Karnataka Times
Trending Stories, Viral News, Gossips & Everything in Kannada

Nithya Bhavishya: ಮೂಕಾಂಬಿಕೆಯನ್ನು ನೆನೆದು ಇಂದಿನ ರಾಶಿಫಲ ತಿಳಿದುಕೊಳ್ಳಿ

ಮೇಷರಾಶಿ :- ಈ ರಾಶಿಯವರು ಇಂದು ಹೆಚ್ಚಾಗಿ ಧಾನ ಹಾಗೂ ಧರ್ಮದ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಅಲ್ಲದೇ ಕಷ್ಟದಲ್ಲಿದ್ದವರಿಗೆ ಅಗತ್ಯ ಇರುವವರೆಗೆ ಸಹಾಯ ಮಾಡುವುದರಿಂದ ನಿಮಗೆ ಪರಿಹಾರ ಲಬಿಸುತ್ತದೆ. ಆದರೆ ಮೇಷ ರಾಶಿಯವರಿಗೆ ಇಂದು ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇರುವ ಕಾರಣ ಜಾಗೃತರಾಗಿರಬೇಕು.
ತಮಗೆ ಪೋಷಕರ ಆಶೀರ್ವಾದ ಸಿಗಲಿದ್ದಯ ಅವರ ಸಹಾಯದಿಂದಲೇ ಇಂದು ಭೂಮಿ ಅಥವಾ ವಾಹನವನ್ನು ಖರೀದಿಸಬಹುದಾಗಿದೆ. ಜೊತೆಗೆ ಇಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಕೇಳುವ ಸಾಧ್ಯತೆ ಇದೆ.

Advertisement

ವೃಷಭ ರಾಶಿ :- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಟುಂಬದ ಜೊತೆಗೆ ಆಹ್ಲಾದ ಕ್ಷಣವನ್ನ ಇಂದು ವೃಷಭ ರಾಶಿಯವರು ಕಳೆಯುತ್ತಾರೆ. ಬಿಡುವಿಲ್ಲದ ದಿನ ಇಂದು ನಿಮದಾಗಿರುತ್ತದೆ. ಇನ್ನು ಕೆಲಸದ ಸ್ಥಳಕ್ಕೆ ಸಂಬಂಧಿಸಿದ ಯಾವುದೇ ಸುದ್ದಿಯನ್ನ ಇಂದು ತಾವು ಕೇಳಬಹುದು. ಇದು ನಿಮ್ಮ ಆತ್ಮವಿಶ್ವಾಸವನ್ನು ಖಂಡಿತವಾಗಿಯೂ ಹೆಚ್ಚಿಸುತ್ತದೆ.
ಸಾಯಂಕಾಲ ಈ ರಾಶಿಯವರು ಕೆಲವು ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು ಇದು ನಿಮ್ಮ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ ಹಾಗೂ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

Advertisement

ಮಿಥುನ ರಾಶಿ :- ಪಿತೃವಿನ ಆಶೀರ್ವಾದದಿಂದ ಮಿಥುನ ರಾಶಿಯವರು ಇಂದು ಸ್ವಲ್ಪ ಆಸ್ತಿಯನ್ನು ಪಡೆಯುವ ಬಯಕೆ ಈಡೇರುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಇದರಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಕೂಡ ಇರುವುದು ವಿಶೇಷ. ಆದರೆ ಮಾತ್ರ ಬೆಳಗ್ಗಿನಿಂದಲೇ ಕೆಲಸ ಬಿಟ್ಟು ಓಡಿ ಹೋಗುವ ಸ್ಥಿತಿ ಖಂಡಿತ ಇರುತ್ತದೆ.
ಇನ್ನು ನೀವು ಅನಗತ್ಯ ಖರ್ಚುಗಳನ್ನು ತಪ್ಪಿಸಲೇಬೇಕಾಗಿದ್ದು ಇಲ್ಲದಿದ್ದರೆ ಭವಿಷ್ಯದಲ್ಲಿ ಹಣಕಾಸಿನ ಪರಿಸ್ಥಿತಿಯ ಹದಗೆಡುತ್ತದೆ.

