ರಾಜ್ಯ ದಲ್ಲಿ ಗ್ಯಾರಂಟಿ ಯೋಜನೆಗಳ ಸದ್ದು ಜೋರಾಗಿಯೇ ನಡೆಯುತ್ತಿದೆ. ಅದರಲ್ಲಿ ಮಹಿಳಾ ಪರವಾದ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಹೆಚ್ಚು ಸುದ್ದಿ ಮಾಡುತ್ತಿದೆ. ಮನೆಯ ಹಿರಿಯ ಮಹಿಳೆಗೆ ಸರಕಾರವು ತಿಂಗಳಿಗೆ ಎರಡು ಸಾವಿರ ಮೊತ್ತವನ್ನು ಬಿಡುಗಡೆ ಮಾಡುತ್ತಿದೆ. ಆದರೆ ಎರಡು ಮೂರು ತಿಂಗಳ ಗೃಹಲಕ್ಷ್ಮಿ ಹಣವು ಮಹಿಳೆಯರ ಖಾತೆಗೆ ಇನ್ನೂ ಜಮೆಯಾಗಿಲ್ಲ.ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹಣ ಬಾರದೇ ಇರೋ ಮಹಿಳೆಯರಿಗೆ ಒಟ್ಟಿಗೇ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುದಾಗಿ ಹೇಳಿದ್ದರು.
ಜೂನ್ ಹಾಗೂ ಜುಲೈ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಕೂಡ ಬಂದಿಲ್ಲ ಎಂದು ಆರೋಪ ಕೇಳಿಬಂದಿದೆ.ಇದರ ಬೆನ್ನಲ್ಲೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಗೃಹಲಕ್ಷ್ಮಿ ಹಣ ಬಿಡುಗಡೆ ಯಾಗಲು ತಾಂತ್ರಿಕ ದೋಷ ಉಂಟಾಗಿದ್ದು ಜೆಎಸ್ಟಿ, ಐಟಿ ಅವರಿಂದ ಸಹಕಾರ ಸಿಕ್ಕಿಲ್ಲ. ಹೀಗಾಗಿ ಸಮಸ್ಯೆ ಆಗಿದೆ ಎಂದಿದ್ದಾರೆ.
ಒಟ್ಟಿಗೆ ಹಣ ಜಮೆ!
ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಮಾತನಾಡಿ ಎರಡು ಕಂತಿನ ಹಣವನ್ನು ಈಗಾಗಲೇ ಜಮೆ ಮಾಡಿದ್ದೇವೆ. ಎಲ್ಲಾ ಜಿಲ್ಲೆಯ ವರಿಗೂ ಈಗಾಗಲೇ ಎರಡು ತಿಂಗಳ ಹಣ ಜಮೆ ಮಾಡಿದ್ದು ಹದಿನಾಲ್ಕು ಬಿಲ್ಗಳನ್ನು ಟ್ರೆಜರಿಗೆ ಹಾಕಲಾಗಿದ್ದು ಇಂದು ಅಥವಾ ನಾಳೆ ಮಹಿಳೆಯರ ಖಾತೆಗೆ ಹಣ ಜಮೆ ಯಾಗಬಹುದು.
ನಾಳೆಹಣ ಜಮೆ!
ಈಗಾಗಲೇ ಮೊದಲ ಹಂತದಲ್ಲಿ ಪ್ರಸ್ತುತ ಬೀದರ್, ಬೆಳಗಾವಿ, ಕಲಬುರಗಿ, ಬಳ್ಳಾರಿ, ವಿಜಯಪುರ, ಗದಗ, ಹಾವೇರಿ, ಬಾಗಲಕೋಟೆ, ಕೊಪ್ಪಳ, ಯಾದಗಿರಿ, ಚಿತ್ರದುರ್ಗ, ಬೆಂಗಳೂರು ಮತ್ತು ಕೋಲಾರ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಯ ಹಣ ಜಮೆ ಆಗಿದ್ದು, ನಾಳೆ ಎರಡು ಘಂಟೆಗೆ ಹಾಗೆ ಮಹಿಳೆಯರ ಖಾತೆಗೆ ಹಣ ಜಮೆ ಯಾಗಬಹುದು.
ತಾಂತ್ರಿಕ ಸಮಸ್ಯೆ!
ಗೃಹಲಕ್ಷ್ಮಿ ಹಣ (Gruha Lakshmi Money) ಬಿಡುಗಡೆಯಾಗಲು ತಾಂತ್ರಿಕ ದೋಷ ಉಂಟಾಗಿದ್ದು ಜೆಎಸ್ಟಿ, ಐಟಿ ಅವರಿಂದ ಸಹಕಾರ ಸಿಕ್ಕಿಲ್ಲ. ಹೀಗಾಗಿ ಸಮಸ್ಯೆ ಆಗಿದೆ ಎಂದಿದ್ದಾರೆ.ಜುಲೈ ತಿಂಗಳು ಹಾಗೂ ಆಗಸ್ಟ್,ಸೆಪ್ಟೆಂಬರ್ ತಿಂಗಳಿನ ಗೃಹಲಕ್ಷ್ಮಿ ಹಣ ಇನ್ನೂ ಖಾತೆಗೆ ಜಮೆ ಯಾಗಲು ಬಾಕಿ ಇದ್ದು ಒಟ್ಟು ಮೂರು ತಿಂಗಳ ಹಣ ಗೃಹಲಕ್ಷ್ಮಿಯರ ಖಾತೆ ಸೇರಬೇಕಿದೆ. ಅಂದರೆ ಒಟ್ಟು ರೂ. 6000 ಹಣ ಗೃಹಲಕ್ಷ್ಮಿಯರ ಖಾತೆಗೆ ಜಮೆ ಯಾಗಬೇಕಿದೆ.
ಹೀಗಾಗಿ ನಾಳೆ 13ನೇಕಂತಿನ ಹಣ ಮಹಿಳೆಯರಿಗೆ ಜಮೆ ಆಗಲಿದ್ದು ಮಹಿಳೆಯರು ಸ್ಟೇಟಸ್ ಚೆಕ್ ಮಾಡುವ ಮೂಲಕ ತಮಗೆ ಹಣ ಬಂದಿರುವ ಬಗ್ಗೆ ಚೆಕ್ ಮಾಡಿ ಕೊಳ್ಳಬಹುದು. ಇನ್ನುಳಿದ ಜಿಲ್ಲೆಯ ಮಹಿಳೆ ಯರಿಗೂ ಅತೀ ಶೀಘ್ರದಲ್ಲೇ ಹಣ ಜಮೆಯಾಗಬಹುದು.