Dhirendra Shastri: ಭಾಗೇಶ್ವರ್ ಧಾಮ್ ಧೀರೇಂದ್ರ ಶಾಸ್ತ್ರಿ ಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ

Advertisement
ಮಧ್ಯಪ್ರದೇಶದ ಬಾಗೇಶ್ವರಧಾಮದ (Bageshwar Dham) ರಾಜಕೀಯ ಪ್ರಭಾವಿ ಹಿಂದೂ ರಾಷ್ಟ್ರ ಬೆಂಬಲಿಗ ದೇವಮಾನವ ಧೀರೇಂದ್ರ ಶಾಸ್ತ್ರಿ (Dhirendra Shastri) ಸದಾ ತಮ್ಮ ಹೇಳಿಕೆಗಳಿಂದ ಸುದ್ದಿಯಾಗುತ್ತಾರೆ. ಈಗ ಅವರ ಮಾತ್ತೊಂದು ಮಾತು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೆಲವು ದಿನಗಳ ಹಿಂದೆ ರಾಮಚರಿತ್ ಮಾನಸ್ ಮೈದಾನದಲ್ಲಿ ಕಚೇರಿಯ ಉದ್ಘಾಟನೆಯ ಸಮಯದಲ್ಲಿ ಧೀರೇಂದ್ರ ಕೃಷ್ಣ ಶಾಸ್ತ್ರಿ (Dhirendra Shastri) ‘ಹಿಂದೂಗಳು ಮೂರರಿಂದ ನಾಲ್ಕು ಮಕ್ಕಳಿಗೆ ಜನ್ಮನೀಡಿ. ಅವರಲ್ಲಿ ಇಬ್ಬರನ್ನ ರಾಮನ ಸೇವೆಗೆ ಬಿಟ್ಟುಬಿಡಿ’ ಎಂದು ಹೇಳಿದ್ದಾರೆ. ಸದ್ಯ ಈ, ಮಾತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷಟಿಸಿದೆ.
Advertisement
ಮುಂಬರುವ ರಾಮನವಮಿಯ ಕಚೇರಿಯನ್ನು ಉದ್ಘಾಟಿಸಲು ಛಾರ್ಪುರದ ಬಾಗೇಶ್ವರ ಧಾಮದ ಪೀಠಾಧೀಶ್ವರ ಪಂಡಿತ್. ಅನ್ನಪೂರ್ಣ ರಾಮಲೀಲಾ ಮೈದಾನದಲ್ಲಿ ಮುಂಬರುವ ರಾಮನವಮಿಯ ತಯಾರಿಗಳು ನಡೆಯುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ರಾಮನವಮಿಗೆ ಅದ್ದೂರಿಯಾಗಿ ತಯಾರಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಇಲ್ಲಿ ವಿಶೇಷ ಕಚೇರಿಯೊಂದನ್ನ ನಿರ್ಮಾಣ ಮಾಡಲಾಗಿದ್ದದು, ಕಚೇರಿಯ ಉದ್ಘಾಟನೆಗೆ ಬಂದಿದ್ದ ಧೀರೇಂದ್ರ ಶಾಸ್ತ್ರಿ ಭಾಷಣದ ವೇಳೆ ಈ ರೀತಿ ವಿವಾದಾತ್ಮ ಹೇಳಿಕೆ ನೀಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಸುಮಾರು 5ಸಾವಿರ ಜನರು ಸೇರಿದ್ದರು ಎಂದು ಹೇಳಲಾಗುತ್ತಿದ್ದು, ಪಂಡಿತ್ ಧೀರೇಂದ್ರ ಶಾಸ್ತ್ರಿ, ಹಿಂದೂ ರಾಷ್ಟ್ರ ಕಿ ಜೈʼ ಎಂಬ ಘೋಷಣೆ ಕೂಗಿದ್ದಾರೆ. ಸುತ್ತಮುತ್ತ ಅಳವಡಿಸಲಾಗಿದ್ದ ಬ್ಯಾನರ್ ಗಳಲ್ಲೂ ಹಿಂದೂ ರಾಷ್ಟ್ರದ ಪರ ಘೋಷವಾಕ್ಯಗಳು ಕಂಡುಬಂದಿದ್ದವು.
ನನಗೆ ಬೆಂಬಲ ಕೊಡಿ.. ನಾನು ನಿಮಗೆ ಹಿಂದೂ ರಾಷ್ಟ್ರ ಕೊಡುತ್ತೇನೆ ಎಂದು ಹೇಳಿ ಹಿಂದೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ರು.
ಸುಭಾಷ್ ಚಂದ್ರ ಬೋಸ್ ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ” ಎಂದಿದ್ದರು. ನೀವು ನನ್ನನ್ನು ಬೆಂಬಲಿಸಿ, ನಾನು ನಿಮಗೆ ಹಿಂದೂ ರಾಷ್ಟ್ರವನ್ನು ನೀಡುತ್ತೇನೆ ಎಂದು ಹಿಂದೂಗಳಿಗೆ ಕರೆ ನೀಡಿದ್ದರು.
Advertisement