Karnataka Times
Trending Stories, Viral News, Gossips & Everything in Kannada

Brahmanda Guruji: ಸಿನೆಮಾದಲ್ಲಿ ನಟಿಸುತ್ತಿದ್ದ ಬ್ರಹ್ಮಾಂಡ ಗುರೂಜಿ ಜ್ಯೋತಿಷಿಯಾಗಿದ್ದೇಕೆ? ಇಲ್ಲಿದೆ ವರದಿ.

ಸಾಮಾನ್ಯವಾಗಿ ನರೇಂದ್ರ ಬಾಬು ಶರ್ಮಾ (Narendra Babu Sharma) ಎಂದರೆ ಯಾರಿಗೂ ತಿಳಿಯುವುದಿಲ್ಲ.ಆದರೆ ಬ್ರಹ್ಮಾಂಡ ಗುರೂಜಿ (Bhmanda Guruji) ಎಂದರೆ ಇಡೀ ಕರ್ನಾಟಕಕ್ಕೆ ಚಿರ ಪರಿಸಿತ. ಅವರು ಮೂಲತಃ ಮಂಡ್ಯ (Mandya) ಜಿಲ್ಲೆಯವರಾಗಿದ್ದು ನರೇಂದ್ರ ಬಾಬು ಶರ್ಮ ರವರು ಡಿಪ್ಲೋಮೋ ಇನ್ ಎಲೆಕ್ಟ್ರಿಕಲ್ (Diploma In Electrical) ವ್ಯಾಸಂಗವನ್ನು ಮಾಡಿದ್ದಾರೆ. ಇನ್ನು ನರೇಂದ್ರ ಬಾಬು ಶರ್ಮಾ ರವರಿಗೆ ಇಷ್ಟೆಲ್ಲ ಓದಿದ್ದರು ಕೂಡ ತಾನು ನಟನಾಗಬೇಕು (Actor) ಎಂಬ ಆಸೆ ಇರುತ್ತದೆ. ಆದರೆ ಮಾತ್ರ ಇದಕ್ಕೆ ಅವರ ಕುಟುಂಬದಿಂದ (Family) ವಿರೋಧ ವ್ಯಕ್ತವಾಗುತ್ತದೆ. ಆದರೆ ನರೇಂದ್ರ ಬಾಬು ಶರ್ಮಾ ರವರು ಡಿಪ್ಲೋಮೋ ಓದಿದ ಬಳಿಕ ಬೆಂಗಳೂರಿಗೆ (Banglore) ಬಂದು ಗಾಂಧಿನಗರದಲ್ಲಿ (Gandhinagar) ಅವಕಾಶಕ್ಕಾಗಿ ಹುಡುಕುತ್ತಿರುತ್ತಾರೆ.

ಹೀಗೆ ನಟನಾಗಬೇಕು ಎಂಬ ಆಸೆಯಿಂದ ಅವಕಾಶಕ್ಕಾಗಿ ಹುಡುಕುತ್ತಿರುವಾಗ ನರೇಂದ್ರಬಾಬು ರವರ ದೈತ್ಯ ಆಕಾರವನ್ನು ನೋಡಿದ ಅನೇಕರು ಇವರಿಗೆ ಕಾಮಿಡಿ ಪಾತ್ರಕ್ಕೆ (Comedy Role) ಅವಕಾಶವನ್ನು ನೀಡುತ್ತಾರೆ. ಹೀಗೆ ದಿನಗಳು ಕಳೆದ ಬಳಿಕ ನರೇಂದ್ರ ಬಾಬು ಶರ್ಮಾ ಅವರಿಗೆ ತಾನು ಪ್ರಖ್ಯಾತಿ ಪಡೆದುಕೊಳ್ಳಬೇಕು ಎಂದು ಅನಿಸಲು ಪ್ರಾರಂಭವಾಗುತ್ತದೆ. ಆಗ ನರೇಂದ್ರಬಾಬು ಶರ್ಮ ರವರು ಇದ್ದಕ್ಕಿದ್ದ ಹಾಗೆ ಬೆಂಗಳೂರಿಂದ ಕಾಣೆಯಾಗಿ ಜ್ಯೋತಿಷ್ಯ ಶಾಸ್ತ್ರವನ್ನು ಕಲಿತು ಮತ್ತೆ ಬೆಂಗಳೂರಿಗೆ ಹಿಂದಿರುಗುತ್ತಾರೆ.

