Karnataka Times
Trending Stories, Viral News, Gossips & Everything in Kannada

Nithya Bhavishya: ಶನೇಶ್ವರನ ಕೃಪೆಯೊಂದಿಗೆ ಇಂದಿನ ರಾಶಿಫಲ ತಿಳಿದುಕೊಳ್ಳಿ.

ಮೇಷ: ಮೇಷ ರಾಶಿಯವರಿಗೆ ಇಂದು ಅದೃಷ್ಟದ ದಿನವಾಗಿದ್ದು ಇಂದು ನಿಮ್ಮ ವ್ಯಾಪಾರ ಹಾಗೂ ವಹಿವಾಟುಗಳು ಖಂಡಿತವಾಗಿಯೂ ನಿಮಗೆ ಸಮಾಧಾನವನ್ನು ತರುತ್ತದೆ ಎನ್ನಬಹುದು. ಇನ್ನು ಉದ್ಯೋಗದ ಸ್ಥಳದಲ್ಲಿ ನಿನ್ಮ ಸಹೋದ್ಯೋಗಿಗಳಿಗೆ ಸಹಾಯ ಮಾಡಲಿದ್ದು ಮನೆಗೆ ಅವಶ್ಯವಿರುವ ವಸ್ತುಗಳನ್ನು ಇಂದು ಖರೀದಿಸುವಿರಿ. ಇನ್ನು ದಾಂಪತ್ಯದಲ್ಲಿ ಸುಖವಿದ್ದರೂ ಕೂಡ ನೆಮ್ಮದಿಯ ಕೊರತೆ ಕಾಣಿಸಬಹುದು. ಬಂಧುಗಳ ಜೊತೆ ದುಃಖವನ್ನು ಹಂಚಿಕೊಳ್ಳುವಿರಿ.

Advertisement

ವೃಷಭ: ಇಂದು ವೃಷಭ ರಾಶಿಯವರಿಗೆ ಶುಭ ದಿನವಾಗಿದ್ದು ಇಂದುವ ನೀವು ಮಾಡುವಂತಹ ವೃತ್ತಿಯು ಖಂಡಿತವಾಗಿ ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ. ಆದರೆ ಮಾತ್ರ ಅನಿರೀಕ್ಷಿತ ತಿರುವುಗಳು ನಿಮಗೆ ಗೊಂದಲವನ್ನು ಉಂಟುಮಾಡುತ್ತದೆ. ಇನ್ನು ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡುವ ಆಲೋಚನೆಯನ್ನು ಮಾಡುವ ದಿನವಾಗಿದ್ದು ಆರ್ಥಿಕವಾಗಿ ಕೊಂಚ ಗಟ್ಟಿಯಾಗಬಹುದಾಗಿದೆ. ಕೃಷಿಯ ಕುರಿತು ಆಸಕ್ತಿ ಬರಲಿದೆ.

Advertisement

ಮಿಥುನ: ಇಂದು ಮಿಥುನ ರಾಶಿಯ ವರು ವೈವಾಹಿಕ ಜೀವನದಲ್ಲಿ ಸುಖವಾಗಿರುವರು. ಹೌದು ಮಕ್ಕಳ ಜೊತೆಗೆ ಗಂಡ ಹೆಂಡತಿಯರಿಬ್ಬರೂ ಕೂಡ ಕಾಲವನ್ನು ಕಳೆಯಲಿದ್ದು ದೂರದ ಊರಿಗೆ ಪ್ರಯಾಣ ಹೋಗುವ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಇನ್ನು ಸಜ್ಜನರ ಸಹವಾಸವು ನಿಮಗೆ ಸಿಗಬಹುದಾಗಿದ್ದು ಉತ್ತಮ ಮಾರ್ಗದರ್ಶನವನ್ನು ಪಡೆಯುವಿರಿ.ಇನ್ನು ಸ್ವತಂತ್ರವಾಗಿ ಮಾಡಲಿದ್ದು ಇಂದು ಉದ್ಯೋಗದಲ್ಲಿ ತೃಪ್ತಿ ಇರಲಿದೆ ಎನ್ನಬಹುದು.

Advertisement

ಕಟಕ: ಕಟಕ ರಾಶಿಯವರಿಗೂ ಕೂಡ ಅದೃಷ್ಟದ ದಿನವಾಗಿದ್ದು ನೀವು ಬಹಳ ಚಾತುರ್ಯದಿಂದ ಕೆಲಸವನ್ನು ಮಾಡುವಿರಿ ಎನ್ನಬಹುದು. ಆದರೆ ಬೇಡ ಆರೋಗ್ಯದ ವಿಚಾರದಲ್ಲಿ ಆತುರರಾಗುವುದು ಬೇಡ ಎನ್ನಲಾಗಿದೆ. ದುಪ್ಪಟ್ಟು ವ್ಯಯಿಸುವ ಸನ್ನಿವೇಶಗಳು ಬರಬಹುದಾಗಿದ್ದು ಉದ್ವೇಗದಿಂದ ಕೆಲವೊಂದು ಸಮಸ್ಯೆಗಳನ್ನು ಕೂಡ ತಂದುಕೊಳ್ಳುವಿರಿ ಎನ್ನಬಹುದು. ಇನ್ನು ನೀವು ಇಷ್ಟ ಪಟ್ಟು ಮಾಡುವ ಕೆಲಸವು ಸಂತೋಷವನ್ನು ಕೊಡಲಿದ್ದು ಸಮಯವಿದೆ ಎಂದು ಸುಮ್ಮನೆ ಕುಳಿತುಕೊಳ್ಳಬೇಡಿ.

