ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದ ಬ್ಯಾಂಕಿಂಗ್ ಕ್ಷೇತ್ರದ ಅತ್ಯಂತ ದೊಡ್ಡ ಹಾಗೂ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಬ್ಯಾಂಕ್ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸರ್ಕಾರಿ ಸ್ವಾಮ್ಯತ್ವದಲ್ಲಿ ಇರುವಂತಹ ಬ್ಯಾಂಕಿಂಗ್ ಸಂಸ್ಥೆಯಾಗಿದೆ. ಒಂದು ವೇಳೆ ನೀವು ಪರ್ಸನಲ್ ಲೋನ್ (Personal Loan) ಅಗತ್ಯ ಇದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಿಂದ 5 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ ಅನ್ನು ಪಡೆದುಕೊಂಡರೆ ಯಾವ ರೀತಿಯಲ್ಲಿ ಅದನ್ನು ಮರುಪಾವತಿ ಮಾಡಬೇಕಾಗಿರುತ್ತದೆ ಹಾಗೂ ತಿಂಗಳಿಗೆ ಎಷ್ಟು ಇಎಂಐ ಕಟ್ಟಬೇಕಾಗುತ್ತೆ ಅನ್ನುವ ಮಾಹಿತಿಯನ್ನು ನೀವು ಮುಂಚಿತವಾಗಿ ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗಿರುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪರ್ಸನಲ್ ಮಾಹಿತಿ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪರ್ಸನಲ್ ಲೋನ್ (Personal Loan) ಮೇಲೆ 11.45 ಪ್ರತಿಶತ ಬಡ್ಡಿ ದರವನ್ನು ವಿಧಿಸಲಾಗುತ್ತದೆ ಹಾಗೂ ಪರ್ಸನಲ್ ಲೋನ್ ಅನ್ನು ಅಸುರಕ್ಷಿತ ಲೋನ್ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗಾಗಿ ಪರ್ಸನಲ್ ಲೋನ್ ಗಳು ಬ್ಯಾಂಕುಗಳಿಗೆ ಮರುಪಾವತಿಯ ಅಪಾಯವನ್ನು ಹೆಚ್ಚಿಸುವಂತಹ ಲೋನ್ ಗಳಾಗಿರುತ್ತವೆ. ಎಲ್ಲಕ್ಕಿಂತ ಪ್ರಮುಖವಾಗಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ನಿಮ್ಮ ಸಿಬಿಲ್ ಸ್ಕೋರ್ 800 ಅಂಕಗಳ ಮೇಲೆ ಇರಬೇಕಾಗಿರುತ್ತದೆ.
ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಇರುವಂತಹ ನಿಯಮವಾಗಿದೆ. ಒಂದು ವೇಳೆ ನೀವು 5 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ ಅನ್ನು ಐದು ವರ್ಷದ ಅವಧಿಗೆ ಪಡೆದುಕೊಂಡರೆ ಪ್ರತಿ ತಿಂಗಳು ಕಟ್ಟಬೇಕಾಗಿರುವಂತಹ ಇಎಂಐ ಹಣ ಎಷ್ಟು ಎನ್ನುವುದನ್ನು ತಿಳಿಯೋಣ.
ಐದು ವರ್ಷಗಳ ಅವಧಿಗೆ ಪಡೆದುಕೊಂಡಿರುವಂತಹ 5 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ (Personal Loan) ಗಾಗಿ ನೀವು ಪ್ರತಿ ತಿಂಗಳು 10,984 ರೂಪಾಯಿಗಳ EMI ಅನ್ನು ಕಟ್ಟಿಕೊಂಡು ಹೋಗಬೇಕಾಗಿರುತ್ತದೆ. ಅಂದರೆ ಪಡೆದುಕೊಂಡಿರುವಂತಹ 5 ಲಕ್ಷ ರೂಪಾಯಿಗಳ ಸಾಲಕ್ಕಾಗಿ ನೀವು ಹೆಚ್ಚುವರಿ ಆಗಿ ಬಡ್ಡಿ ರೂಪದಲ್ಲಿ 1.59 ಲಕ್ಷ ರೂಪಾಯಿಗಳನ್ನು ಹೆಚ್ಚಾಗಿ ಕಟ್ಟ ಬೇಕಾಗಿರುತ್ತದೆ. ಅಂದ್ರೆ ಪಡೆದುಕೊಂಡಿರುವಂತಹ 5 ಲಕ್ಷ ರೂಪಾಯಿಗಳನ್ನು ನೀವು ಐದು ವರ್ಷಗಳ ನಂತರ ಕಟ್ಟುವಾಗ ಒಟ್ಟಾರೆಯಾಗಿ 6.59 ಲಕ್ಷ ರೂಪಾಯಿಗಳ ಪಾವತಿಯನ್ನು ಮಾಡಿರುತ್ತೀರಿ.