SUV Car: ಹುಂಡೈ ಕ್ರೇಟಾ ಬದಲು ಈ SUV ಖರೀದಿ ಮಾಡಲೂ ಮುಗಿಬೀಳುತ್ತಿದ್ದಾರೆ ಜನ, ಬೆಲೆ ಕೂಡ ಕಡಿಮೆ
ದೇಶದಲ್ಲಿ ಎಸ್ ಯು ವಿ (SUV) ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ರಾಹಕರು ತಮ್ಮ ಮೊದಲ ಆಯ್ಕೆಯಾಗಿ ಮಧ್ಯಮ ಗಾತ್ರದ ಎಸ್ಯುವಿಯನ್ನು ಆಯ್ದುಕೊಂಡರೆ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಫ್ಯಾಮಿಲಿ ಕಾರುಗಳನ್ನು ಕೂಡ ಕಂಪನಿ ಉತ್ಪಾದಿಸುತ್ತಿದೆ. ಹೆಚ್ಚಾಗಿ ಫ್ಯಾಮಿಲಿ ವಿಭಾಗದಲ್ಲಿ ಕ್ರೇಟಾ ಕಾರು ಹೆಸರುವಾಸಿಯಾಗಿದೆ ಆದರೆ ಇದರ ವೆಚ್ಚ ತುಸು ದುಬಾರಿ. ಹಾಗಾಗಿ ಮಧ್ಯಮ ವರ್ಗದವರಿಗೆ ಈ ಕಾರ್ಯ ಖರೀದಿ ಮಾಡುವುದು ಕಷ್ಟದ ವಿಚಾರ. ಆದರೆ ಮಧ್ಯಮ ವರ್ಗದವರಿಗೆ ಕ್ರೆಟಾದಂತೆಯೇ ಅತ್ಯುತ್ತಮ ವೈಶಿಷ್ಟ್ಯತೆಯನ್ನು ಹೊಂದಿರುವ ಮಾರುತಿ ಸುಜುಕಿ ವರವಾಗಿದೆ.
Maruti Brezza ಫೀಚರ್ಸ್ ಗೆ ಗ್ರಾಹಕ ಫಿದಾ:
ಭಾರತದಲ್ಲಿ ಕಾಂಪ್ಯಾಕ್ಟ್ ಎಸ್ ಯು ವಿ (SUV) ಆಗಿರುವ ಬ್ರೆಝಾ ಕೂಡ ಹೆಚ್ಚು ಮಾರಾಟವಾಗುತ್ತಿದೆ. ನೆಕ್ಸಾನ್, ವೆನ್ಯು, ಕ್ರೆಟಾ ಈ ಕಾರುಗಳನ್ನ ಹಿಂದಿಕ್ಕಿ ಬ್ರೆಝಾ ಮಾರಾಟದಲ್ಲಿ ಮುಂದೆ ಸಾಗಿದೆ. ದುಬಾರಿ ಕ್ರೆಟಾದಲ್ಲಿ ಇರುವಂತೆ ಪವರ್ ಫುಲ್ ಎಂಜಿನ್ ಅತ್ಯುತ್ತಮ ಲುಕ್ ಈ ಕಾರಿನಲ್ಲಿಯೂ ಕಾಣಬಹುದು. ಹೆಚ್ಚು ಮೈಲೇಜ್ ನೀಡಬಲ್ಲ ಈ ಕಾರಿನ ಬೆಲೆ (ಎಕ್ಸ್ ಶೋರೂಮ್ ಆರಂಭಿಕ ಬೆಲೆ) 8.19 ಲಕ್ಷ ರೂಪಾಯಿನಿಂದ 14.04 ಲಕ್ಷ ರೂಪಾಯಿಗಳು.
Powerful Engine:
ಹೆಚ್ಚು ಕಾರ್ಯಕ್ಷಮತೆ ಹೊಂದಿರುವ ಎಂಜಿನ್ (Engine) ಮಾರುತಿ ಬ್ರೆಝಾದಲ್ಲಿ ಕಾಣಬಹುದು. 1.5 ಲೀಟರ್ ಕೆ12ಸಿ ಪೆಟ್ರೋಲ್ ಇಂಜಿನ್ ನಿಂದ ನಿಯಂತಿಸಲ್ಪಟ್ಟಿದ್ದು 103 ಬಿ ಎಚ್ ಪಿ ಪವರ್ ಹಾಗೂ 138 ಎಂಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮೈಲೇಜ್ ವಿಚಾರಕ್ಕೆ ಬಂದರೆ ಪೆಟ್ರೋಲ್ ಎಂಜಿನ್ ಗಿಂತಲೂ ಸಿ ಎನ್ ಜಿ ರೂಪಾಂತರ ಹೆಚ್ಚು ಮೈಲೇಜ್ ನೀಡುತ್ತದೆ. 18ರಿಂದ 22 ಕೆ ಎಮ್ ಪಿ ಎಲ್ ಮೈಲೇಜ್ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.
ಆಂತರಿಕ ವೈಶಿಷ್ಟ್ಯತೆ:
ಮಾರುತಿ ಬ್ರೆಝಾದಲ್ಲಿ (Maruti Brezza) ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು ಐದು ಸೀಟರ್ ಕಾರ್ ಆಗಿದ್ದು, ಎಲೆಕ್ಟ್ರಿಕ್ ಸನ್ ರೂಫ್, ಪ್ಯಾಡಲ್ ಶಿಫ್ಟರ್, ಹೆಡ್ ಆಫ್ ಡಿಸ್ಪ್ಲೇ, 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಫ್ಲ್ಯಾಟ್ ಬಾಟಮ್ ಸ್ಟೀರಿಂಗ್ ಮೊದಲಾದ ವೈಶಿಷ್ಟ್ಯತೆಗಳನ್ನು ಕಾಣಬಹುದು. ಇನ್ನು ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬ್ಯಾಗ್ ಗಳು ಮತ್ತು ಇ ಎಸ್ ಪಿ ಯನ್ನು ಕೂಡ ಅಳವಡಿಸಲಾಗಿದೆ.