Advertisement

ಸಿಂಹ: ಸಿಂಹ ರಾಶಿಯ ಜನರಿಗೆ ಇಂದು ಪರುವರ್ತನೆಯ ದಿನ. ಹೌದು ಇಂದು ಸಂಬಂಧಗಳ ಬೆಲೆಯಯ ಅರ್ಥವಾಗಲಿದ್ದು ಎಲ್ಲವುದನ್ನೂ ವಿರೋಧಿಸುವುದು ನಿಮ್ಮ ಸ್ವಭಾವವಾಗಿರಲಿದೆ. ಇನ್ನು ಮನೆಯಲ್ಲಿಯೇ ಇದ್ದು ಇದ್ದು ಬಹಳ ಬೇಸರವಾಗಿ ಹೊರಗೆ ಸುತ್ತಾಡಲು ಹೋಗಲಿದ್ದೀರಿ.ಇನ್ನು ಕಛೇರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದ್ದು ನಿಮ್ಮ ಸೇವೆಗೆ ಮೆಚ್ವುಗೆ ಸಿಗಬಹುದು. ಆದರೆ ಇಂದಿನ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿದೆ..

ಕನ್ಯಾ: ಇನ್ನು ಕನ್ಯಾ ರಾಶಿಯ ಜನರು ಹೊಸದಾಗಿ ಏನಾದರು ಉದ್ಯೋಗವನ್ನು ಅರಸುತ್ತಿದ್ದರೆ ಕೆಲಸಕ್ಕೆ ಹೆಚ್ಚು ಓಡಾಟಗಳು ಆಗಬಹುದು ಎಂದು ಜ್ಯೋತಿಷ್ಯ ಹೇಳಲಾಗುತ್ತದೆ. ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ನಿರಂತರ ಯತ್ನವನ್ನು ಮಾಡಲಿದ್ದು ಇನ್ನು ತಾವುಗಲಕು ಉತ್ತಮವಾದ ಆಹಾರವನ್ನು ತಿನ್ನಬೇಕು ಎಂದು ಬಯಸಿ ಮನೆಯಿಂದ ದೂರ ಹೋಗುವಿರಿ. ಆದರೆ ಅಲ್ಪ ಭೋಜನದಿಂದ ತೃಪ್ತಿ ಇರಲಿದ್ದು ವಾಹನದಿಂದ ಅಪಘಾತವಾಗಬಹುದು.

ತುಲಾ: ತುಲಾ ರಾಶಿಯವರು ಇಂದು ಹೆಚ್ಚು ಧಾರ್ಮಿಕ ಮನಃಸ್ಥಿತಿ ಉಳ್ಳವರಾಗಿರುತ್ತಾರೆ. ಜೊತೆಗೆ ತೀರ್ಥಕ್ಷೇತ್ರಗಳ ಅಥವಾ ಪ್ರಾಚೀನವಾಂತಹ ದೇವಾಲಯಗಳ ದರ್ಶನಕ್ಕೆ ಹೋಗುವ ಮನಸ್ಸು ಆಗಲಿದೆ. ಆದರೆ ವಂಚನೆ ಮಾಡಿದ್ದೀರಿ ಎಂಬ ಅಪವಾದ ಬರಬಹುದು. ಹೊಸ ವಸ್ತ್ರಗಳನ್ನು ಧರಿಸಲಿದ್ದು ಶ್ರಮವಹಿಸದೇ ಫಲವನ್ನು ಅಪೇಕ್ಷಿಸುವುದು ನಿಮ್ಮ ಅಸಾಮರ್ಥ್ಯವನ್ನು ತೋರಿಸುವುದು.

ವೃಶ್ಚಿಕ: ಈ ರಾಶಿಯ ಜನರಿಗೆ ಇಂದು ನಿಮ್ಮವರು ಯಾರು ಹಾಗೂ ನಿಮ್ಮವರಂತೆ ಕಾಣುವವರು ಯಾರು ಎಂಬುದರ ಸ್ಪಷ್ಟ ನಿಲುವು ಸಿಗಲಿದೆ ಎನ್ನಬಹುದು. ಹೌದು ವ್ಯಾಪರ ಅಥವಾ ಉದ್ಯಮವು ನಿಧಾನವಾಗಿ ಒಂದೊಂದೇ ಹೆಜ್ಜೆಯನ್ನು ಇಟ್ಟು ಮೇಲೇರಲು ಆರಂಭಿಸುತ್ತದೆ. ಇನ್ನು ಕೃಷಿಯ ಕಾರ್ಯದಲ್ಲಿ ಮನಸ್ಸಾಗಿ ಕೆಲವು ಅಪರೂಪದ ಸಸ್ಯಗಳನ್ನು ನೆಡಲಿದ್ದೀರಿ. ಇನ್ನು ಮರ್ಯಾದೆಗೆ ಹೆದರಿ ಮಾಡಬೇಕಾದ ಕೆಲಸವನ್ನು ಮಾಡದೇ ಇರುವಿರಿ ಹಾಗೂ ಮಾತುಗಳನ್ನು ಕಡೆ ಆಡುವುವಿರಿ.