Join WhatsApp
Google News
Join Telegram
Join Instagram

ಈ ರೀತಿಯಾಗಿ ವಾಪಸ್ ಆದ ಬಳಿಕ ಆಗ ಕಸ್ತೂರಿ ವಾಹಿನಿಯಲ್ಲಿ (Kasturi Channel) ಬ್ರಹ್ಮಾಂಡ ಎಂಬ ಕಾರ್ಯಕ್ರಮವನ್ನು ಶುರು ಮಾಡುತ್ತಾರೆ. ಇನ್ನು ದಿನಗಳು ಕಳೆದಂತೆ ಬ್ರಹ್ಮಾಂಡ ಗುರೂಜಿಯವರ ಮಾತುಗಳನ್ನು ಎಲ್ಲರೂ ಒಪ್ಪಿಕೊಳ್ಳಲು ಶುರು ಮಾಡುತ್ತಾರೆ. ಹೀಗೆ ಪ್ರಖ್ಯಾತಿ ಪಡೆದುಕೊಂಡ ಬಳಿಕ ಜೀ ಕನ್ನಡ (Zee Kannada) ವಾಹಿನಿಯಲ್ಲಿ ಭವ್ಯ ಬ್ರಹ್ಮಾಂಡ ಎಂಬ ಕಾರ್ಯಕ್ರಮವನ್ನು ಶುರು ಮಾಡುತ್ತಾರೆ. ಬ್ರಹ್ಮಾಂಡ ಗುರೂಜಿ ಅವರು ತಮ್ಮ ಮಾತಿನ ಶೈಲಿಯಿಂದ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿರುತ್ತಾರೆ ಕೂಡ.

ಇನ್ನು ಬೇರೆ ಜ್ಯೋತಿಷಿಗಳಿಗೆ ಹೋಲಿಸಿದರೆ ಬ್ರಹ್ಮಾಂಡ ಗುರೂಜಿ ಬೆಟರ್ ಎನ್ನಬಹುದಾಗಿದ್ದು ಏಕೆಂದರೆ ಬೇರೆ ಜ್ಯೋತಿಷಿಗಳು ಜನರಿಂದ ಹಣವನ್ನು ಲೂಟಿ ಮಾಡುತ್ತಾರೆ ಆದರೆ ಇಲ್ಲಿಯವರೆಗೆ ಕೂಡ ಬ್ರಹ್ಮಾಂಡ ಗುರೂಜಿಯ ಮೇಲೆ ಯಾವುದೇ ವಂಚನೆಯ ಪ್ರಕರಣ ಇಲ್ಲ. ಇದುವರೆಗೆ ಯಾರೂ ಕೂಡ ಬ್ರಹ್ಮಾಂಡ ಗುರೂಜಿಗೆ ಹಣಕೊಟ್ಟು ಮೋಸ ಹೋಗಿದ್ದೇನೆ ಎಂದು ಹೇಳಿಲ್ಲ. ಹೌದು ಆದ್ದರಿಂದ ಬೇರೆ ಜ್ಯೋತಿಷಿಗಳಿಗೆ ಹೋಲಿಸಿದರೆ ಬ್ರಹ್ಮಾಂಡ ಗುರೂಜಿ ಬೆಟರ್ ಎನ್ನಬಹುದು. ಇನ್ನು ಬ್ರಹ್ಮಾಂಡ ಗುರೂಜಿ ಯಾವುದೇ ರೀತಿಯಾಗಿ ಕೋಟಿ ಕೋಟಿ ಲೆಕ್ಕದ ಆಸ್ತಿಯನ್ನು ಕೂಡ ಮಾಡಿಲ್ಲ.

Leave A Reply

Your email address will not be published.