗೂ ಮಾಲೀಕನಿಗೂ ಕೂಡ ಅಷ್ಟೇ ಕಮಿಷನ್ ಸಿಗುತ್ತದೆ. ನೂರಕ್ಕಿಂತ ಹೆಚ್ಚಿನ ಡೆಲಿವರಿ ಮಾಡುವುದಕ್ಕೆ 5000 ಹೆಚ್ಚುವರಿ ಬೋನಸ್ ಕೂಡ ಸಿಗುತ್ತೆ. ಎಷ್ಟು ಬೇಗ ಡೆಲಿವರಿ ಮಾಡುತ್ತಾರೋ ಅಷ್ಟು ಹೆಚ್ಚು ಲಾಭ ಸಿಗುತ್ತದೆ.