ಇಂದು ಪ್ರತಿಯೊಂದು ವ್ಯಕ್ತಿಗೂ ಕೂಡ ಸ್ವಂತವಾದ ಮನೆ ನಿರ್ಮಾಣ ಮಾಡಬೇಕು ಎನ್ನುವ ಕನಸು ಇರು ವುದು ಸಾಮಾನ್ಯ. ಆದರೆ ಎಲ್ಲ ರಿಗೂ ಸ್ವಂತ ಮನೆ ನಿರ್ಮಾಣ ಮಾಡಲು ಸಾಧ್ಯ ಇರೋದಿಲ್ಲ. ಹೆಚ್ಚಿನ ಜನರು ಬಾಡಿಗೆ ಮನೆ (Rent House) ಯಲ್ಲಿ ವಾಸ ಮಾಡು ತ್ತಾರೆ. ಇಂದು ಮನೆ ಬಾಡಿಗೆ ನೀಡುವ ಮೂಲಕ ಹಣ ಸಂಪಾದನೆ ಮಾಡು ವ ಬಹಳಷ್ಟು ಮಂದಿ ಇರಲಿದ್ದು ಇದೀಗ ಬಾಡಿಗೆ ನೀಡುವ ಮಾಲೀಕ ರಿಗೂ ಸರಕಾರ ಹೊಸ ನಿಯಮ ಜಾರಿ ಮಾಡಿದೆ. ಈ ನಿಯಮ ಪಾಲಿಸದಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಸರಕಾರ ತಿಳಿಸಿದೆ.
ಮನೆಯ ಮಾಲೀಕರು ಮನೆಯನ್ನು ಬಾಡಿಗೆಗೆ ನೀಡುವುದಾದರೆ ಕೆಲವು ನಿಯಮವನ್ನು ಪಾಲಿಸಲೇ ಬೇಕು. ಅದರಲ್ಲಿ ಮುಖ್ಯವಾಗಿ ಬಾಡಿಗೆ ಒಪ್ಪಂದ ಕೂಡ ಒಂದಾಗಿದೆ. ಮನೆ ಯ ಬಾಡಿಗೆ ಒಪ್ಪಂದ ಅಂದರೆ ಅಗ್ರಿ ಮೆಂಟ್ ಮಾಡಿಸಬೇಕು. ಇದನ್ನು ಪ್ರತಿ 11 ತಿಂಗಳಿಗೊಮ್ಮೆ ಈ ಒಪ್ಪಂದವನ್ನು ನವೀಕರಿಸಬೇಕು ಎನ್ನುವ ನಿಯಮ ಕೂಡ ಇದೆ.
ಹಾಗೆಯೇ ಬಾಡಿಗೆ ಒಪ್ಪಂದಕ್ಕೆ ಸಹಿ ಮಾಡಿದ ನಂತರ, ಮನೆಯು ಬಾಡಿಗೆದಾರರ ಸ್ವಾಧೀನ ಕ್ಕೆ ಬರಲಿದ್ದು ಮನೆಯ ಮಾಲೀಕನು ಮತ್ತೆ ನಿಯಮ ಹಾಕುವಂತಿಲ್ಲ. ನಿಮ್ಮ ಅನುಮತಿಯಿಲ್ಲದೆ ಮನೆಯ ಮಾಲೀಕರು ಫ್ಲಾಟ್ ಅನ್ನು ಪ್ರವೇಶಿ ಸಲು ಸಾಧ್ಯವಿಲ್ಲ.
ಇದೀಗ ಬಂದ ಹೊಸ ನಿಯಮ ಸಾಮಾನ್ಯ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ಈ ನಿರ್ಧಾರ ಮಾಡಿದ್ದು ಮನೆಗಳನ್ನು ಬಾಡಿಗೆಗೆ (Rent House) ನೀಡುವ ನಿಯಮದಲ್ಲಿ ಬದಲಾವಣೆ ಮಾಡಿದೆ. ಬಂದಿರುವ ಹೊಸ ನಿಯಮದ ಪ್ರಕಾರ ಯಾರು ತಮ್ಮ ಮನೆಯನ್ನು ಬಾಡಿಗೆಗೆ ನೀಡುತ್ತಾ ರೋ ಅವರೇ ಇನ್ಮುಂದೆ ಈಮನೆಯ ತೆರಿಗೆಯನ್ನು ಸರ್ಕಾರಕ್ಕೆ ತೆರಿಗೆ ಯನ್ನು ನೀಡಬೇಕಾಗುತ್ತದೆ.
ಆದಾಯ ಖಚಿತಪಡಿಸಬೇಕು!
ಹಾಗೆಯೇ ಮನೆಯ ಮಾಲೀಕನು ಬಾಡಿಗೆ ಮನೆಯಿಂದ ಬರುವ ಆದಾಯ ಎಷ್ಟು ಎನ್ನುವುದನ್ನು ಖಚಿತ ಪಡಿಸಬೇಕು. ಹಾಗೆಯೇ ಇದು ಮನೆಯ ಆಸ್ತಿಯಿಂದ ಬಂದ ಆದಾಯವೆಂದು ವಿವರ ತೋರಿಸ ಬೇಕಾಗುತ್ತದೆ. ಇದಕ್ಕಾಗಿ ಬಾಡಿಗೆ ದಾರರು ತಮ್ಮ ಮನೆ ಆಸ್ತಿಯಿಂದ ಬರುವ ಆದಾಯದ ಮೇಲೆ ತೆರಿಗೆಯನ್ನು ಪಾವತಿಸ ಬೇಕಾಗುತ್ತದೆ. ಹಾಗಾಗಿ ಇನ್ನು ಮುಂದೆ ಬಾಡಿಗೆ ಮನೆಯಿಂದ ಬರುವ ಆದಾಯದ ಮೇಲೆ ತೆರಿಗೆ ವಿಧಿಸಲಿದ್ದು 2025ರ ಏಪ್ರಿಲ್ 1ರಿಂದ ಇದು ಅನ್ವಯವಾಗಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ಸ್ಪಷ್ಟನೆ ನೀಡಿದ್ದಾರೆ.