Karnataka Times
Trending Stories, Viral News, Gossips & Everything in Kannada

Nithya Bhavishya: ರಾಘವೇಂದ್ರ ಸ್ವಾಮಿಯನ್ನು ನೆನೆಯುತ್ತ ಇಂದಿನ ರಾಶಿಫಲ ತಿಳಿಯಿರಿ

Advertisement

ಮೇಷ ರಾಶಿ : ಈ ದಿನ ಮೇಷರಾಶಿ ಯವರು ಯೋಚನೆ ಮಾಡಿ ಹೆಜ್ಜೆ ಇಡಬೇಕಾದ ದಿನವಾಗಿದ್ದು
ವಾದ ಹಾಗೂ ವಿವಾದಗಳನ್ನು ಮಾಡಿ ಸಮಯ ಹಾಳು ಮಾಡಿಕೊಳ್ಳುವ ಬದಲು ಸಮಾಧಾನದಿಂದ ಕೆಲಸ ಮಾಡಿದಲ್ಲಿ ನಿಧಾನವಾದರೂ ಕೂಡ ಜಯ ನಿಮ್ಮದಾಗುವುದು. ಇನ್ನು ಅನವಶ್ಯಕ ಖರ್ಚುಗಳು ಸಂಭವಿಸಬಹುದಾಗಿದ್ದು ಆದಷ್ಟು ಇದನ್ನ ತಡೆಯಿರಿ.

ವೃಷಭ ರಾಶಿ : ಇಂದು ವೃಷಭ ರಾಶಿಯವರಿಗೆ ಬದಲಾವಣೆಯ ದಿನವಾಗಿದ್ದು ರಾಜಕಾರಣಿಗಳಿಗೆ ಕೂಡ ನಾಯಕತ್ವದಲ್ಲಿ ಬದಲಾವಣೆ ಸಾಧ್ಯತೆಯಿದೆ. ಇನ್ನು ಸಗಟು ವ್ಯಾಪಾರಿಗಳಿಗೆ ಖರ್ಚು-ವೆಚ್ಚಗಳು ಆದಾಯದ ಮಿತಿಯೊಳಗಿರುವುದು. ಅಲ್ಲದೇ ರೇಷ್ಮೆ ನೇಕಾರರು ಉತ್ತಮ ಮಟ್ಟದ ನೇಯ್ಗೆಯಿಂದ ಏಳಿಗೆ ಹೊಂದುವ ಸಾಧ್ಯತೆಯಿದೆ.

ಮಿಥುನ ರಾಶಿ: ಇಂದು ಮಿಥುನ ರಾಶಿಯವರು ಹೊಂದಿಕೊಳ್ಳುವ ದಿನವಾಗಿದ್ದು ನಾಜೂಕಿನ ಕೆಲಸ ಕಾರ್ಯಗಳಿಂದಾಗಿ ವಿಶೇಷ ಮನ್ನಣೆ ಗಳಿಸಬಹುದು. ಇನ್ನು ಜೊತೆಯಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಿಕೊಡು ಹೋಗುವ ಗುಣ ಸ್ವಭಾವ ಅಳವಡಿಸಿಕೊಳ್ಳುವುದು ಖಂಡಿತ ಒಳ್ಳೆಯದು.

ಕಟಕ ರಾಶಿ: ಇಂದು ಕಟಕ ರಾಶಿ ಯವರಿಗೆ ನಿರ್ಧಾರ ತೆಗೆದುಕೊಳ್ಳುವ ದಿನವಾಗಿದ್ದು ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದುವಿರಿ. ಹೌದು ಎದುರಾಳಿಗೆ ಪರಿಣಾಮಕಾರಿ ನಿರ್ಧಾರಗಳು ಅಗತ್ಯವಾಗಿ ತೆಗೆದುಕೊಳ್ಳನೇಕಿದ್ದು ರಫ್ತು ವ್ಯಾಪಾರಗಳು ಮಾಡುವವರಿಗೆ ಸಂಪರ್ಕದಲ್ಲಿ ಅಡೆತಡೆ ಬರಬಹುದು.