Advertisement

ಕಟಕ ರಾಶಿ:- ಇಂದು ಮುಖ್ಯವಾದ ವಿಚಾರ ಕಟಕರಾಶಿಯವರಿಗೆ ಏನೆಂದರೆ ಆತುರ ಹಾಗೂ ಭಾವೋದ್ವೇಗದಲ್ಲಿ ಯಾವುದೇ ರೀತಿಯಾ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಇಲ್ಲದಿದ್ದರೆ ಅವರು ನಂತರ ಪಶ್ಚಾತ್ತಾಪ ಪಡಬೇಕಾದ ಸಂಧರ್ಭ ನಿರ್ಮಾಣವಾಗುತ್ತದೆ. ಇನ್ನು ವ್ಯಾಪಾರ ಯೋಜನೆಗಳು ವೇಗವನ್ನು ಇಂದು ಖಂಡಿತ ಪಡೆಯಲಿದ್ದು ಇಂದು ನಿಮಗೆ ಗೌರವ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಇದ್ದ ಅಡೆತಡೆ ನಿವಾರಣೆಯಾಗಲಿದ್ದು ರಾತ್ರಿ ದೇವರ ದರ್ಶನ ಮಾಡಿದರೆ ಲಾಭ ಸಿಗಲಿದೆ

Advertisement

ಸಿಂಹ ರಾಶಿ:- ಇಂದು ಸಿಂಹ ರಾಶಿಯವರಿಗೆ ವಿಶೇಷ ದಿನವಾಗಿದ್ದುಖಂಡಿತಾ ಇಂದು ತುಂಬಾ ಲಾಭದಾಯಕವಾಗಿರುತ್ತದೆ. ಬಹಳ ಸಮದಿಂದ ಉಳಿದಂತಹ ಕೆಲಸ ಇಂದು ಪೂರ್ಣವಾಗಲಿದ್ದು ಹೊರೆಯು ಕೂಡ ಹಗುರವಾಗುತ್ತದೆ.
ಇನ್ನು ನಿಮ್ಮ ಒಡಹುಟ್ಟಿದವರ ಬೆಂಬಲ ಸಿಗಲಿದ್ದು ಆರೋಗ್ಯದ ಬಗ್ಗೆ ಜಾಗೃತರಾಗಿರಿ ಮತ್ತು ನಿಧಾನ ಜೀರ್ಣಶಕ್ತಿ ಮತ್ತು ಕಣ್ಣಿನ ಅಸ್ವಸ್ಥತೆಗಳ ಸಾಧ್ಯತೆಯಿದೆ. ಇದೆಲ್ಲದರ ಜೊತೆಗೆ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ..

ಕನ್ಯಾ ರಾಶಿ:- ಇಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯವರಿಗೆ ಇಷ್ಟು ದಿನ ಯಾವುದೇ ರೀತಿಯಾ ಕೌಟುಂಬಿಕ ಸಮಸ್ಯೆ ನಡೆಯುತ್ತಿದ್ದರೆ ಅದು ಖಂಡಿತ ಇಂದಿಗೆ ಮುಗಿಯುತ್ತದೆ. ಇದರ ಜೊತೆಗೆ ಕೆಲಸದ ಸ್ಥಳದಲ್ಲಿ ಪ್ರತಿಕೂಲ ಸಂದರ್ಭಗಳಲ್ಲಿ ಕೋಪವನ್ನು ನಿಯಂತ್ರಿಸಬೇಕಿದ್ದು ಇಲ್ಲದಿದ್ದರೆ ನೀವು ನಷ್ಟವನ್ನು ಅನುಭವಿಸಬೇಕಾಗದ ಸಂದರ್ಭದ ಬರುತ್ತದೆ. ಇಂದು ಕುಟುಂಬದಲ್ಲಿ ಒಂದು ಶುಭ ಕಾರ್ಯಕ್ರಮವಿರಬಹುದು ಎನ್ನಲಾಗಿದ್ದು ಇದರಲ್ಲಿ ಕುಟುಂಬದ ಎಲ್ಲಾ ಸದಸ್ಯರು ಕೂಡ ಕಾರ್ಯನಿರತರಾಗುವುದು ವಿಶೇಷಮ ರಾಜಕೀಯ ಸಹಕಾರವೂ ದೊರೆಯಲಿದೆ.

