Karnataka Times
Trending Stories, Viral News, Gossips & Everything in Kannada

Electric Vehicle: ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವವರಿಗೆ ಮೆಗಾ ಗಿಫ್ಟ್! ಇನ್ಮೇಲೆ ಚಿಂತೆ ಬಿಡಿ

Advertisement

ಇತ್ತೀಚಿಗೆ ಪೆಟ್ರೋಲ್, ಡಿಸೇಲ್ ಬೆಲೆ ಭಾರೀ ಹೆಚ್ಚಾಗಿದೆ, ಆದರೂ ವಾಹನಗಳ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನಕ್ಕೇರಿರುವುದು ನಮಗೆಲ್ಲಾ ತಿಳಿದೇ ಇದೆ, ವಿಶ್ವಮಟ್ಟದಲ್ಲಿ ಎಲೆಕ್ಟ್ರಿಕ್‌ ವಾಹನಗಳ (Electric vehicle) ಬಳಕೆಗೆ ಹೆಚ್ಚು ಒತ್ತಡವಿದ್ದರೂ ಕೂಡ ಭಾರತದಲ್ಲಿ ಸಾಂಪ್ರದಾಯಿಕ ಇಂಧನ ವಾಹನಗಳ ಬಳಕೆಗೆ ಹೆಚ್ಚು ಬೇಡಿಕೆ ಇದೆ. ಎಲೆಕ್ಟ್ರಾನಿಕ್ ವಾಹನಗಳನ್ನು ಖರೀದಿ ಮಾಡುವ ಗ್ರಾಹಕರ ಸಂಖ್ಯೆಯು ಹೆಚ್ಚಾಗಿದೆ, ಹಲವು ಕಡೆಗಳಲ್ಲಿ‌ ಬ್ಯಾಟರಿಚಾಲಿತ ವಾಹನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಬ್ಯಾಟರಿ ಚಾಲಿತ ವಾಹನಗಳ ಖರೀದಿಯಿಂದ ನಿಮಗೆ ಹಣ ಮತ್ತು ಇಂಧನ ಉಳಿತಾಯ ಗಳೆರಡೂ ಆಗುತ್ತದೆ.

ಸಾರ್ವಜನಿಕ ವೇಗದ Charging Station ಸ್ಥಾಪನೆ:

ಇಲೆಕ್ಟ್ರಾನಿಕ್ (Electronic) ವಾಹನ ಗಳ ಬಳಕೆ ಹೆಚ್ಚಾದಂತೆ ಚಾರ್ಚಿಂಗ್ ವ್ಯವಸ್ಥೆ ಯ ಪರಿಹಾರ ಕೂಡ ಒದಗಿಸಿದೆ, ದೇಶಾದ್ಯಂತ 7432 ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು (Fast Charging Stations) ಸ್ಥಾಪಿಸಲು ನಿರ್ಧಾರ ಮಾಡಿದೆ, ಈ ಮೂಲಕ‌ 800 ಕೋಟಿ ರೂಪಾಯಿಗಳನ್ನು ಮಂಜೂರು ಕೂಡ ಮಾಡಿದೆ. ಒಂದೆರಡು ವರ್ಷದ ಹಿಂದೆ ಮೂರ್ನಾಲ್ಕು ಇದ್ದ ವಿದ್ಯುತ್‌ಚಾಲಿತ ದ್ವಿಚಕ್ರವಾಹನ ತಯಾರಕ ಕಂಪನಿಗಳು ಈಗ ಹತ್ತರ ಗಡಿ ದಾಟಿ ಮತ್ತಷ್ಟು ಬಳಕೆ ಮಾಡುವತ್ತ ದಾಪುಗಾಲು ಇಟ್ಟಿದೆ.

Fame Scheme Project:

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಖರೀದಿಗೆ (Production and Purchase) ಉತ್ತೇಜನ ಉದ್ದೇಶದಿಂದ ಆದಾಯ ತೆರಿಗೆ ನಿಯಮದ ಸೆಕ್ಷನ್ ಮೊತ್ತಕ್ಕೆ ತೆರಿಗೆ ವಿನಾಯ್ತಿಯನ್ನು ಸರ್ಕಾರ ಘೋಷಿಸಿದೆ, ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಫೇಮ್ ಸ್ಕೀಮ್ (Fame Scheme) ಅನ್ನು ತಂದಿದೆ. ಫೇಮ್ ಎಂದರೆ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ತ್ವರಿತ ತಯಾರಿಕೆ ಮತ್ತು ಅಳವಡಿಕೆಯ ಯೋಜನೆಯಾಗಿದೆ. ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ತಯಾರಿಕಾ ಸಂಸ್ಥೆಯ ನ್ನು ರೂಪಿಸಲು ತಯಾರಿ ನಡೆಸಿದೆ.

Charging System:

ರಾಜ್ಯದಾದ್ಯಂತ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಚಾರ್ಜಿಂಗ್ ಸ್ಟೇಷನ್‌ (Charging Station) ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ, ಹೆದ್ದಾರಿಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಈಗಾಗಲೇ ಇಂಧನ ಇಲಾಖೆಯು ಸಿದ್ಧತೆ ನಡೆಸಿದೆ, ಬಳಕೆದಾರಿಗೆ ಸುಲಭವಾಗುವ ಸ್ಥಳಗಳಲ್ಲಿ ಹೊಸ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳ ಸೇರ್ಪಡೆಗೆ ಸಿದ್ದತೆ ನಡೆಸಿದೆ. ಈ ನಿಟ್ಟಿನಲ್ಲಿ ಇಲೆಕ್ಟ್ರಾನಿಕ್ ವಾಹನ ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ ಎನ್ನಬಹುದು.

Leave A Reply

Your email address will not be published.