ಆಧಾರ್ ಕಾರ್ಡ್ (Aadhaar Card) ಪ್ರತಿಯೊಬ್ಬ ಭಾರತೀಯನ ಅತ್ಯಂತ ಪ್ರಮುಖವಾಗಿರುವಂತಹ ಗುರುತು ಪತ್ರವಾಗಿರುತ್ತದೆ. ಆದರೆ ಇದನ್ನ ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ಕೂಡ ಅದನ್ನು ಹೊಂದಿದವರ ಕರ್ತವ್ಯ ಆಗಿರುತ್ತದೆ ಹಾಗೂ ಆ ರೀತಿಯ ವ್ಯವಸ್ಥೆಯನ್ನು ಕೂಡ ಜಾರಿಗೆ ತರೋದು ಸರ್ಕಾರದ ಕರ್ತವ್ಯ ಆಗಿರುತ್ತದೆ. ಆಧಾರ್ ಕಾರ್ಡ್ (Aadhaar Card) ಅನ್ನು ಬೇರೆಯವರು ನಕಲು ಮಾಡಿ ಬೇರೆ ತಪ್ಪು ಕೆಲಸಗಳಿಗೆ ಉಪಯೋಗಿಸದೆ ಇರಲಿ ಎನ್ನುವ ಕಾರಣಕ್ಕಾಗಿ ಕೆಲವೊಂದು ಅಪ್ಡೇಟ್ಗಳನ್ನು ಕೂಡ ಜಾರಿಗೆ ತರಲಾಗಿದ್ದು ಅವುಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಪ್ರಮುಖವಾಗಿದೆ.
- ಆಧಾರ್ ಕಾರ್ಡ್ (Aadhaar Card) ಇಲ್ಲದೆ ಯಾವುದೇ ರೀತಿಯ ಸರ್ಕಾರಿ ಸೇವೆಗಳು ಲಭ್ಯ ಇರೋದಿಲ್ಲ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಿದೆ. ಸರ್ಕಾರ ನೀಡುವಂತಹ ಯಾವುದೇ ಸೇವೆಗಳನ್ನು ಪಡೆದುಕೊಳ್ಳುವುದಕ್ಕೆ ಪ್ರತಿಯೊಬ್ಬರ ಬಳಿ ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಬೇಕಾಗಿರುತ್ತದೆ ಹಾಗೂ ಒಂದು ವೇಳೆ ಹತ್ತು ವರ್ಷಕ್ಕಿಂತ ಹಳೆಯದಾಗಿರುವಂತಹ ಆಧಾರ್ ಕಾರ್ಡ್ ನಿಮ್ಮ ಬಳಿ ಇದ್ದರೆ ಅವುಗಳನ್ನು ಅಪ್ಡೇಟ್ ಮಾಡಿಕೊಳ್ಳಬೇಕಾಗಿರುವುದು ಕೂಡ ಪ್ರಮುಖವಾಗಿದೆ.
- ಒಂದು ವೇಳೆ ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯಲ್ಲಿ ಮಾಹಿತಿಗಳು ತಪ್ಪಾಗಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳ ಬೇಕಾಗಿರುವುದು ಕೂಡ ಅನಿವಾರ್ಯವಾಗಿದೆ. ನಿಗದಿತ ದಿನಾಂಕದೊಳಗೆ ಅಧಿಕೃತ ವೆಬ್ಸೈಟ್ ನಿಂದ ಅಪ್ಡೇಟ್ ಮಾಡಿದರೆ ಯಾವುದೇ ರೀತಿಯ ಶುಲ್ಕ ಪಾವತಿ ಮಾಡಬೇಕಾಗಿರುವುದಿಲ್ಲ ಹಾಗೂ ನಿಗದಿತ ದಿನಾಂಕದ ನಂತರ ಅಪ್ಡೇಟ್ ಮಾಡುವುದಾದರೆ ರೂ. 50 ಶುಲ್ಕವನ್ನು ಕಟ್ಬೇಕು.
- ಯಾವುದೇ ಕಾರಣಕ್ಕೂ ನಿಮ್ಮ ಆಧಾರ್ ಕಾರ್ಡ್ (Aadhaar Card) ಇನ್ಫರ್ಮೇಷನ್ ಅನ್ನು ಅನವಶ್ಯಕವಾಗಿ ಯಾವುದೇ ವೆಬ್ಸೈಟ್ ಗಳಲ್ಲಿ ಅಥವಾ ಯಾರೊಂದಿಗೂ ಹಂಚಿಕೊಳ್ಳುವುದಕ್ಕೆ ಹೋಗಬೇಡಿ ಯಾಕೆಂದರೆ ಇದರಿಂದ ಅವರು ಯಾವುದೇ ರೀತಿಯ ಸ್ಕ್ಯಾಮ್ ಮಾಡಿದರು ಕೂಡ ಅದರ ಕಷ್ಟವನ್ನು ನೀವು ಅನುಭವಿಸಬೇಕಾಗಿರುತ್ತದೆ.
- ಮಗುವಿಗೆ ಆರು ತಿಂಗಳಿಗಿಂತ ಹೆಚ್ಚು ವಯಸ್ಸು ಆಗಿದ್ದರೆ ಆ ಮಗುವಿಗೆ ಆಧಾರ್ ಕಾರ್ಡ್ ಮಾಡುವುದು ಕೂಡ ಅನಿವಾರ್ಯವಾಗಿದೆ. ಸರ್ಕಾರದಿಂದ ಮಕ್ಕಳಿಗೆ ಸಿಗುವಂತಹ ಸೇವೆಗಳು ಕೂಡ ಆಧಾರ್ ಕಾರ್ಡ್ ಅನ್ನು ಪ್ರಮುಖವಾಗಿ ಬಯಸುತ್ತವೆ. ಶಿಕ್ಷಣ, ಚಿಕಿತ್ಸೆ ಹಾಗೂ ಇನ್ನೂ ಪ್ರಮುಖ ಕ್ಷೇತ್ರಗಳ ಸೇವೆಯನ್ನು ಪಡೆದುಕೊಳ್ಳುವುದಕ್ಕೆ ಮಕ್ಕಳಿಗೆ ಕೂಡ ಆಧಾರ್ ಕಾರ್ಡ್ ಪ್ರಮುಖವಾಗಿರುತ್ತದೆ.
- ಆಧಾರ್ ಕಾರ್ಡ್ ವಿಚಾರದಲ್ಲಿ ಬಯೋಮೆಟ್ರಿಕ್ ಪರೀಕ್ಷೆ ಅಥವಾ ವೆರಿಫಿಕೇಶನ್ ಅತ್ಯಂತ ಪ್ರಮುಖವಾಗಿ ಬೇಕಾಗಿರುತ್ತದೆ. ಆಧಾರ್ ಕಾರ್ಡಿನ ಸುರಕ್ಷತೆಗಾಗಿ ಬಯೋಮೆಟ್ರಿಕ್ ವೆರಿಫಿಕೇಶನ್ ಅನ್ನು ಮಾಡಿಸಿಕೊಳ್ಳಬೇಕಾಗಿರುವುದು ಕೂಡ ಅತ್ಯಂತ ಪ್ರಮುಖವಾಗಿದೆ ಎಂಬುದನ್ನ ಅಪ್ಡೇಟ್ಗಳಲ್ಲಿ ಸರ್ಕಾರದ ಮೂಲಗಳು ತಿಳಿಸಿವೆ.