ತುಲಾ ರಾಶಿ:- ಇಂದು ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಸ್ಪರ್ಧೆಯಲ್ಲಿ ಯಶಸ್ಸನ್ನು ಪಡೆಯಲಿದ್ದು ಆದಾಯದ ಹೊಸ ಮಾರ್ಗಗಳು ಹೊರಹೊಮ್ಮುತ್ತವೆ ಎನ್ನಬಹುದು. ಉದ್ಯೋಗವನ್ನು ಹುಡುಕುತ್ತಿರುವವರು ಯಶಸ್ಸನ್ನು ಖಂಡಿತ ಇಂದು ಪಡೆಯುತ್ತಾರೆ.
ಇನ್ನು ನಿಮ್ಮ ಸಂಗಾತಿಯ ವಿಶೇಷ ಬೆಂಬಲ ಹಾಗೂ ಒಡನಾಟವನ್ನು ಇಂದು ನೀವು ಪಡೆಯುತ್ತೀರಿ. ಇನ್ನು ಸಂಜೆ ಮಾಡುವ ಪ್ರಯಾಣವು ಆಹ್ಲಾದಕರ ಹಾಗೂ ಲಾಭದಾಯಕವಾಗಿರುತ್ತದೆ.

ವೃಶ್ಚಿಕ ರಾಶಿ :- ಪ್ರತಿಕೂಲ ಪರಿಸ್ಥಿತಿಗಳನ್ನು ಇಂದು ಈ ರಾಶಿಯವರು ಎದುರಿಸಬೇಕಾಗಬಹುದಾಗಿದ್ದು ಆದಷ್ಟು ತಾಳ್ಮೆಯಿಂದಿರಿ ಹಾಗೂ ನಿಮ್ಮ ಮಾತನ್ನು ಆದಷ್ಟು ನಿಯಂತ್ರಿಸಿ. ಇಂದು ಆರ್ಥಿಕ ಭಾಗವು ಬಲವಾಗಿರಕಿದ್ದು ದಿನವು ಹೆಚ್ಚಾಗುತ್ತದೆ. ಇಂದು ನೀವು ನಿಮ್ಮ ಮಗುವಿನ ಭವಿಷ್ಯದ ಬಗ್ಗೆ ಹೊಸ ಯೋಜನೆಯನ್ನು ಮಾಡಬಹುದಾಗಿದೆ.

ಧನು ರಾಶಿ:- ಈ ರಾಶಿಯವರಿಗೆ ಇಂದು ಸಾಮಾನ್ಯ ದಿನ. ಇನ್ನು ನ್ಯಾಯಾಲಯದಲ್ಲಿ ಯಾವುದೇ ರೀತಿಯಾ ವಿಷಯ ನಡೆಯುತ್ತಿದ್ದರೆ ಅದು ಇಂದೇ ಕೊನೆಗೊಂಡು ಖಂಡಿತ ತಮಗೆ ಜಯ ಸಿಗುತ್ತದೆ. ಇಂದು ಹಣವನ್ನು ಗೃಹೋಪಯೋಗಿ ವಸ್ತುಗಳಿಗೆ ಖರ್ಚು ಮಾಡಬೇಕಾಗುವುದು. ಆದರೆ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಣವನ್ನು ಖರ್ಚು ಮಾಡಬೇಕಿದೆ.ಇಂದು ನಿಮ್ಮ ವಿರೋಧಿಗಳು ಸೋಲಿಸಲ್ಪಡುತ್ತಾರೆ.