ಸಿಂಹ ರಾಶಿ : ಇಂದು ಸಿಂಹ ರಾಶಿಯವರಿಗರ ಅನುಕಂಪದ ದಿನವಾಗಿದ್ದು ಸಾಮಾಜಿಕ ಚಟುವಟಿಕೆಗಳು ಹೆಚ್ಚಲಿದೆ. ಇನ್ನು ಪರಿಸ್ಥಿತಿ ಅವಲೋಕಿಸಿಕೊಂಡು ಮುಂದಿನ ಹೆಜ್ಜೆ ಇರಿಸಬೇಕಿದ್ದು ನಂಬಿಕೆ ಪ್ರತಿಪಾದಿಸಲು ಅಂಜಿಕೆ ಬೇಡ. ಇನ್ನು ಇತರರ ಬಗ್ಗೆ ಅನುಕಂಪ ತೋರುವ ನೀವು ನಿಮ್ಮ ಬಗ್ಗೆ ಗಮನವಿರಿಸಿಕೊಳ್ಳಬೇಕು.

ಕನ್ಯಾ ರಾಶಿ: ಇಂದು ಕನ್ಯಾ ರಾಶಿಯವರಿಗೆ ತಿರ್ಮಾನ ದಿನವಾಗಿದ್ದು ಹೊಸ ಕ್ಲಿನಿಕ್ ಆರಂಭದ ಶುಭ ಕಾರ್ಯಗಳ ಬಗ್ಗೆ ಹಿರಿಯರೊಡನೆ ಸಮಾಲೋಚನೆ ನಡೆದು ತೀರ್ಮಾನ ಸಿಗಲಿದೆ. ಇನ್ನು ರಾಜಕೀಯ ವಿದ್ಯಾಮಾನಗಳಿಂದ ವಿಶ್ರಾಂತಿ ಪಡೆಯಲಿದ್ದು ಶಿಕ್ಷಣ ಮುಂದುವರಿಸಲು ಬಂಧುಗಳ ಸಹಾಯ.

ತುಲಾ ರಾಶಿ : ಇಂದು ತುಲಾ ರಾಶಿಯವರು ಯೋಚನೆ ಮಾಡಿ ಹೆಜ್ಜೆ ಇಡಬೇಕಿದ್ದು ಉದ್ಯೋಗದಲ್ಲಿ ಬದಲಾವಣೆಯ ಆಲೋಚನೆ ಹೊಂದಿದ ವ್ಯಕ್ತಿಗಳು ಸದ್ಯಕ್ಕೆ ಆ ಯೋಚನೆಯನ್ನು ಮರೆಯುವುದು ಒಳ್ಳೆಯದು. ಇನ್ನು ಪಾಲುದಾರರಲ್ಲಿ ಒಮ್ಮತ ಮೂಡಿಸುವಲ್ಲಿ ಯಶಸ್ವಿಯಾಗುವಿರಿ. ಬಾಕಿ ಕೆಲಸ ಪೂರ್ಣಗೊಳಿಸುವಿರಿ.

ವೃಶ್ಚಿಕ ರಾಶಿ: ಇಂದು ವೃಶ್ಚಿಕ ರಾಶಿಯವರಿಗೆ ಶುಭದಿನವಾಗಿಧು
ನ್ಯಾಯಾಲಯದ ವಿಚಾರಣೆಗಳಲ್ಲಿ ಜಯ ನಿಮ್ಮದಾಗಿರುತ್ತದೆ. ಇನ್ನು ಕಬ್ಬಿಣ ಕೆಲಸ ಮಾಡುವವರು ಜಾಗ್ರತೆ ವಹಿಸಬೇಕಿದ್ದು ಕಂಪನಿಯ ಹೊಸ ಹೊಸ ಯೋಜನೆಯ ಜವಾಬ್ದಾರಿ ಯಶಸ್ವಿ ನಿರ್ವಹಿಸುವ ಹೆಗ್ಗಳಿಕೆ ನಿಮ್ಮದಾಗಲಿದೆ

