7 Seater Car: ಅತ್ಯುತ್ತಮ ಸ್ಪೇಸ್ ಜೊತೆ ಬಿಡುಗಡೆಯಾಯ್ತು 7-ಸೀಟರ್ ಆಸನದ ಈ ಕಾರು ಬೆಲೆ ಮಾತ್ರ ಕಡಿಮೆ

Advertisement
ಹುಂಡೈ (Hyundai) ತನ್ನ ಗ್ರಾಹಕರಿಗೆ ಅನುಕೂಲವಾಗುವಂಥ ಫ್ಯಾಮಿಲಿ ಕಾರ್ (Family car) ಆಗಿರುವ, ಎಸ್ಯುವಿ ಸ್ಟಾರ್ ಗೇಜರ್ ಬಿಡುಗಡೆ ಮಾಡಿದೆ. ಆರು ಹಾಗೂ ಏಳು ಆಸನಗಳ ಆಯ್ಕೆಯನ್ನು ನೀವು ಈ ಕಾರಿನಲ್ಲಿ ಪಡೆಯಬಹುದು. ಈ ಕಾರುನ್ನು ಎಸ್ ಯು ಬಿ ಎನ್ನುವುದಕ್ಕಿಂತ ಎಂಪಿ ವಿ ಎನ್ನಬಹುದು ಯಾಕೆಂದರೆ ಹೆಚ್ಚು ಸ್ಪೇಸ್ ಹೊಂದಿರುವ ಈ ಕಾರು ದೂರದ ಫ್ಯಾಮಿಲಿ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಹ ಕಾರು. ಜಾಗತಿಕ ಮಾರುಕಟ್ಟೆಯಲ್ಲಿ ಹುಂಡೈ ಸ್ಟಾರ್ ಗೇಜರ್ ಕಾರು ಮೋಡಿ ಮಾಡಿದೆ. ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ಈ ಕಾರಿನ ಬೆಲೆ 18.50 ಲಕ್ಷ ರೂಪಾಯಿಗಳು.
ಸ್ಟಾರ್ ಗೇಜರ್ ನಲ್ಲೇನಿದೆ ವೈಶಿಷ್ಟ್ಯತೆ?
ಅಗ್ಗದ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯತೆಗಳ ಜೊತೆಗೆ ಏಳು ಸೀಟರ್ (7 Seater) ಹೆಚ್ಚು ಸ್ಪೇಸ್ ಇರುವ ಕಾರನ್ನು ಹುಂಡೈ ಬಿಡುಗಡೆ ಮಾಡಿದೆ. ಇದರ ವೈಶಿಷ್ಟ್ಯತೆಗಳು ಕೂಡ ವಿಶೇಷವಾಗಿದೆ. ಬೇಸ್ ಟ್ರೆಂಡ್ ಹ್ಯಾಲೋಜನ್ ಹೆಡ್ ಲ್ಯಾಂಪ್, ಎಲ್ಇಡಿ ಟೈಲ್ ಲೈಟ್ ಎಲೆಕ್ಟ್ರಿಕ್ ಫೋಲ್ಡಿಂಗ್ ಸೈಡ್ ಮಿರರ್ ಗಳು (Electric Folding Side Mirrors) 16 ಇಂಚಿನ ಅಲಾಯಿ ವೀಲ್ ಗಳು ಕಾರಿನ ಹೊರಭಾಗದಲ್ಲಿ ಸುರಕ್ಷತೆಯನ್ನು ನೀಡಿದರೆ, ಬ್ಲೂಟೂತ್ ಇರುವ ಹೆಡ್ ಯೂನಿಟ್ ನಾಲ್ಕು ಸ್ಪೀಕರ್ ಗಳು ಮಾನ್ಯುಯಲ್ ಎಸಿ ಮೊದಲಾದವು ಕಾರಿನ ಒಳಭಾಗದಲ್ಲಿ ವಿಶೇಷವಾಗಿ ಅಳವಡಿಸಲಾಗಿದೆ. ಇನ್ನು ಸುರಕ್ಷತೆಯ ದೃಷ್ಟಿಯಿಂದ ನೋಡುವುದಾದರೆ ಹಿಲ್ ಸ್ಟಾರ್ಟ್ ಅಸಿಸ್ಟ್, ಬ್ರೇಕ್ ಅಸಿಸ್ಟ್, ಎರಡು ಏರ್ ಬ್ಯಾಗ್ ಗಳು, ಸ್ಪೀಡ್ ಸೆನ್ಸಿಂಗ್, ಆಟೋ ಲಾಕ್ ಫಿಕ್ಸ್ ಚೈಲ್ಡ್ ಶೀಟ್ ಆಂಕರ್ ಗಳು ಮೊದಲಾದವುಗಳನ್ನು ಅಳವಡಿಸಲಾಗಿದ್ದು ಪಕ್ಕ ಫ್ಯಾಮಿಲಿ ಕಾರ್ ಇದಾಗಿದೆ.
ಇನ್ನಷ್ಟು Technology:
ಸ್ಟಾರ್ ಗೇಜರ್ (Star Gazer) ಕಾರಿನಲ್ಲಿ ರಿಮೋಟ್ ನೊಂದಿಗೆ ಕಾರ್ಯನಿರ್ವಹಿಸಬಲ್ಲ ಕೀ ಲೆಸ್ ಇಂಜಿನ್ ಸ್ಟಾರ್ಟ್, 4.2 ಇಂಚಿನ ಮೇಲ್ಚಾವಣಿ ಟಿ ಎಫ್ ಟಿ ಎಲ್ ಸಿ ಡಿ ಮಲ್ಟಿ ಇಂಫೋ ಡಿಸ್ಪ್ಲೇ ನೀಡಲಾಗಿದೆ. ಅಷ್ಟೇ ಅಲ್ಲದೆ ಎರಡನೇ ಸಾಲಿನ ಸೀಟರ್ ನಲ್ಲಿ ಆರ್ಮ್ ರೆಸ್ಟ್ ಹಾಗೂ ಟ್ರೇ ಟೇಬಲ್ ಕೂಡ ಅಳವಡಿಸಲಾಗಿದೆ. ಈ ಎಲ್ಲಾ ವೈಶಿಷ್ಟ್ಯತೆಗಳನ್ನು ಹೊಂದಿರುವ ಹುಂಡೈ ಸ್ಟಾರ್ ಗೇರ್ ಕಾರು ಪ್ರಯಾಣದ ಮೋಜನ್ನು ಇನ್ನಷ್ಟು ಹೆಚ್ಚಿಸುತ್ತದೆ.