ಟೆಲಿಕಾಂ ಇಂಡಸ್ಟ್ರಿಯಲ್ ದಿಗ್ಗಜ ಸಂಸ್ಥೆ ಆಗಿರುವಂತಹ ಜಿಯೋ (Jio) ಈಗ ಎರಡು 4G ಫೋನ್ಗಳನ್ನ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಇದು ಜಿಯೋ ಸಂಸ್ಥೆಯ ಭಾರತ ಸೀರೀಸ್ ನ V2 4G ಫೋನಿನ ಅಪ್ಗ್ರೇಡ್ ಆಗಿರುವಂತಹ ವರ್ಷನ್ ಆಗಿದೆ. ಇದರಲ್ಲಿ 450 ಕಿಂತಲೂ ಹೆಚ್ಚಿನ ಟಿವಿ ಚಾನೆಲ್ ಗಳು ಸೇರಿದಂತೆ ಕಾಲಿಂಗ್ ಹಾಗೂ ಕಡಿಮೆ ಬೆಲೆಯ ಇಂಟರ್ನೆಟ್ ಸೇವೆಗಳನ್ನು ಕೂಡ ನೀಡಲಾಗುತ್ತಿದೆ.
ಜಿಯೋ (Jio) ಸಂಖ್ಯೆ ಲಾಂಚ್ ಮಾಡಿರುವಂತಹ ಈ ಹೊಸ ಫೋನಿನ ಬೆಲೆ 1099 ರೂಪಾಯಿ ಆಗಿದೆ. ಕಂಪನಿ ಈ ಫೋನಿನ ಮೇಲೆ 123 ರೂಪಾಯಿಗಳ ತಿಂಗಳ ರಿಚಾರ್ಜ್ ಪ್ಲಾನ್ ಅನ್ನು ಕೂಡ ನೀಡ್ತಾ ಇದೆ. ಉಚಿತ ಕಾಲಿಂಗ್ ಸೇವೆಯ ಜೊತೆಗೆ 14 ಜಿಬಿ ಇಂಟರ್ನೆಟ್ ಅನ್ನು ಕೂಡ ಗ್ರಾಹಕರಿಗೆ ನೀಡುತ್ತಿದೆ.
V3 ಹಾಗೂ V4 ಫೋನ್ಗಳ ನಡುವೆ ಡಿಸೈನ್ ನಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಾಸವನ್ನು ಕಾಣಬಹುದಾಗಿದೆ. ಎರಡರಲ್ಲೂ 1000mAh ಬ್ಯಾಟರಿ ಹಾಗೂ 128 ಜಿಬಿ ಸ್ಟೋರೇಜ್ ಅನ್ನು ಪಡೆದುಕೊಳ್ಳಬಹುದಾಗಿದೆ. ಮೆಮೊರಿ ಕಾರ್ಡ್ ಸಪೋರ್ಟ್ ಜೊತೆಗೆ 23 ಭಾರತೀಯ ಭಾಷೆಗಳು ಇಲ್ಲಿ ಸಪೋರ್ಟ್ ಆಗುತ್ತೆ.
ಜಿಯೋ ಟಿವಿ (Jio Tv) ಸೇರಿದಂತೆ 455 ಚಾನೆಲ್ ಗಳನ್ನು ಇದರಲ್ಲಿ ನೀವು ಕಾಣಬಹುದಾಗಿದೆ. ಇದರಲ್ಲಿರುವಂತಹ ಆಪ್ಷನ್ ಗಳು ಯಾವುದೇ ಸ್ಮಾರ್ಟ್ ಫೋನ್ ಗಳಿಗೂ ಕೂಡ ಕಡಿಮೆ ಇಲ್ಲದಂತಿವೆ. ಯುಪಿಐ ಪೇಮೆಂಟ್ಗಳು ಹಾಗೂ ಜಿಯೋ ಪೇ ಕೂಡ ಇದರಲ್ಲಿದೆ. ಇಷ್ಟೊಂದು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಎಕ್ಸ್ಪೀರಿಯನ್ಸ್ ನೀಡುವಂತಹ ಮತ್ತೊಂದು ಫೋನ್ ನಿಮಗೆ ಮಾರುಕಟ್ಟೆಯಲ್ಲಿ ಸಿಗುವುದು ಅಸಾಧ್ಯವೇ ಸರಿ.