ಧನು ರಾಶಿ: ಇಂದು ಧನು ರಾಶಿಯವರಿಗೆ ಗೌರವದ ದಿನವಾಗಿದ್ದು ಉನ್ನತ ಅಧಿಕಾರಿಗಳ ಸಂಪರ್ಕ ಉಂಟಾಗುವುದು. ಇನ್ನು ಸಂಪರ್ಕ ಸಾಧನದಂತಹ ಉದ್ಯೋಗದಲ್ಲಿ ನಿರತರಾದ ವ್ಯಕ್ತಿಗಳಿಗೆ ಸನ್ಮಾನ ಹಾಗೂ ವಿಶೇಷ ಗೌರವಗಳು ಲಭಿಸುವುದು. ಇನ್ನು ಶುಭಕ್ಕಾಗಿ ಗಣಪತಿಯನ್ನು ಆರಾಧಿಸಬೇಕು.

ಮಕರ ರಾಶಿ :ಇಂದು ಮಕರ ರಾಶಿಯವರು ವೈದ್ಯರ ಸಲಹೆಯಂತೆ ದೇಹಾರೋಗ್ಯಕ್ಕಾಗಿ ಆಹಾರ ಸೇವನೆಯಲ್ಲಿ ಕೆಲವೊಂದು ಬದಲಾವಣೆ ಮಾಡಿ ಕೊಳ್ಳಬೇಕಾಗಬಹುದಾಗಿದೆ. ಇನ್ನು ಸ್ವಂತವಾಗಿ ಉದ್ಯೋಗ ಮಾಡುವವರು ಪ್ರಗತಿ ಕಾಣಲಿದ್ದು ವ್ಯಾಪಾರದಲ್ಲಿ ಹಿನ್ನಡೆ.

ಕುಂಭ ರಾಶಿ : ಇಂದು ಕಂಭ ರಾಶಿಯವರಿಗೆ ಅದೃಷ್ಟದ ದಿನವಾಗಿದ್ದು ಅದೃಷ್ಟ ದೇವತೆ ನಿಮ್ಮ ಕೈ ಹಿಡಿದಿದ್ದಾಳೆ. ಹೌದು ನಿಮ್ಮ ವ್ಯಾಪಾರ ವ್ಯವಹಾರ ಅಧಿಕ ವರಮಾನಗಳನ್ನು ತರಲಿದ್ದು ಮಗನಿಂದ ಶುಭ ಸುದ್ದಿ ಕೇಳುವಿರಿ. ಮಕ್ಕಳಿಗೆ ಓದಿನಲ್ಲಿ ಏಕಾಗ್ರತೆ ಹೆಚ್ಚಲಿದ್ದು ಅನಾರೋಗ್ಯ ನಿರ್ಲಕ್ಷಿಸಬೇಡಿ.

ಮೀನ ರಾಶಿ : ಸದ್ಯ ಖರ್ಚು–ವೆಚ್ಚಗಳು ನಿಯಂತ್ರಣದಲ್ಲಿ ಇರಲಿಕ್ಕಾಗಿ ಹರಸಾಹಸ ಪಡಬೇಕಿದ್ದು ಆಲಂಕಾರಿಕ ವಸ್ತುಗಳ ಖರೀದಿಗಾಗಿ ಅಧಿಕ ಖರ್ಚು. ಇನ್ನು ಸಣ್ಣ ಸಣ್ಣ ವಿಚಾರದಲ್ಲಿ ಅಶಾಂತಿ ತೋರಿಬಂದು ದಾಂಪತ್ಯದಲ್ಲಿ ಕಿರಿಕಿರಿ ಎನಿಸುವುದು.

Leave A Reply

Your email address will not be published.