Karnataka Times
Trending Stories, Viral News, Gossips & Everything in Kannada

Horoscope Today: ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Advertisement

ದಿನನಿತ್ಯ ಯಾವುದಾದರೂ ಶುಭ ಕಾರ್ಯಗಳನ್ನು ಮಾಡಲು ತಯಾರಾಗುತ್ತೀರಿ, ‌ ನಿಮ್ಮ ಭವಿಷ್ಯ ಒಳಿತು , ಕೆಡುಕು ಇದೆಯಾ ನೋಡುವುದು ಕೂಡ ಬಹಳ ಮುಖ್ಯ, 2023 ಮಾರ್ಚ್ 17 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ ಇಲ್ಲಿದೆ ಮಾಹಿತಿ.

ಮೇಷರಾಶಿಯವರಿಗೆ ಮಂಗಳನ ಪ್ರಭಾವ ಇದೆ, ಕೌಂಟುಬಿಕ ವ್ಯವಹಾರಗಳು ಮಹತ್ವದ ತಿರುವು ಪಡೆದುಕೊಳ್ಳಲಿದೆ. ಕಠಿಣ ಪರಿಶ್ರಮದ ಮೂಲಕ ವೃತ್ತಿಪರ ವಿಚಾರಗಳಲ್ಲಿ ಅಭಿವೃದ್ಧಿ ಹೊಂದುವ ಸಾಧ್ಯತೆಗಳಿವೆ.ಮೇಲಧಿಕಾರಿಗಳಿಂದ ಪ್ರೋತ್ಸಾಹ ಮತ್ತು ಪ್ರಶಂಸೆಯು ಸಿಗಲಿದೆ. ಉದ್ವಿಗ್ನತೆಗೆ ಒಳಗಾಗದೇ ಎಚ್ಚರಿಕೆಯಿಂದ ಕೆಲಸವನ್ನು ಮಾಡಿ ಮುಗಿಸಿ.

ವೃಷಭ ರಾಶಿ: ಇಂದು ನಡೆಯುವ ಘಟನೆಯಿಂದ ಸಂಗಾತಿಗೆ ಸಂತೋಷವಾಗುವುದು. ಮದುವೆ ಸಮಾರಂಭಕ್ಕೆ ಸಿಗುವ ಶುಭ ಚಾಲನೆಯು ದೊರೆಯಲಿದೆ, ಇಂದು ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಅನೇಕ ದಿನಗಳಿಂದ ಕೆಲ ವಿಷಯವನ್ನು ಅರ್ಥಮಾಡಿಕೊಳ್ಳಲು ತೊಂದರೆಗೀಡಾಗಬಹುದು. ಆದರೆ ಇಂದು ನೀವು ಅದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯ ಜನರು ವೃತ್ತಿ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಕೆಲಸದ ವಾತಾವರಣವು ನಿಮಗೆ ಅನುಕೂಲಕರವಾಗಿರುತ್ತದೆ ಮತ್ತು ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆಯನ್ನು ಸರಿಯಾಗಿ ಬಳಸಲು ನಿಮಗೆ ಸಾಧ್ಯವಾಗಲಿದೆ

ಕಟಕ ರಾಶಿ: ಕಟಕ ರಾಶಿಯವರು ಮಾತಿಗಿಂತ ಮಾಡಿ ತೋರಿಸುವುದು ಉತ್ತಮ. ಕೆಲಸದ ಕಾರ್ಯಗಳಿಗೆ ಹೆಚ್ಚು ಓತ್ತು ನೀಡಿ ನಿಮ್ಮ ಗುರಿಯನ್ನು ಸಾಧಿಸಲು ಎದೆಗುಂದ ಬೇಡಿ. ದೈರ್ಯದಿಂದ ಕೆಲಸ ಎದುರಿಸಿ

Advertisement

ಸಿಂಹ ರಾಶಿ: ಸಿಂಹ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚು ನಿಗಾವಹಿಸಿ. ಹೊಸ ವಿಚಾರಗಳ ಕಲಿಕೆಗೆ ಹೆಚ್ಚು ಅವಕಾಶಗಳು ದಕ್ಕಲಿವೆ. ಪ್ರಯತ್ನ ಪಡುತ್ತೀರಿ

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಒಳ್ಳೆಯ ಆಲೋಚನೆಗಳು ಮಾಡುತ್ತೀರಿ, ತಾಳ್ಮೆಯಿಂದ ಕಾದರೆ ಸೂಕ್ತ ಪ್ರತಿಫಲ ದೊರೆಯಲಿದೆ. ಉತ್ತಮ ಪ್ರಗತಿದಾಯಕ ಧನಾರ್ಜನೆ. ನಾನಾ ರೀತಿಯಲ್ಲಿ ಧನ ಸದ್ವಿನಿಯೋಗ. ಒಳ್ಳೆಯದನ್ನೇ ಯೋಚಿಸಿರಿ

ಧನಸ್ಸು ರಾಶಿ: ಧನಸ್ಸು ರಾಶಿ , ಹಾಸಿಗೆ ಇದ್ದಷ್ಟಕ್ಕೆ ಮಾತ್ರ ಕಾಲು ಚಾಚುವುದು ಒಳ್ಳೆಯದ್ದು. ನಿಮಗೆ ಹೊರಿಸಿದ ಭಾರವನ್ನು ನೀವೇ ಹೊರಬೇಕು. ಶುಭವಾಗಲಿದೆ. ಸ್ವಯಂ‌ ನಿಷ್ಠೆ ಯಿಂದ ಕೆಲಸ ಮಾಡಿ ನಿಮ್ಮ ಛಲ ಸಾಧಿಸುವಿರಿ

ಮಕರ ರಾಶಿ: ಮಕರ ರಾಶಿಗೆ ಜನಮನ್ನಣೆ ಲಭ್ಯ. ಆಸ್ತಿ ವಿಚಾರದಲ್ಲಿ ಸಂತೋಷ. ಬಂಧುಮಿತ್ರರ ಆಗಮನ. ಗೃಹದಲ್ಲಿ ಸಂಭ್ರಮದ ಪರಿಸ್ಥಿತಿ.

ಕುಂಭ ರಾಶಿ: ಕುಂಭ ರಾಶಿಗೆ ಅಯೋಗ್ಯರ ಮುಂದೆ ನಿಮ್ಮ ಪ್ರತಿಭೆಯ ಪ್ರದರ್ಶನ ಮಾಡಿಕೊಳ್ಳದಿರಿ. ಇಡೀ ದಿನ ಸಂತೋಷದಿಂದ ದಿನ ಕಳೆಯಲಿದ್ದೀರಿ.

ಮೀನ ರಾಶಿ: ಮೀನ ರಾಶಿ ಗೆ ದೂರದ ಬಂಧುಮಿತ್ರರ ಭೇಟಿ. ಸಂಭ್ರಮದ ವಾತಾವರಣ. ಹೂಡಿಕೆಗಳಲ್ಲಿ ಆಸಕ್ತಿಮುಂದುವರಿಕೆ. ಏಕಾಗ್ರತೆಯಿಂದಿರಿ

Advertisement

Leave A Reply

Your email address will not be published.