ಮಕರ ರಾಶಿ:- ಇಂದು ಈ ರಾಶಿಯವರು ವ್ಯವಹಾರದಲ್ಲಿ ಮಾಡಿದ ಬದಲಾವಣೆಗಳಿಂದಾಗಿ ಸಂಪೂರ್ಣ ಲಾಭವನ್ನು ಪಡೆಯುತ್ತಾರೆ ಎನ್ನಬಹುದು. ಇನ್ನು ಧಾರ್ಮಿಕ ಸ್ಥಳಗಳಿಗೆ ಪ್ರಯಾಣದ ಮೊತ್ತವು ಸಂಜೆ ಮೇಲುಗೈ ಸಾಧಿಸುತ್ತದೆ. ಹೌದು ಆದರೆ ವಾಹನ ಚಲಾಯಿಸುವಾಗ ಹಾಗೂ ಪ್ರಯಾಣಿಸುವಾಗ ಜಾಗರೂಕರಾಗಿರಬೇಕಿದ್ದು ವಿದ್ಯಾರ್ಥಿಗಳು ಯಾವುದೇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಅವರು ಅದರಲ್ಲಿ ಇಂದು ಯಶಸ್ವಿಯಾಗುತ್ತಾರೆ.

ಕುಂಭಾ ರಾಶಿ:- ಈ ರಾಶಿಯವರು ಇಂದು ಯಾವುದೇ ಆಸ್ತಿಯನ್ನು ಖರೀದಿಸಲು ಹಾಗೂ ಮಾರಾಟ ಮಾಡಲು ಯೋಚಿಸುತ್ತಿದ್ದರೆ ಅದರ ಎಲ್ಲಾ ದಾಖಲೆಗಳನ್ನು ಗಂಭೀರವಾಗಿ ಪರಿಶೀಲಿಸಬೇಕು. ಇಲ್ಲದಿದ್ದರೆ ಖಂಡಿತ ನಷ್ಟವಾಗಬಹುದು.
ಕುಟುಂಬದಲ್ಲಿ ಬಹಳ ದಿನಗಳಿಂದ ಯಾವುದೇ ಕಲಹಗಳು ನಡೆಯುತ್ತಿದ್ದರೆ ಅದು ಮತ್ತೆ ಉದ್ಭವಿಸಬಹುದು ಆದರೆ ಇಂದು ಕುಟುಂಬದ ಹಿರಿಯರ ಸಹಾಯದಿಂದ ಅದು ಕೊನೆಗೊಳ್ಳುತ್ತದೆ.

ಮೀನ ರಾಶಿ:- ಇನ್ನು ಕೆಲಸ ಅಥವಾ ವೈಯಕ್ತಿಕ ಕಾರಣಗಳಿಂದ ಹತ್ತಿರದ ಹಾಗೂ ದೂರದ ಪ್ರಯಾಣವೂ ಇರಬಹುದು. ಇನ್ನು ಪೋಷಕರ ಸಲಹೆಯು ಇಂದು ನಿಮಗೆ ಉಪಯುಕ್ತ ಹಾಹೂ ಉಪಯುಕ್ತವಾಗಿದೆ ಎಂದು ಸಾಬೀತುಪಡಿಸುತ್ತದೆ ಏಕೆಂದರೆ ನೀವು ಅವರೊಂದಿಗೆ ಸಮಯ ಕಳೆಯುತ್ತೀರಿ.ಸಂಜೆ ಎಲ್ಲೋ ಹೋಗುವುದರ ಕುರಿತು ನೀವು ಪ್ರಮುಖ ಮಾಹಿತಿಯನ್ನು ಪಡೆಯಬಹುದಾಗಿದ್ದು ಅದು ನಿಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ.
ವ್ಯಾಪಾರದಲ್ಲಿ ಹೆಚ್ಚಿನ ಹಣ ಮತ್ತು ಲಾಭವಿದೆ.

Leave A Reply

Your email address will not be published.