ಧನು: ಸದ್ಯ ರಾಜಕೀಯ ಕುಟಂಬದ ವ್ಯಕ್ತಿಯನ್ನು ನೀವು ಭೇಟಿ ಮಾಡಲಿದ್ದು ಕೆಲವು ಅನುಕೂಲತೆಗಳು ಕೂಡ ಆಗಲಿವೆ ಎನ್ನಬಹುದು. ಅತಿಯಾದ ಆತ್ಮವಿಶ್ವಾಸದಿಂದಾಗಿ ನಿಮ್ಮ ಕೆಲಸವನ್ನು ಪೂರೈಸಲಿದ್ದು ಸ್ನೇಹಿತರ ಆಗಮನವು ಸಂಕಟವನ್ನು ತಂದರೂ ಕೂಡ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಇರುವುದಿಲ್ಲ. ಇನ್ನು ಯಂತ್ರೋದ್ಯಮವನ್ನು ನಡೆಸುತ್ತಿದ್ದರೆ ನಿಮಗೆ ಲಾಭವಿದ್ದು ವೈವಾಹಿಕ ಜೀವನವು ನಿಮಗೆ ಬೇಸರವೆನಿಸಬಹುದು..

ಮಕರ: ತಾವುಗಳು ಇಂದು ಹೊಸ ಕೆಲಸವೊಂದನ್ನು ಆರಂಭಿಸಲು ಯೋಚಿಸಿದ್ದು ಆದರೆ ನಿಮ್ಮವರೇ ನಿಮಗೆ ನಕಾರಾತ್ಮಕ ಮಾತುಗಳನ್ನು ಹೇಳಿ ದಾರಿ ತಪ್ಪಿಸುವರು ಅವಮಾನ ಮಾಡುವರು. ದಯವಿಟ್ಟು ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಹೋದರಿಂದ ಸಂಪತ್ತಿನ ಸಹಾಯವು ಸಿಗಲಿದ್ದು ದ್ವೇಷವನ್ನು ಬಿಟ್ಟು ಮುಂದುವರಿಯುವುದು ಒಳ್ಳೆಯದು..

ಕುಂಭ: ಇಂದು ಅತ್ಯಂತ ಸುಖವಾಗಿರುವ ದಿನ. ಉತ್ತಮ ಭೋಜನ ಕೂಡ ಸಿಗಲಿದ್ದು ನಿಮಗೆ ಪ್ರಶಂಸೆಗಳು ಜೂಡ ಸಿಗಲಿವೆ. ಇನ್ನು ನಿಮ್ಮ ತಲೆಯಲ್ಲಿ ಇರುವ ನೂರಾರು ಯೋಜನೆಯನ್ನು ಹೇಳಲು ಹೋಗಿ ನಿಮ್ಮ ಮೌಲ್ಯವನ್ನು ಕಳೆದುಕೊಳ್ಳಲಿದ್ದು ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನಹರಿಸಬೇಕು. ಇನ್ನು ಸ್ನೇಹಿತರ ಸಹವಾಸದಿಂದ ದುಶ್ಚಟಕ್ಕೆ ಬೀಳುವ ಸಾಧ್ಯತೆ ಇದ್ದು ಆದಷ್ಟು ಎಚ್ಚರಿಕೆಯಿಂದ ಇರಿ.

ಮೀನ: ಇಂದು ನಿಮಗೆ ಹಿರಿಯರ ಗುರುಸಮಾನರ ಭೇಟಿಯಾಗಲಿದ್ದು ಅವರಿಂದಾಗಿ ಖಂಡಿತ ಶುಭಾಶಂಸನೆ ಸಿಗಲಿದೆ. ಆದರೆ ಅತಿಯಾಗಿ ಉದ್ಯೋಗವನ್ನು ಬದಲಾಯಿಸುವುದು ಸೂಕ್ತವಲ್ಲ. ಇನ್ನು ಅವಮಾನವಾಗು ಸಂದರ್ಭವಿದ್ದರೆ ಅಲ್ಲಿಂದ ದೂರನಡೆಯುವುದು ಒಳ್ಳೆಯದ್ದು ನಿಮ್ಮ ವ್ಯಕ್ತಿತ್ವವನ್ನು ಹುಡುಕಿಕೊಂಡು ಬರುವವರಿದ್ದಾರೆ. ಮನಃಶಾಂತಿಯನ್ನು ಬಯಸಿ ಪ್ರಶಾಂತವಾದ ಪ್ರದೇಶಕ್ಕೆ ಹೋಗಬಹುದು.

Leave A Reply

Your email address will not be published.