ಯುಗಾದಿ (Ugadi) ಹಬ್ಬ ಅಂದ್ರೆ ಹೊಸತನದ ಹುರುಪು. ಎಣ್ಣೆ ಸ್ನಾನ , ಹೊಸ ಉಡುಗೆ ತೊಡುವ ಸಂಭ್ರಮ, ಮನೆ ಮನೆಗಳಲ್ಲಿ ಹಸಿರು ತೋರಣಗಳ ಅಲಂಕಾರ ಹೆಚ್ಚಾಗಿದೆ, ಹೊಸ ವರ್ಷದ ಸಡಗರ ಜೋರಾಗಿದೆ. ಹಿಂದೂ ಧರ್ಮದ ಪ್ರತಿ ಹಬ್ಬಕ್ಕೂ ವಿಶೇಷ ಮಹತ್ವವಿದೆ, ಹೊಸ ವರ್ಷದ ಸಂಕೇತವಾದ ಯುಗಾದಿಯನ್ನು ತಾರತಮ್ಯವಿಲ್ಲದೇ ಎಲ್ಲಾ ಹಿಂದೂಗಳೂ ಆಚರಿಸುತ್ತಾರೆ. ಈ ದಿನ ಬೇವು ಬೆಲ್ಲ ಸೇವಿಸಿ ಬೇರೆಯವರಿಗೆ ಹಂಚುವ ವಿಶೇಷ ಸಂಪ್ರದಾಯವಿದೆ. ಯುಗಾದಿಯಲ್ಲಿ ಚಂದ್ರಮಾನ ಹಾಗೂ ಸೌರಮಾನ ಯುಗಾದಿ ಎಂಬ ಎರಡು ವಿಧಗಳಿವೆ. ಚಂದ್ರಮಾನ ಯುಗಾದಿ ಹಾಗೂ ಸೌರ ಮಾನ ಯುಗಾದಿ.
Ugadi ಹಬ್ಬದಿನ ಯಾವ ದೇವರನ್ನು ಪೂಜಿಸಲಾಗುತ್ತದೆ:
ಬ್ರಹ್ಮ ಈ ದಿನದಂದು ಇಡೀ ಜಗತ್ತನ್ನೇ ಸೃಷ್ಟಿಸಿದ ಎಂಬ ನಂಬಿಕೆಯಿದೆ. ಬ್ರಹ್ಮ ಹಾಗೂ ವಿಷ್ಣುವನ್ನು ಈ ದಿನ ಪೂಜಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳು ಮತ್ತು ಪುರಾಣಗಳ ಪ್ರಕಾರ, ಯುಗಾದಿ ದಿನದಂದು ಬ್ರಹ್ಮ ದೇವರು ಬ್ರಹ್ಮಾಂಡವನ್ನು ಸೃಷ್ಟಿಸಲು ಪ್ರಾರಂಭಿಸಿ, ಅದಾದ ಬಳಿಕ ಬ್ರಹ್ಮನು ಸಮಯ ತಿಳಿಯಲು ದಿನಗಳನ್ನು ಸೃಷ್ಟಿಸಿದನು. ಆದ್ದರಿಂದ, ಯುಗಾದಿಯ ದಿನವನ್ನು ಬ್ರಹ್ಮಾಂಡದ ಸೃಷ್ಟಿ ಪ್ರಕ್ರಿಯೆ ಪ್ರಾರಂಭವಾದ ದಿನ ಬ್ರಹ್ಮ ದೇವರನ್ನು ಪೂಜಿಸಲಾಗುತ್ತೆ.
Ugadi ಯ ಇತಿಹಾಸ ವೇನು?
ಹಿಂದೂ ಪುರಾಣಗಳ ಪ್ರಕಾರ, ಬ್ರಹ್ಮ ದೇವರು ಯುಗಾದಿಯಂದು ಬ್ರಹ್ಮಾಂಡದ ಸೃಷ್ಟಿಯನ್ನು ಪ್ರಾರಂಭಿಸಿದನು ಎನ್ನುವ ಉಲ್ಲೇಖವಿದೆ. ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಆಚರಿಸುವ ಒಂಬತ್ತು ದಿನಗಳ ಉತ್ಸವದ ಮೊದಲ ದಿನ, ಈ ದಿನದಂದು ಹೆಚ್ಚಿನ ದೇವತೆಗಳನ್ನು ಪೂಜಿಸಲಾಗುತ್ತದೆ. ಏಕೆಂದರೆ ನಾವು ಇಷ್ಟರ್ಥಗಳನ್ನು ಗಣೇಶ, ಮಾತಾ ಪಾರ್ವತಿ, ಭಗವಾನ್ ವಿಷ್ಣು, ಭಗವಾನ್ ರಾಮ ಮತ್ತು ಲಕ್ಷ್ಮಿ ದೇವಿಗೆ ಸಲ್ಲಿಸುತ್ತೇವೆ.
ಬೇವು ಬೆಲ್ಲ ಹಂಚಿಕೆಯ ಯುಗಾದಿ ಹಬ್ಬ:
ಬೇವು ಬೆಲ್ಲ ಎನ್ನುವುದು ಮೂಲತಃ ಕಹಿ ಹಾಗೂ ಸಿಹಿಯ ರುಚಿಯನ್ನು ಸೂಚಿಸುತ್ತದೆ, ಬೆಲ್ಲವನ್ನು ಎಲ್ಲರೂ ಸುಖಕರ, ಕಹಿ ಬೇವನ್ನು ದುಃಖಕರ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸುಖ ದುಃಖ ವನ್ನು ನಾವು ಸರಿಯಾಗಿ ತೆಗೆದುಕೊಳ್ಳಬೇಕು, ಎಂಬುದು ಇದರ ಅರ್ಥ