ರಾಜ್ಯ ಸರಕಾರವು ಈ ಭಾರಿ ಮಹಿಳಾ ಪರವಾದ ಯೋಜನೆ ಗಳನ್ನು ಹೆಚ್ಚು ಜಾರಿ ಮಾಡಿದೆ. ಅದರಲ್ಲಿ ಗೃಹಲಕ್ಷ್ಮಿ (Gruha Lakshmi) ಮತ್ತು ಶಕ್ತಿ ಯೋಜನೆ (Shakti Yojana) ಕೂಡ ಒಂದಾಗಿದ್ದು ಮಹಿಳೆಯರು ಸರಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡುವ ಜೊತೆಗೆ ತಿಂಗಳಿಗೆ ಎರಡು ಸಾವಿರ ಮೊತ್ತ ವನ್ನು ಕೂಡ ಪಡೆಯುತ್ತಿ ದ್ದಾರೆ. ಹೌದು ಮನೆಯ ಹಿರಿಯ ಮಹಿಳೆಯ ಖಾತೆಗೆ ತಿಂಗಳಿಗೆ ಎರಡು ಸಾವಿರ ಮೊತ್ತ ವನ್ನು ಸರಕಾರ ಜಮೆ ಮಾಡುತ್ತಿದೆ. ಆದರೆ ಎರಡು ಮೂರು ತಿಂಗಳ ಹಣ ಮಹಿಳೆಯರ ಖಾತೆಗೆ ಜಮೆ ಯಾಗಿಲ್ಲ.ಇದೀಗ ಈ ಬಗ್ಗೆ ಗುಡ್ ನ್ಯೂಸ್ ಮಾಹಿತಿ ಯೊಂದು ಬಂದಿದ್ದು ಎರಡು ತಿಂಗಳ ಹಣ ಮಹಿಳೆಯರ ಖಾತೆಗೆ ಒಟ್ಟಿಗೆ ಜಮೆಯಾಗಲಿದೆ.
ಹಣ ಒಟ್ಟಿಗೆ ಜಮೆ!
ಜುಲೈ, ಆಗಸ್ಟ್ ತಿಂಗಳ ಗೃಹಲಕ್ಷ್ಮೀ ಹಣ (Gruha Lakshmi Money) ವು ಕೆಲವೊಂದು ತಾಂತ್ರಿಕ ಕಾರಣದಿಂದ ಖಾತೆಗೆ ಹಣ ಬಂದಿರ ಲಿಲ್ಲ. ಹಾಗಾಗಿ ಮಹಿಳೆಯರು ಹಣ ಬಂದಿಲ್ಲ ಎಂದು ಬೇಸರ ಗೊಂಡಿದ್ದರು. ಇದೀಗ ಎರಡು ಕಂತಿನ ಹಣವನ್ನು ಸರಕಾರ ಒಟ್ಟಿಗೆ ಜಮೆ ಮಾಡಿದೆ. ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಜುಲೈ, ಆಗಸ್ಟ್ ತಿಂಗಳ ಹಣ 2000 ರೂ.ಅಂದರೆ ನಾಲ್ಕು ಸಾವಿರ ಹಣ ವರ್ಗಾವಣೆ ಆಗಿದ್ದು, ಸದ್ಯ ಬಾಕಿ ಇರುವ ಹಣ ಶೀಘ್ರದಲ್ಲೇ ಮಹಿಳೆಯರ ಖಾತೆಗೆ ಬರ ಲಿದೆ. ಹಾಗಾಗಿ ದೀಪಾವಳಿ ಒಳ ಗಾಗಿ ಎಲ್ಲಾ ಗೃಹಲಕ್ಷ್ಮಿಯರಿಗೂ ಅಗಸ್ಟ್, ಸೆಪ್ಟೆಂಬರ್ ತಿಂಗಳಿನ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಬರಲಿದೆ.
ಇಂತವರಿಗೆ ಹಣ ಇಲ್ಲ!
ಗೃಹಲಕ್ಷ್ಮಿ ಹಣ (Gruha Lakshmi Money) ಹಾಕಲು ಕೂಡ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹೌದು ಆದಾಯ ತೆರಿಗೆ ಪಾವತಿಸುವ ಹಾಗೂ ಜಿಎಸ್ಟಿ ಸಂಖ್ಯೆ ಹೊಂದಿರುವ ಮಹಿಳೆ ಯರನ್ನು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದ್ದು ಇಂತವರಿಗೆ ಗೃಹಲಕ್ಷ್ಮಿ ಹಣ ಬರಲ್ಲ. ಅರ್ಹರಿಗೆ ಮಾತ್ರವೇ ಗೃಹಲಕ್ಷ್ಮಿ ಹಣ ವನ್ನು ಖಾತೆಗೆ ಹಾಕಲಿದೆ.
ಹಣ ಬಂದಿರುವ ಬಗ್ಗೆ ಚೆಕ್ ಮಾಡಿ!
ಹಣ ಬಂದಿರುವ ಬಗ್ಗೆ ಮಹಿಳೆಯರು ಚೆಕ್ ಮಾಡಲು ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ನಲ್ಲಿ DBT Karnataka ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಕೊಂಡು ಬಳಿಕ ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ಮೊಬೈಲ್ ನಂಬರ್ ಹಾಕಿ ಬಳಿಕ ಓಟಿಪಿಯನ್ನು ಹಾಕಿ, ನಂತರ ನಾಲ್ಕು ಡಿಜಿಟ್ ಇರುವ ಯಾವುದೇ ಕೋಡನ್ನು ಕ್ರಿಯೇಟ್ ಮಾಡಿ ಹಣ ಜಮೆಯಾಗಿರುವ ಬಗ್ಗೆ ತಿಳಿದುಕೊಳ್ಳಿ.