ಪ್ರತಿಬಾರಿಯೂ ತನ್ನ ತ್ರಿಕಾಲ ಜ್ಞಾನದಿಂದ ಭವಿಷ್ಯ ನುಡಿಯುವ ಕೋಡಿಮಠ ಶ್ರೀ (Kodimata Sri) ಗಳ ಭವಿಷ್ಯ ಬಹುತೇಕ ಎಲ್ಲಾ ಸಮಯಗಳಲ್ಲಿ ಸತ್ಯವಾಗಿದ್ದು ಗೊತ್ತೇ ಇದೆ. ತನ್ನದೇ ಜ್ಞಾನದಿಂದ ಭವಿಷ್ಯ ನುಡಿಯುವ ಶ್ರೀಗಳ ಹೇಳಿಕೆಯ ಬಗ್ಗೆ ಹಲವರು ಅಚ್ಚರಿ ವ್ಯಕ್ತಪಡಿಸುತ್ತಾರೆ. ಹಾಗೆಯೇ ಈ ಬಾರಿಯೂ ಕೂಡ ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದು, ಹಲವರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಶ್ರೀಗಳ ನುಡಿಯಲ್ಲಿ ಏನಿದೆ ಎನ್ನುವುದನ್ನು ಹೇಳ್ತೀವಿ ನೋಡಿ.
ರಾಜ್ಯದಲ್ಲಿ ಪ್ರಾಕೃತಿಕ ಸ್ಥಿತಿಗತಿ ಹದಗೆಟ್ಟಿದ್ದು ಭೂಮಿ, ಅಗ್ನಿ, ವಾಯು, ಆಕಾಶ ಹೀಗೆ ಪಂಚಭೂತದಿಂದ ನಾನಾ ರೀತಿಯಲ್ಲಿ ತೊಂದರೆಯಾಗಲಿದ್ದು, ಸಾವಿರಾರು ಜನಸಾಮಾನ್ಯರು ಸಾವಾಂನ್ನಪ್ಪಲಿದ್ದಾರೆ ಎಂದು ಹಾರನಹಳ್ಳಿ ಗ್ರಾಮದ ಕೋಡಿಮಠ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ (Kodimata Sri) ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಗ್ರಾಮದ ಕೋಡಿಮಠದಲ್ಲಿ ಇಡೀ ರಾಜ್ಯವನ್ನೇ ಪ್ರಸ್ತಾಪಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಪ್ರವಾಹವಾಗಲಿದ್ದು, ಭೂಮಿ ಬಿರುಕು ಬಿಡುತ್ತದೆ, ಗುಡ್ಡ ಬೀಳುತ್ತದೆ, ಜಗತ್ತಿನಾದ್ಯಂತ ಅನೇಕ ಪ್ರದೇಶಗಳು ಮುಳುಗಲಿವೆ. ಇನ್ನೂ ಧರೆಗೆ ಬೀಳುವ ಮಳೆಯಿಂದ ಅನೇಕ ಅನಾಹುತಗಳಾಗಲಿದೆ ಎಂದು ತಿಳಿಸಿರುವುದು ಅನೇಕರಲ್ಲಿ ದ್ವಂದ್ವ ಉಂಟುಮಾಡಿದೆ.
ಅಲ್ಲದೇ ಈ ಹಿಂದೆ ನಾನು ಹೇಳಿದ ಹಾಗೆ ಮಳೆಯಿಂದ ಸಂಭಾವಿಸುವ ಅಪಾಯ ಇನ್ನೂ ಮುಗಿದಿಲ್ಲ, ಮುಂದುವರಿಯಲಿದೆ. ಪ್ರಾಕೃತಿಕ ದೋಷವಿದೆ ಎಂದು ಹೇಳಿದ್ದು ಇದೀಗ ಸತ್ಯವಾಗಿದೆ. ಅಂದ ಹಾಗೇ ಆಕಾಶದಿಂದ ಬರೋ ಮಳೆಯಿಂದ ಭಾರೀ ಅಪಘಾತ ಕಾದಿದೆ ಎಂದು ತಮ್ಮ ಭವಿಷ್ಯದ ನುಡಿಗೆ ಸಮಜಾಯಿಸಿ ನೀಡುತ್ತ, ಮತ್ತೊಂದು ಭವಿಷ್ಯ ನುಡಿಯುವ ಮೂಲಕ ಜನರಲ್ಲಿ ಗೊಂದಲ ಮೂಡಿಸಿದ್ದಾರೆ.
Kodimata Sri ಹೇಳಿಕೆ: ಆಕಾಶ ತತ್ವದಿಂದ ರಾಜನಿಗೆ ಅಪಾಯ!
ಪಂಚಭೂತಗಳಿಂದ ಜಗತ್ತಿಗೆ ನಾನಾ ರೀತಿಯ ಕಷ್ಟಗಳು ಎದುರಾಗಲಿದೆ. ಮಳೆ ಹೆಚ್ಚಾಗಲಿದ್ದು, ಭೂಮಿ ಬಿರುಕು ಬೀರುತ್ತೆ. ಗುಡ್ಡ ಗಾಡು ಪ್ರದೇಶಗಳು ಪ್ರವಾಹದಿಂದ ಕೊಚ್ಚಿ ಹೋಗುತ್ತದೆ. ಜಗತ್ತಿನಾದ್ಯಂತ ಅನೇಕ ದೇಶಗಳು ಮುಳುಗಲಿದೆ. ಇದೇ ರೀತಿ ಅನೇಕ ಅವಘಡಗಳು ಸಂಭವಿಸಲಿವೆ ಎಂದು ಕೋಡಿಮಠ ಶ್ರೀ (Kodimata Sri) ನುಡಿದಿದ್ದಾರೆ.
ಈ ಹಿಂದೆ ನುಡಿದ ಭವಿಷ್ಯವನ್ನು ಜುಲೈಯಲ್ಲಿ ಸಮರ್ಥಿಸಿಕೊಂಡ ಕೋಡಿಮಠದ ಶ್ರೀಗಳು (Kodimata Sri)
ಪ್ರಕೃತಿ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಹಾಗೆ ನುಡಿದ ಭವಿಷ್ಯವನ್ನು ಜುಲೈ ತಿಂಗಳಲ್ಲಿ ಸಮರ್ಥಿಸಿಕೊಂಡಿದ್ದರು. ರಾಜ್ಯದ ವಿವಿಧೆಡೆ ಉಂಟಾದ ಪ್ರವಾಹ ಹಾಗೂ ಅದರಿಂದ ಹಸಿವು, ಬಳಲಿಕೆ ಹೀಗೆ ನಾನಾ ರೀತಿಯಿಂದ ಅಡಚಣೆಗಳು ಉಂಟಾಗಿದ್ದವು. ಇದರೊಂದಿಗೆ ಕೇರಳದಲ್ಲಿ ಉಂಟಾದ ದುರಂತ ಕೂಡ ತಾವು ನುಡಿದ ಭವಿಷ್ಯದ ಹಿನ್ನೆಲೆಯೇ ಎಂದು ಅದನ್ನು ಸಮರ್ಥಿಸಿಕೊಳ್ಳುತ್ತ, ತಮ್ಮ ಭವಿಷ್ಯ ನಿಜವಾಗಿದೆ ಎಂದು ತಿಳಿಸಿದರು.