ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎರಡು ಪ್ರಮುಖ ಅಪ್ಡೇಟ್ಗಳು ಕಂಡು ಬಂದಿದ್ದು ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುವಂತಹ ಬ್ಯಾಂಕ್ ಆಫ್ ಬರೋಡ (Bank of Baroda) ಬ್ಯಾಂಕಿನ ಗ್ರಾಹಕರಿಗೆ ಇದು ಅತ್ಯಂತ ಪ್ರಮುಖವಾಗಿ ತಿಳಿದುಕೊಳ್ಳಬೇಕಾಗಿರುವಂತಹ ಅಪ್ಡೇಟ್ ಆಗಿದೆ.
ಬ್ಯಾಂಕ್ ಆಫ್ ಬರೋಡ 2 ಪ್ರಮುಖ ಅಪ್ಡೇಟ್ಗಳು!
- ಬ್ಯಾಂಕ್ ಆಫ್ ಬರೋಡದ (Bank of Baroda) ಆನ್ಲೈನ್ ಬ್ಯಾಂಕಿಂಗ್ ಅಪ್ಲಿಕೇಶನ್ ಆಗಿರುವಂತಹ ಬಾಬ್ ವರ್ಲ್ಡ್ ನಲ್ಲಿ ನಿಮ್ಮ ವಾಯ್ಸ್ ಮೂಲಕ ವಾಯ್ಸ್ ಬ್ಯಾಂಕಿಂಗ್ ಅನ್ನು ಮಾಡುವಂತಹ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ. ಇದರ ಜೊತೆಗೆ ವಾಟ್ಸಾಪ್ ಮಾಧ್ಯಮದ ಮೂಲಕ ಕೂಡ ಬ್ಯಾಂಕಿಂಗ್ ನಡೆಸುವಂತಹ ಅವಕಾಶವನ್ನು ಕಲ್ಪಿಸಲಾಗಿದೆ. QR ಸ್ಕ್ಯಾನ್ ಮೂಲಕ ಯಾವುದೇ ರೀತಿಯ ಪೇಮೆಂಟ್ ಅನ್ನು ಕೂಡ ಮಾಡುವಂತಹ ಅವಕಾಶ ಇದರಲ್ಲಿದೆ. ಆನ್ಲೈನ್ ಖರೀದಿ ಮಾಡುವುದಕ್ಕಾಗಿ ವರ್ಚುವಲ್ ಡೆಬಿಟ್ ಕಾರ್ಡ್ ಅನ್ನು ಕೂಡ ಇದರಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ. ಹೊಸ ಬಜೆಟ್ ಪ್ಲಾನರ್ ಟೂಲ್ ಅನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ.
- ಬ್ಯಾಂಕ್ ಆಫ್ ಬರೋಡ ಹೋಂ ಲೋನ್ (Home Loan) ಮೇಲೆ 0.25% ಬಡ್ಡಿದರವನ್ನು ಕಡಿಮೆ ಮಾಡಿದ್ದು ಈಗ 8.40 ಪ್ರತಿಶತ ಆಗಿದೆ. ಡಿಜಿಟಲ್ ಪರ್ಸನಲ್ ಲೋನ್ (Personal Loan) ಅನ್ನು 5 ಲಕ್ಷಗಳವರೆಗೆ ನೀವು ಪಡೆದುಕೊಳ್ಳಬಹುದಾಗಿದೆ. ಇನ್ನು ರೈತರಿಗೆ ಕೃಷಿ ವಲಯದಲ್ಲಿ ಬೇಕಾಗಿರುವಂತಹ ಸಾಲ ಸೌಲಭ್ಯದಲ್ಲಿ ಕೂಡ ವೃದ್ಧಿಯನ್ನು ಕಾಣಬಹುದಾಗಿದೆ. ಎಜುಕೇಶನ್ ಲೋನ್ (Education Loan) ಪಡೆದುಕೊಳ್ಳುವಂತಹ ಜನರಿಗೆ ಲೋನಿನ ಪ್ರೊಸೆಸಿಂಗ್ ಫೀಸ್ ಮೇಲೆ 50 ಪ್ರತಿಶತ ರಿಯಾಯಿತಿಯನ್ನು ನೀಡುವಂತಹ ನಿರ್ಧಾರವನ್ನು ಕೂಡ ಬ್ಯಾಂಕ್ ಆಫ್ ಬರೋಡ ಮಾಡಿದೆ.
ಒಂದು ವೇಳೆ ನೀವು ಕೂಡ ಬ್ಯಾಂಕ್ ಆಫ್ ಬರೋಡ (Bank of Baroda) ಗ್ರಾಹಕರಾಗಿದ್ದರೆ ಈ ಮೇಲೆ ಜಾರಿಗೆ ತರಲಾಗಿರುವಂತಹ ಹೊಸ ಅಪ್ಡೇಟ್ ಗಳನ್ನ ನೀವು ಕೂಡ ನಿಮ್ಮ ಅಗತ್ಯಕ್ಕೆ ಬಳಸಿಕೊಂಡು ಇದರಿಂದ ನಿಮ್ಮ ಅಗತ್ಯತೆಗಳನ್ನ ಪೂರೈಸಿಕೊಳ್ಳಬಹುದಾಗಿದೆ.