Gajakesari Yoga: ಮೇ ತಿಂಗಳಲ್ಲಿ ಈ 3 ರಾಶಿಯವರಿಗೆ ಗಜಕೇಸರಿಯೋಗ, ಮುಟ್ಟಿದ್ದೆಲ್ಲಾ ಬಂಗಾರ
ಇದೇ ಮೇ 17ರಂದು ಮೇಷ ರಾಶಿಯಲ್ಲಿ ಗುರುಚಂದ್ರರ ಸಂಯೋಜನೆಯಿಂದಾಗಿ ಗಜಕೇಸರಿ ಯೋಗ ಸೃಷ್ಟಿಯಾಗುತ್ತಿದ್ದು ಲಕ್ಷ್ಮೀದೇವಿಯ(Lakshmi Devi) ಕೃಪಾಕಟಾಕ್ಷದಿಂದಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮೂರು ಅದೃಷ್ಟವಂತ ರಾಶಿ ಅವರು ಈ ರಾಜಯೋಗದ ಲಾಭವನ್ನು ಪಡೆಯಲಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಆ ಮೂರು ಅದೃಷ್ಟವಂತ ರಾಶಿ ಅವರು ಯಾರೆಲ್ಲಾ ಹಾಗು ಅವರು ಪಡೆಯಲಿರುವಂತಹ ಲಾಭಗಳು ಏನು ಎಂಬುದನ್ನು ತಿಳಿಯೋಣ ಬನ್ನಿ.
ಮೇಷ ರಾಶಿ: ಗಜಕೇಸರಿ ಯೋಗ ಸೃಷ್ಟಿಯಾಗುತ್ತಿರುವುದು ಕೂಡ ಮೇಷ ರಾಶಿಯಲ್ಲೇ(Mesha Rashi) ಹೀಗಾಗಿ ಈ ಯೋಗದಿಂದಾಗಿ ಮೇಷ ರಾಶಿಯವರು ಸಾಕಷ್ಟು ಆರ್ಥಿಕ ಲಾಭಗಳು ಉಂಟಾಗಲಿದ್ದು ಕೆಲಸದಲ್ಲಿ ಸಂಬಳದ ಹೆಚ್ಚಳ ಹಾಗೂ ವ್ಯಾಪಾರದಲ್ಲಿ ಲಾಭದ ಹೆಚ್ಚಳ ಕೂಡ ಆಗಲಿದೆ. ಯಾವುದಾದರೂ ಕೆಲಸಗಳಿಂದ ಅಪೂರ್ಣವಾಗಿ ಅರ್ಧಕ್ಕೆ ನಿಂತಿದ್ದರೆ ಅದು ಕೂಡ ಪೂರ್ಣವಾಗಲಿದೆ. ಆರ್ಥಿಕ ಲಾಭದ ವಿಚಾರದಲ್ಲಿ ಮೇಷ ರಾಶಿಯವರು ಅದೃಷ್ಟವಂತರು ಎಂದು ಹೇಳಬಹುದು.
ಮಿಥುನ ರಾಶಿ: ಆರ್ಥಿಕ ಸ್ಥಿತಿಯಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣುವ ಮಿಥುನ ರಾಶಿಯವರು(Mithuna Rashi) ಸಮಾಜದಲ್ಲಿ ತಮ್ಮ ಕೆಲಸಗಳಿಂದಾಗಿ ಗೌರವಯುತವಾದ ಸ್ಥಾನಮಾನವನ್ನು ಪಡೆದುಕೊಳ್ಳಲಿದ್ದಾರೆ. ನೀವು ಮಾಡುವಂತಹ ಕೆಲಸಗಳು ನಿಮ್ಮ ಮೇಲಾಧಿಕಾರಿಗಳಿಗೆ ಮೆಚ್ಚುಗೆಯನ್ನು ತರಲಿದ್ದು ಇದರಿಂದಾಗಿ ನಿಮ್ಮ ಮನೆಯ ವಾತಾವರಣ ಕೂಡ ನಿಮ್ಮಿಂದಾಗಿ ಸಂತೋಷಮಯವಾಗಿರಲಿದೆ. ವಿಶೇಷವಾಗಿ ಮಿಥುನ ರಾಶಿಯ ವ್ಯಾಪಾರಸ್ಥರಿಗೆ ಈ ಗಜಕೇಸರಿ ಯೋಗ ಎನ್ನುವುದು ವ್ಯಾಪಾರದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಧನ ಲಾಭವನ್ನು ಉಂಟು ಮಾಡಲಿದೆ.
ತುಲಾ ರಾಶಿ: ವ್ಯಾಪಾರಸ್ಥರು ಅಧಿಕ ಲಾಭವನ್ನು ಪಡೆಯುವಂತಹ ಶುಭಗಳಿಗೆ ಇದಾಗಿದ್ದು ಲಕ್ಷ್ಮಿ ದೇವಿಯ ಕೃಪಾಕಟಾಕ್ಷದಿಂದಾಗಿ ತುಲಾ ರಾಶಿಯವರ ಆರ್ಥಿಕ ಸ್ಥಿತಿಗತಿ ತುಂಬಾ ಸುಧಾರಣೆಯನ್ನು ಕಾಣಲಿದೆ. ಗಜಕೇಸರಿ ಯೋಗ ದಿಂದ ಲಕ್ಷ್ಮಿ ದೇವಿಯ ಕೃಪಾಕಟಾಕ್ಷದ ಮೂಲಕ ಅದೃಷ್ಟವನ್ನು ಸಂಪಾದಿಸಲಿರುವ ಅದೃಷ್ಟವಂತ ಮೂರು ರಾಶಿಗಳು ಇವೇ ಆಗಿವೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದರ ತಪ್ಪದೇ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.