ಅಕ್ಟೋಬರ್ ತಿಂಗಳು ಮುಗಿತಾ ಬಂತು ಹಾಗೂ ಇನ್ನೇನು ವರ್ಷದ 11ನೇ ತಿಂಗಳು ಅಂದ್ರೆ ನವೆಂಬರ್ ಪ್ರಾರಂಭವಾಗಲಿದೆ. ನವೆಂಬರ್ ತಿಂಗಳು ಪ್ರಾರಂಭ ಆಗುವುದಕ್ಕಿಂತ ಮುಂಚೆ ಶಾಲಾ ಕಾಲೇಜು ಹಾಗು ಆಫೀಸಿಗೆ ಹೋಗುವರು ಈ ತಿಂಗಳಲ್ಲಿ ಇರುವಂತಹ ರಜೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಮಾಹಿತಿಯ ಪ್ರಕಾರ ನವೆಂಬರ್ ನಲ್ಲಿ ಮೂರು ದಿನ ಸತತ ರಜೆಗಳನ್ನು ನೀಡಲಾಗುತ್ತಿದ್ದು ಪ್ರಮುಖವಾಗಿ ಸರ್ಕಾರಿ ರಜೆಯ ಆಧಾರದ ಮೇಲೆ ಕೆಲಸವನ್ನು ಮಾಡುವಂತಹ ಇಲಾಖೆಯ ಉದ್ಯೋಗಸ್ಥರು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಈ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿದೆ.
ದೀಪಾವಳಿ (Diwali) ಯ ರಜೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಕ್ಟೋಬರ್ 31ಕ್ಕೆ ಸಿಗಲಿದೆ ಹಾಗೂ ಇದು ನವೆಂಬರ್ ಒಂದಕ್ಕೆ ಕೂಡ ಮುಂದುವರೆಯಲಿದೆ. ಇದರ ಜೊತೆಗೆ ನವಂಬರ್ ಎರಡು ಹಾಗೂ ಮೂರಕ್ಕೆ ಕೂಡ ರಜೆ ಇದೆ. ನವಂಬರ್ 2ಕ್ಕೆ ಗೋವರ್ಧನ ಪೂಜಾ (Govardhan Puja) ಹಾಗೂ ನವೆಂಬರ್ ಮೂರಕ್ಕೆ ಬಾಯ್ ದೂಜ್ (Bhai Dooj) ಹಬ್ಬವನ್ನು ಆಚರಿಸಲಾಗುತ್ತದೆ ಹಾಗೂ ವಿಶೇಷವಾಗಿ ಉತ್ತರ ಭಾರತದಲ್ಲಿ ಈ ರಜೆಗಳನ್ನು ನಾವು ನಿರೀಕ್ಷೆ ಮಾಡಬಹುದಾಗಿದೆ. ಈ ಸಂದರ್ಭದಲ್ಲಿ ಶಾಲಾ ಕಾಲೇಜು ಹಾಗೂ ಸರ್ಕಾರಿ ಆಫೀಸುಗಳು ರಜೆಯನ್ನು ಹೊಂದಲಿವೆ.
ದೀಪಾವಳಿ ಹಬ್ಬ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಕ್ಟೋಬರ್ 31ರಂದು ಆಚರಿಸಲ್ಪಡುತ್ತಿದ್ದು ದೇಶದಾದ್ಯಂತ ಹಬ್ಬಕ್ಕೆ ರಜೆಯನ್ನು ನೀಡಲಾಗುತ್ತದೆ. ರಾಮ ಹದಿನಾಲ್ಕು ವರ್ಷಗಳ ನಂತರ ಮತ್ತೆ ಅಯೋಧ್ಯೆಗೆ ಮರಳಿ ಬಂದ ನೆನಪಿನಲ್ಲಿ ನಮ್ಮ ಪುರಾಣ ಶಾಸ್ತ್ರಗಳ ಪ್ರಕಾರ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎನ್ನುವಂತಹ ಪ್ರತೀತಿ ಇದೆ. ಹಿಂದೂ ಧರ್ಮವನ್ನ ನಂಬುವಂತಹ ಪ್ರತಿಯೊಬ್ಬರಿಗೂ ಕೂಡ ದೀಪಾವಳಿ ಹಬ್ಬ ಅತ್ಯಂತ ಪವಿತ್ರವಾಗಿರುವಂತಹ ಹಬ್ಬವಾಗಿದೆ. ಹೀಗಾಗಿ ನವೆಂಬರ್ 1, 2 ಹಾಗೂ 3 ಈ ಮೂರು ದಿನದಂದು ಸರ್ಕಾರಿ ರಜೆಯನ್ನು ಘೋಷಣೆ ಮಾಡಲಾಗಿದೆ.