Karnataka Times
Trending Stories, Viral News, Gossips & Everything in Kannada

Nithya Bhavishya: ತಾಯಿ ಮುಕಾಂಬಿಕೆಯನ್ನು ಭಕ್ತಿಯಿಂದ ನೆನೆದು ಇಂದಿನ ರಾಶಿಫಲ ನೋಡಿ.

Advertisement

ಮೇಷ ರಾಶಿ : ಇಂದು ಮೇಶ ರಾಶಿಯವರಿಗೆ ವಿಶ್ವಾಸದ ದಿನವಾಗಿದ್ದು ವಿದ್ಯುನ್ಮಾನ ಕ್ಷೇತ್ರದ ಸಿಬ್ಬಂದಿಗಳಿಗೆ ಹೆಚ್ಚಿನ ವೇತನ ಸಿಗಲಿದೆ ಎನ್ನಲಾಗಿದೆ. ಇನ್ನು ನೇರ ನುಡಿಯ ಸ್ವಭಾವದಿಂದಾಗಿ ಕೂಡ ಸಹೋದ್ಯೋಗಿಗಳಲ್ಲಿ ವಿಶ್ವಾಸ ಹೆಚ್ಚಲಿದ್ದು ಇದರ ಜೊತೆಗೆ ಆಟಿಕೆ ವಸ್ತುಗಳನ್ನು ಮಾರಾಟ ಮಾಡುವವರಿಗೆ ಶುಭದಿನ ಎನ್ನಬಹಯದು.

ವೃಷಭ ರಾಶಿ : ಇಂದು ವೃಷಭ ರಾಶಿಯವರಿಗೆ ಅದೃಷ್ಟದ ದಿನವಾಗಿದ್ದು ಕೌಟುಂಬಿಕ ಸಂಬಂಧಗಳನ್ನು ಮತ್ತಷ್ಟು ಮೊಗದಷ್ಟು ಗಟ್ಟಿಗೊಳಿಸಿಕೊಳ್ಳಲು ಕಾರ್ಯ ಪ್ರವೃತ್ತರಾಗುವಿರಿ ಎನ್ನಬಹುದು. ಇನ್ನು ಕೆಲಸದಲ್ಲಿನ ಅಡೆತಡೆಗಳ ನಿವಾರಣೆಯಾಗಿ ಸಮಯ ಉಳಿತಾಯವಾಗಲಿದ್ದು ಜೊತೆಗೆ ಸ್ನೇಹಿತರ ಮನೆಯ ಔತಣಕ್ಕೆ ಭೇಟಿ ಕೂಡ ನೀಡುವಿರಿ.

ಮಿಥುನ ರಾಶಿ : ಇಂದು ಮಿಥುನ ರಾಶಿಯವರು ಯೋಚಿಸಬೇಕಾದ ದಿನವಾಗಿದ್ದು ಕೆಲಸಗಾರರಲ್ಲಿ ಇಂದು ಒಮ್ಮತಾಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗುವಿರಿ ಎನ್ನಲಾಗಿದೆ. ಇನ್ನು ಕೆಲಸದಲ್ಲಿ ಪ್ರಮುಖ ಬೆಳವಣಿಗೆ ನಿಮ್ಮ ಗಮನಕ್ಕೆ ಬರಲಿದ್ದು ಬಯಕೆಗಳು ಸುಲಭವಾಗಿ ಈಡೇರುತ್ತವೆ. ಮನರಂಜನೆಗಾಗಿ ಖರ್ಚು ಮಾಡುವಿರಿ.

ಕಟಕ ರಾಶಿ : ಇಂದು ಕಟಕರಾಶಿಯವರಿಗೆ ಗೊಂದಲದ ದಿನವಾಗಿದ್ದುಈ ದಿನ ನೀವು ಆಡಿದ ಮಾತುಗಳು ತಿರುಗಿ ನಿಮಗೆ ಮುಳ್ಳಾಗುವ ರೀತಿಯಲ್ಲಿ ಇರಲಿದೆ. ಜೊತೆಗೆ ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲು ಏರಬೇಕಾಗಲಿದ್ದು ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ

ಸಿಂಹರಾಶಿ: ಇಂದು ಸಿಂಹ ರಾಶಿಗೆ ಅಪೇಕ್ಷೆಯ ದಿನವಾಗಿದ್ದು
ಅಧಿಕಾರಿ ಮತ್ರು ಹಿರಿಯರಿಂದ ಸಹಾಯ ಸಹಕಾರಗಳನ್ನು ಅಪೇಕ್ಷಿಸುವಂತಹ ದಿನವಾಗಿದೆ. ಇನ್ನು ನಿಮ್ಮ ವೃತ್ತಿ ಜೀವನಕ್ಕೆ ಬಹಳ ಅವಶ್ಯಕ ನಿರ್ಧಾರವೊಂದನ್ನು ಇಂದು ತೆಗೆದುಕೊಳ್ಳಲಿದ್ದು ಲೇವಾದೇವಿ ವ್ಯವಹಾರ ಲಾಭ ತರಲಿದೆ.

