ಪ್ರತಿಯೊಬ್ಬರ ಸಿಬಿಲ್ ಸ್ಕೋರ್ (CIBIL Score) ಅನ್ನು ಗಮನಿಸಿದ ನಂತರವಷ್ಟೇ ಬ್ಯಾಂಕಿನವರು ಅವರಿಗೆ ಲೋನ್ ಕೊಡಬೇಕಾ ಬೇಡವಾ ಎನ್ನುವಂತಹ ನಿರ್ಧಾರವನ್ನು ಮಾಡ್ತಾರೆ. ಒಂದು ವೇಳೆ ನೀವು ಪಡೆದುಕೊಂಡಿರುವಂತಹ ಸಾಲ (Loan) ವನ್ನು ಸರಿಯಾದ ರೀತಿಯಲ್ಲಿ ಮರುಪಾವತಿ ಮಾಡದೆ ಹೋದಲ್ಲಿ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಹಾಳಾಗುತ್ತದೆ ಅನ್ನೋದನ್ನ ಕೂಡ ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 1 ನೇ ತಾರೀಖಿನಿಂದ ಸಿಬಿಲ್ ಸ್ಕೋರ್ ನಿಯಮಗಳಲ್ಲಿ ಕೆಲವೊಂದು ಪ್ರಮುಖ ಅಪ್ಡೇಟ್ ಗಳನ್ನು ತರ್ತಾ ಇದ್ದು, ಇದರ ಬಗ್ಗೆ ನೀವು ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿರುವುದು ಅಗತ್ಯವಾಗಿದೆ.
- 2025ರ ಜನವರಿ ಒಂದನೇ ತಾರೀಖಿನಿಂದ ಪ್ರಾರಂಭಗೊಂಡು ಇನ್ಮೇಲೆ ಸಿಬಿಲ್ ಸ್ಕೋರ್ (CIBIL Score) ಅಥವಾ ಕ್ರೆಡಿಟ್ ಸ್ಕೋರ್ (Credit Score) ಪ್ರತಿ ಹದಿನೈದು ದಿನಗಳಿಗೊಮ್ಮೆ ಅಪ್ಡೇಟ್ ಆಗುತ್ತೆ. ಇದು ಮೊದಲು ತಿಂಗಳಿಗೆ ಒಂದು ಬಾರಿ ಮಾತ್ರ ಆಗ್ತಾ ಇತ್ತು. ಇದು ನಿಮ್ಮ ಸಿಬಿಲ್ ಸ್ಕೋರ್ ಸುಧಾರಿಸಿಕೊಳ್ಳುವಲ್ಲಿ ಕೂಡ ಸಹಾಯಕವಾಗಲಿದೆ.
- ಯಾವುದೇ ಬ್ಯಾಂಕ್ ಅಥವಾ ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನಿಗಳು ನಿಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡುವುದಕ್ಕಿಂತ ಮುಂಚೆ ನಿಮ್ಮ ಅನುಮತಿಯನ್ನು ಪಡೆದುಕೊಳ್ಳುವಂತಹ ಸೂಚನೆ ಇದೆ. ಒಂದು ವೇಳೆ ನಿಮ್ಮ ಅನುಮತಿ ಇಲ್ಲದೆ ಯಾರೇ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಚೆಕ್ ಮಾಡಿದ್ರೂ ಕೂಡ ಅದರ ಬಗ್ಗೆ ನಿಮಗೆ ನೋಟಿಫಿಕೇಶನ್ ಸಿಗಲಿದೆ.
- ಯಾವುದೇ ಸಂಸ್ಥೆಗಳು ಸಾಲದ ರಿಕ್ವೆಸ್ಟ್ ಅನ್ನು ರಿಜೆಕ್ಟ್ ಮಾಡಿದರೆ ಅದರ ಕಾರಣಗಳನ್ನು ಗ್ರಾಹಕರಿಗೆ ತಿಳಿಸುವುದು ಕಡ್ಡಾಯವಾಗಿದೆ. ಇದರಿಂದಾಗಿ ಯಾಕಾಗಿ ಕ್ರೆಡಿಟ್ ರಿಕ್ವೆಸ್ಟ್ ರಿಜೆಕ್ಟ್ ಆಗಿದೆ ಎನ್ನುವ ಮಾಹಿತಿ ಗ್ರಾಹಕರಿಗೆ ದೊರಕುತ್ತದೆ ಹಾಗೂ ಅದನ್ನು ಅವರು ಇನ್ನಷ್ಟು ಉತ್ತಮಗೊಳಿಸುವಂತಹ ಪ್ರಯತ್ನ ಮಾಡಬಹುದಾಗಿದೆ.
- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜಾರಿಗೆ ತಂದಿರುವಂತಹ ಹೊಸ ನಿಯಮಗಳ ಪ್ರಕಾರ ಕ್ರೆಡಿಟ್ ಇನ್ಫಾರ್ಮಶನ್ ಕಂಪನಿಗಳು ವರ್ಷಕ್ಕೆ ಒಮ್ಮೆ ಉಚಿತವಾಗಿ ಕ್ರೆಡಿಟ್ ರಿಪೋರ್ಟ್ ಅನ್ನು ಗ್ರಾಹಕರಿಗೆ ನೀಡಬೇಕಾಗಿರುತ್ತದೆ. ಈ ಮೂಲಕ ತಾವು ಇನ್ನು ಎಷ್ಟು ಸಾಲವನ್ನು ಕಟ್ಟೋದು ಬಾಕಿ ಇದೆ ಅಥವಾ ಯಾವೆಲ್ಲ ಸಾಲಗಳು ಬಾಕಿ ಇದೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.
- ಯಾವುದೇ ಸಮಸ್ಯೆಗಳಿದ್ದರೂ ಕೂಡ ಕ್ರೆಡಿಟ್ ಇನ್ಫಾರ್ಮಶನ್ ಕಂಪನಿಗಳು 30 ದಿನಗಳ ಒಳಗಾಗಿ ಆ ದೂರನ್ನು ಬಗೆಹರಿಸಬೇಕಾಗಿರುತ್ತದೆ ಹಾಗೂ ಆ ರೀತಿ ಮಾಡದೆ ಹೋದಲ್ಲಿ 30ನೇ ದಿನದ ನಂತರ ಪ್ರತಿ ದಿನಕ್ಕೆ ರೂ.100 ಗಳ ಶುಲ್ಕವನ್ನ ಗ್ರಾಹಕರಿಗೆ ನೀಡಬೇಕಾಗಿರುತ್ತದೆ.
- ಒಂದು ವೇಳೆ ನೀವು ಇಎಂಐ ಕಂತನು ಸರಿಯಾದ ರೀತಿಯಲ್ಲಿ ಪಾವತಿ ಮಾಡುತ್ತಿಲ್ಲ ಎಂದಾದಲ್ಲಿ ಕಂಪನಿಗಳು ನಿಮಗೆ ಮುಂಚಿತವಾಗಿ ಎಸ್ಎಂಎಸ್ ಅಥವಾ ಇಮೇಲ್ ಮೂಲಕ ಸೂಚನೆ ಅದಾದ ನಂತರವಷ್ಟೇ ನಿಮ್ಮನ್ನ ಡಿಪಾರ್ಟೆರ್ ಎಂಬುದಾಗಿ ಘೋಷಿಸಬಹುದಾಗಿದೆ.