Flipkart ಇ ಕಾಮರ್ಸ್ ಸಂಸ್ಥೆ ಅಕ್ಟೋಬರ್ 21ರಿಂದ ಪ್ರಾರಂಭವಾಗಿ ಬಿಗ್ ದೀಪಾವಳಿ ಸೇಲ್ ಅನ್ನು ಪ್ರಾರಂಭ ಮಾಡುತ್ತಿದೆ. ಈ ಸಂದರ್ಭದಲ್ಲಿ ನೀವು ಯಾವುದೇ ರೀತಿಯ ಹೋಂ ಅಪ್ಲೈಯನ್ಸ್ ವಸ್ತುಗಳನ್ನ ಅತ್ಯಂತ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ. ಎಸ್ಬಿಐ ಕಾರ್ಡ್ (SBI Card) ನಲ್ಲಿ ಖರೀದಿ ಮಾಡಿದ್ರೆ ನೀವು ಸಾಕಷ್ಟು ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದ್ದು, ಎಕ್ಸ್ಚೇಂಜ್ ಆಫರ್ ಹಾಗೂ ಇಎಂಐ ಅವಕಾಶಗಳು ಕೂಡ ದೊರಕುತ್ತವೆ. ಈ ಸೇಲ್ ಮುಕ್ತಾಯವಾಗಲಿದ್ದು ಇದಕ್ಕಿಂತ ಮುಂಚೆ ಪ್ರತಿಷ್ಠಿತ ಕಂಪನಿಗಳ ಸ್ಮಾರ್ಟ್ ಟಿವಿ (Smart Tv) ಗಳನ್ನು ನೀವು ಕಡಿಮೆ ಬೆಲೆಗೆ ಖರೀದಿ ಮಾಡುವ ಮೂಲಕ ಈ ಸೇಲ್ ನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
Thomson Smart Tv
Thomson TV ನಿಮಗೆ 5,999 ರೂಪಾಯಿಗಳ ಬೆಲೆಯಿಂದ ಪ್ರಾರಂಭವಾಗುತ್ತದೆ. ಮೂರು ತಿಂಗಳ ಉಚಿತ ಓ ಟಿ ಟಿ ಚಂದಾದಾರಿಕೆಯನ್ನು ಕೂಡ ಗ್ರಾಹಕರಿಗೆ ನೀಡ್ತಾ ಇದೆ. 32 ಇಂಚಿನ ಟಿವಿ 10,000 ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಸಿಗ್ತಾಯಿದೆ.
Xiaomi A Series Smart Tv
Xiaomi A ಸೀರೀಸ್ ಟಿವಿಯನ್ನು ನೀವು ಫ್ಲಿಪ್ಕಾರ್ಟ್ ನಲ್ಲಿ 10,000 ಗಳಿಗಿಂತಲೂ ಕಡಿಮೆ ಬಜೆಟ್ ನಲ್ಲಿ ಖರೀದಿ ಮಾಡಬಹುದಾಗಿದ್ದು ಇದು 32 ಇಂಚಿನ ಟಿವಿ ಆಗಿರುತ್ತೆ.
Sony Bravia 4K Smart Tv
Sony Bravia 4K ಟಿವಿ ಮೇಲೆ ಕೂಡ ಸೇಲ್ ನಲ್ಲಿ ಸಾಕಷ್ಟು ಉತ್ತಮ ಆಫರ್ಸ್ ಸಿಗ್ತಾಯಿದ್ದು ಇದನ್ನು ಕೂಡ ಕಡಿಮೆ ಬೆಲೆಗೆ ನೀವು ಖರೀದಿ ಮಾಡಬಹುದಾಗಿದೆ. 10,000 ರೂಪಾಯಿಗಳಿಗಿಂತ ಕಡಿಮೆ ಬಜೆಟ್ ನಲ್ಲಿ ನೀವು Cooca ಟಿವಿಯನ್ನು ಕೂಡ ಖರೀದಿ ಮಾಡಬಹುದಾಗಿದೆ.
ವಾಷಿಂಗ್ ಮಿಷನ್ ನಿಮಗೆ ಈ ಸಂದರ್ಭದಲ್ಲಿ 6790 ರೂಪಾಯಿಗಳಿಂದ ಪ್ರಾರಂಭವಾಗಲಿದೆ. ರೆಫ್ರಿಜರೇಟರ್ 9790 ರೂಪಾಯಿಗಳಿಂದ ಪ್ರಾರಂಭವಾಗಲಿದೆ. ಐದು ಸಾವಿರ ರೂಪಾಯಿಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಮೈಕ್ರೋವೇವ್ ಅನ್ನು ನೀವು ಫ್ಲಿಪ್ಕಾರ್ಟ್ ನಲ್ಲಿ ಈ ಸಂದರ್ಭದಲ್ಲಿ ಪಡೆದುಕೊಳ್ಳಬಹುದಾಗಿದೆ. ಹೋಂ ಆಪ್ಲೇನ್ಸ್ ಮೇಲೆ 65% ಆಫರ್ ಜೊತೆಗೆ ವಸ್ತುಗಳನ್ನ ಖರೀದಿ ಮಾಡಬಹುದಾಗಿದೆ. ಏರ್ ಕಂಡೀಷನರ್ ಹಾಗೂ ಗೀಜರ್ ಕೂಡ ಇದೇ ದರಕ್ಕೆ ನಿಮಗೆ ಅಕ್ಟೋಬರ್ 26ರ ವರೆಗೆ ಬಿಗ್ ದೀಪಾವಳಿ ಸೇಲ್ ನಲ್ಲಿ ದೊರಕಲಿದೆ.