ಇನ್ನೇನು ಮುಂದಿನ ಬಾರಿಯ IPL ನ ಮೆಗಾ ಆಕ್ಷನ್ ಕೆಲವೇ ದಿನಗಳಲ್ಲಿ ನಡೆಯಲಿದೆ. ಯಾರು ಯಾವ ತಂಡಕ್ಕೆ ಸೇರಲಿದ್ದಾರೆ ಹಾಗೂ ಯಾವ ತಂಡಗಳು ಯಾವ ಆಟಗಾರರನ್ನು ತಂಡದಿಂದ ಕೈ ಬಿಡಲಿದ್ದಾರೆ ಎನ್ನುವಂತಹ ಊಹಾಪೋಹಗಳು ಈಗಾಗಲೇ ನಡೆಯುವುದಕ್ಕೆ ಪ್ರಾರಂಭವಾಗಿದೆ. ಅದರಲ್ಲಿ ವಿಶೇಷವಾಗಿ ಇದು ಮೆಗಾ ಆಕ್ಷನ್ ಆಗಿರುವುದರಿಂದಾಗಿ ಯಾವ ಆಟಗಾರ ಯಾವ ತಂಡವನ್ನು ಬೇಕಾದರೂ ಕೂಡ ಸೇರುವಂತಹ ಸಾಧ್ಯತೆ ಹೆಚ್ಚಾಗಿದೆ. ಯಾಕೆಂದ್ರೆ ತಂಡದಲ್ಲಿ ಕೆಲವೇ ನಿರ್ದಿಷ್ಟ ಆಟಗಾರರನ್ನು ಮಾತ್ರ ಉಳಿಸಿಕೊಳ್ಳುವಂತಹ ಅವಕಾಶವನ್ನ ಐಪಿಎಲ್ ತಂಡಗಳಿಗೆ ನೀಡಲಾಗಿದೆ.
ಭಾರತೀಯ ಕ್ರಿಕೆಟ್ ತಂಡದ ಆಟಗಾರ ಆಗಿರುವಂತಹ ರವಿಚಂದ್ರನ್ ಅಶ್ವಿನ್ (Ravichandran Ashwin) ರವರು ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಈ ಒಬ್ಬ ಆಟಗಾರನ ಬಗ್ಗೆ ಮಾತನಾಡಿದ್ದು ಇವರು ಒಂದುವೇಳೆ ಹರಾಜಿಗೆ ಬಂದರೆ ಖಂಡಿತವಾಗಿ ಕನಿಷ್ಠಪಕ್ಷ ಇಪ್ಪತ್ತು ಕೋಟಿ ರೂಪಾಯಿ ಇವರಿಗೆ ನೀಡಬೇಕಾಗಿ ಬರುತ್ತದೆ ಎಂಬುದಾಗಿ ಹೇಳಿದ್ದಾರೆ.
ಒಬ್ಬ ಭಾರತೀಯ ಆಟಗಾರನಿಗೆ 20 ಕೋಟಿ ರೂಪಾಯಿ ಸಿಗುತ್ತೆ ಅಂತ ಅಂದ್ರೆ ನಿಜಕ್ಕೂ ಕೂಡ ಹೆಮ್ಮೆಯ ವಿಚಾರ ಅಂತಾನೇ ಹೇಳಬಹುದಾಗಿದ್ದು, ರವಿಚಂದ್ರನ್ ಅಶ್ವಿನ್ (Ravichandran Ashwin) ರವರ ಪ್ರಕಾರ ಆ ಆಟಗಾರ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಮಾಜಿ ನಾಯಕ ರೋಹಿತ್ ಶರ್ಮ.
ರೋಹಿತ್ ಶರ್ಮಾ (Rohit Sharma) ಅವರನ್ನು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮುಂಬೈ ಇಂಡಿಯನ್ಸ್ ತಂಡ ನಾಯಕನ ಸ್ಥಾನದಿಂದ ಕಳೆದ ಬಾರಿ ಕೆಳಗಿಳಿಸಿದೆ. ಇನ್ನು ಈ ಬಾರಿ ಆಟಗಾರರನ್ನ ರಿಟೇನ್ ಮಾಡಿಕೊಳ್ಳುವ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮ ಅವರನ್ನು ಕೈಬಿಟ್ಟರೆ ಅಥವಾ ರೋಹಿತ್ ಶರ್ಮ (Rohit Sharma) ಖುದ್ದಾಗಿ ತಂಡದಿಂದ ಹೊರಬರುವಂತಹ ನಿರ್ಧಾರ ಮಾಡಿ ಮೆಗಾ ಆಪ್ಷನ್ ನಲ್ಲಿ ತಮ್ಮನ್ನು ತಾವು ರಿಜಿಸ್ಟರ್ ಮಾಡಿಕೊಂಡರೆ ಕನಿಷ್ಠಪಕ್ಷ ಅವರನ್ನು ಖರೀದಿ ಮಾಡುವುದಕ್ಕೆ ತಂಡಗಳು 20 ಕೋಟಿ ಖರ್ಚು ಮಾಡಬೇಕಾಗುತ್ತದೆ ಎನ್ನುವುದು ರವಿಚಂದ್ರನ್ ಅಶ್ವಿನ್ (Ravichandran Ashwin) ರವರ ಅಭಿಪ್ರಾಯವಾಗಿದೆ.
ಅದರಲ್ಲೂ ಮೊದಲ ಟ್ರೋಫಿಯ ಹುಡುಕಾಟದಲ್ಲಿ ಇರುವಂತಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರೋಹಿತ್ ಶರ್ಮ ಅವರಂತಹ ನಾಯಕ ಪ್ರಮುಖವಾಗಿ ಬೇಕಾಗಿರುತ್ತದೆ. ಹೀಗಾಗಿ ಆರ್ಸಿಬಿ ರೋಹಿತ್ ಶರ್ಮ ಅವರನ್ನು ಖರೀದಿ ಮಾಡಬೇಕು ಅಂತ ಅಂದ್ರೆ ಮಿನಿಮಮ್ 20 ಕೋಟಿ ಖರ್ಚು ಮಾಡಬೇಕಾಗಿ ಬರುತ್ತೆ.