ಕನ್ಯಾರಾಶಿ : ಇಂದು ಕನ್ಯಾರಾಶಿ ಯವರಿಗೆ ಶುಭ ಹಾಗೂ ಅಶುಭ ಎರಡರ ದಿನವಾಗಿದ್ದು ಸಾಂಸಾರಿಕ ವಿಷಯದಲ್ಲಿ ಹಿರಿಯರ ಮಾತು ಮೀರದಿರುವುದು ಲೇಸು. ಇನ್ನು ಪ್ರಾಪಂಚಿಕ ಅನುಭವಕ್ಕಾಗಿ ಕಾನೂನಿನ ಬಗ್ಗೆ ಅಧ್ಯಯನ ಮಾಡುವ ಮನಸ್ಸಾಗಲಿದ್ದು ನೀಲಿ ಬಣ್ಣ ಶುಭ ಉಂಟುಮಾಡುತ್ತದೆ.

ತುಲಾರಾಶಿ : ಇಂದು ತುಲಾ ರಾಶಿಯವರಿಗೆ ಆಸಕ್ತಿಯ ದಿನವಾಗಿದ್ದು ವಾತ-ಪಿತ್ತಗಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಇನ್ನು ಕರ-ಕುಶಲ ವಸ್ತುಗಳ ತಯಾರಿಕೆಯಲ್ಲಿ ಆಸಕ್ತಿ ಹೆಚ್ಚಲಿದ್ದು ಜೊತೆಗೆ ಲಾಭವೂ ಇದೆ. ಇನ್ನು ತಂದೆ-ತಾಯಿಯ ಆರೋಗ್ಯದ ಕಡೆಗೆ ಗಮನ ಕೊಡಿ.

ವೃಶ್ಚಿಕರಾಶಿ : ಇಂದು ವೃಶ್ಚಿಕ ರಾಶಿಯವರಿಗೆ ಶುಭ ದಿನವಾಗಿದ್ದು ಕುಟುಂಬ ಕಲಹಗಳು ರಾಜಿಯಲ್ಲಿ ತೀರ್ಮಾನಗೊಳ್ಳಲಿದೆ. ಇನ್ನು ಬಂಧುಗಳ ಸಲಹೆ-ಸಹಕಾರ ನೂತನ ಕಾರ್ಯಗಳಿಗೆ ಉತ್ತಮ ಫಲ ಕೊಡಲಿದ್ದು ಊರಿನ ಅಭಿವೃದ್ಧಿಗೆ ನಿಮ್ಮಿಂದ ಅಡಿಪಾಯ ಹಾಕುವಂತಹ ಕೆಲಸ ಆಗಲಿದೆ ಎನ್ನಬಹುದು.

ಧನು ರಾಶಿ: ಇಂದು ಧನು ರಾಶಿಯವರಿಗೆ ಖರೀದಿಯ ದಿನವಾಗಿದ್ದು ಮುತ್ತುರತ್ನಗಳ ಆಭರಣದ ಖರೀದಿ ಮಾಡುವ ಸಂದರ್ಭದಲ್ಲಿ ಸ್ನೇಹಿತೆಯ ಅಭಿರುಚಿ ಸರಿ ಎನ್ನಿಸಬಹುದು. ಇನ್ನು ಮಾತನಾಡುವಾಗ ನೀವು ಬಳಸುವ ಪದಗಳಿಂದಾಗಿ ಕೆಲವರು ವ್ಯಕ್ತಿತ್ವವನ್ನು ಲೆಕ್ಕ ಹಾಕುತ್ತಾರೆ ಎನ್ನಲಾಗಿದೆ.

ಮಕರ ರಾಶಿ: ಇಂದು ಮಕರ ರಾಶಿ ಯವರು ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಪರಿಣಾಮ ಬೀರುವಂತಹ ಸಾಧ್ಯತೆ ಇದ್ದು ವಾಹನ ಖರೀದಿಗಾರರಿಗೆ ಇದು ಸೂಕ್ತ ಸಮಯವಲ್ಲದಿದ್ದರೂ ಕೂಡ ಮಾರಾಟಗಾರಿಗೆ ಲಾಭದ ದಿನವಾಗಿದೆ.

ಕುಂಭರಾಶಿ : ಕುಂಭರಾಶಿಯವರು ಇಂದು ಹಠವು ನಿಮ್ಮ ಹೆತ್ತವರನ್ನು ಕಂಗಾಲು ಪಡಿಸುತ್ತದೆ ಎನ್ನಬಹುದು. ಕ್ರೀಡಾಪಟುಗಳು ಇಷ್ಟು ದಿನ ಛಲ ಬಿಡದೆ ಪರಿಶ್ರಮ ವಹಿಸಿದ್ದಕ್ಕಾಗಿ ಉತ್ತಮ ಅವಕಾಶಗಳೊಂದಿಗೆ ಉತ್ತಮ ಮಾರ್ಗದರ್ಶಕರು ದೊರೆತು ಜಯದ ಪಥದಲ್ಲಿ ನಡೆಯುವಿರಿ ಎನ್ನಲಾಗಿದೆ.

ಮೀನರಾಶಿ : ಇಂದು ಮೀನ ರಾಶಿ ರವರಿಗೆ ಸೂತ್ರಧಾರನು ನಡೆಸುತ್ತಿರುವ ಕೈವಾಡವು ನಿಮಗೆ ಕಷ್ಟವಾಗುತ್ತಿದ್ದರು ಏನೂ ಮಾಡದ ಪರಿಸ್ಥಿತಿ ಎದುರಾಗುತ್ತದೆ ಎನ್ನಲಾಗಿದೆ. ಇನ್ನು ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಪರ ಊರಿಗೆ ಕಳುಹಿಸುವ ವಿಚಾರ ಅರಗಿಸಿಕೊಳ್ಳಲಾಗದ ತುತ್ತಾಗುತ್ತದೆ.

Leave A Reply

Your email address will not be published.