Karnataka Times
Trending Stories, Viral News, Gossips & Everything in Kannada

Electric vehicle: ಟಾಟಾ ನ್ಯಾನೊಗಿಂತ ಕಡಿಮೆ ಬೆಲೆಯ ಕಾರು ಬಿಡುಗಡೆ! ಮುಗಿಬಿದ್ದ ಜನ ಬೆಲೆ ನೋಡಿ

Advertisement

ಒಂದು ಉತ್ತಮ ಗುಣಮಟ್ಟದ ಹೆಚ್ಚು ಕಾರ್ಯಕ್ಷಮತೆ ಹೊಂದಿರುವಂತಹ ಸುಲಭವಾಗಿ ಓಡಿಸಲು ಅನುಕೂಲವಾಗುವ ದ್ವಿಚಕ್ರ ವಾಹನವನ್ನು ಖರೀದಿ ಮಾಡಬೇಕು ಅಂದ್ರೆ ಕನಿಷ್ಠ ಒಂದು ಲಕ್ಷ ರೂಪಾಯಿಗಳಾದರೂ ಬೇಕು. ಆದರೆ ಇದಕ್ಕಿಂತ ಕಡಿಮೆ ಬೆಲೆಗೆ ಒಂದು ಕಾರನ್ನೇ ಖರೀದಿ ಮಾಡಬಹುದು ಅನ್ನೋದು ನಿಮಗೆ ಗೊತ್ತಾ? ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನ್ಯಾನೋ(Tata Nano) ಕಾರು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಇದೀಗ ಅದಕ್ಕಿಂತ ಚಿಕ್ಕದಾಗಿರುವ ಅದಕ್ಕಿಂತ ಸೂಪರ್ ಆಗಿರುವ ಕಾರು ಸೋಶೀಯಲ್ ಮೀಡಿಯಾದಲ್ಲಿ ಸುದ್ದಿ ಮಾಡುತ್ತಿದೆ. ಇದರ ಬೆಲೆ ಕೇವಲ ಬೈಕ್ ಗಿಂತ ಕಡಿಮೆ!

ಮಾರುಕಟ್ಟೆಗೆ ಬರಲಿದ್ಯಾ ನೂತನ ಎಲೆಕ್ಟ್ರಿಕ್ ಕಾರು!

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದೆ ಇದ್ದರೂ ಚೀನಾ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಸೇಲ್ ಆಗುತ್ತಿರುವ ಈ ಕಾರು ಜನರಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ. ಚೀನಾದ ಪ್ರಮುಖ ಈ ಕಾಮರ್ಸ್ ಪ್ಲಾಟ್ ಫಾರ್ಮ್, ಆಲಿಬಾಬಾ “ಎಲೆಕ್ಟ್ರಿಕ್ ವೆಹಿಕಲ್ ಆಫ್ ದಿ ವೀಕ್” (electric vehicle of the week) ಎನ್ನುವ ಬೃಹತ್ ಮಾರಾಟ ಮೇಳ ಒಂದನ್ನು ಆಯೋಜನೆ ಮಾಡಿದ್ದು ಅತ್ಯಂತ ಕಡಿಮೆ ಬೆಲೆಯ ಕಾರುಗಳನ್ನು ಇಲ್ಲಿ ಸೆಲ್ ಮಾಡಲಾಗಿದೆ.

ಎಲೆಕ್ಟ್ರಿಕ್ ಕಾರಿನ ವೈಶಿಷ್ಟತೆ:

ಈ ಕಾರಿನ ಮುಂಭಾಗದಲ್ಲಿ ಹುಲಿ ಮುಖ ದಂತಹ ವಿನ್ಯಾಸ ರಚನೆ ಮಾಡಲಾಗಿದ್ದು ಗ್ರಿಲ್ ಸ್ಮೇಲಿ ಲುಕ್, ಹೆಡ್ ಲೈಟ್ಸ್ ನ್ನು ಮುಂಭಾಗದಲ್ಲಿ ಕಾಣಬಹುದು. ಈ ಕಾರನ್ನು ಆಗಾಗ ಚಾರ್ಜ್ ಮಾಡಬೇಕಾಗುತ್ತದೆ. ಕ್ಯಾಬಿನ್ ಒಳಭಾಗದಲ್ಲಿ ಎಸಿ ವೆಂಟ್ಸ್, ಉತ್ತಮ ವೀಲ್, ಮಧ್ಯಮ ಗಾತ್ರದ ಇಂಫೋಟೈನ್ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ.
ಈ ಎಲೆಕ್ಟ್ರಿಕ್ ಕಾರು 35 kw ಮೋಟಾರ್ ಬಳಸಲಾಗಿರುವ ಕಾರಾಗಿದ್ದು 47 ಹೆಚ್ ಪಿ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಅಲಿ ಬಾಬಾ ನೀಡಿರುವ ಮಾಹಿತಿಯ ಪ್ರಕಾರ ಇದು 152 ಕಿಲೋಮೀಟರ್ ರೇಂಜ್ ಕೊಡಬಹುದು. ಅಲ್ಲದೆ ಟಾಪ್ ಸ್ಪೀಡ್ ನಲ್ಲಿ 120 ಕಿಲೋಮೀಟರ್/ ಗಂಟೆ ಸ್ಪೀಡ್ ನೀಡಬಹುದು. ಬೆಂಕಿ ಪೆಟ್ಟಿಗೆ ಅಂತಹ ಪುಟಾಣಿ ಕಾರ್ ಇದಾಗಿದ್ದು, ನಗರ ಪ್ರದೇಶದ ಟ್ರಾಫಿಕ್ ದಾರಿಯಲ್ಲಿ ಓಡಿಸಲು ಹೆಚ್ಚು ಸೂಕ್ತವಾಗಿದೆ. ಜೊತೆಗೆ ಪಾರ್ಕಿಂಗ್ ಕೂಡ ಹೆಚ್ಚು ಸ್ಥಳಾವಕಾಶ ಬೇಕಾಗದೆ ಇರುವುದರಿಂದ ಬೈಕ್ ಪಾರ್ಕ್ ಮಾಡಿದ ಹಾಗೆ ಅತಿ ಕಡಿಮೆ ಜಾಗದಲ್ಲಿ ಕಾರ್ ಪಾರ್ಕ್ ಮಾಡಬಹುದು. ಆದರೆ ಈ ಕಾರು ನಗರ ಪ್ರದೇಶದ ಒಳಭಾಗದಲ್ಲಿ ಬಳಸಲು ಯೋಗ್ಯವಾಗಿದೆಯೇ ಹೊರತು ದೂರದ ಪ್ರಯಾಣಕ್ಕೆ ಅಲ್ಲ.

ಕೇವಲ 99 ಸಾವಿರ ರೂಪಾಯಿಗಳು:

ನಮ್ಮ ದೇಶದಲ್ಲಿ ಒಂದು ಸ್ಪೋರ್ಟಿ ಬೈಕ್ ಖರೀದಿ ಮಾಡಲು ಕೂಡ ಒಂದು ಲಕ್ಷ ರೂಪಾಯಿಗಳು ಸಾಲುವುದಿಲ್ಲ ಅಂತದ್ರಲ್ಲಿ ಚೀನಾ ಒಂದು ಕಾರನ್ನು 1,199 ಡಾಲರ್ ಅಂದರೆ 99,000ರೂ. ಗಳಿಗೆ ನೂತನ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ.

ಅತಿ ಕಡಿಮೆ ವೆಚ್ಚದ ಕಾರು ಇದಾಗಿರುವುದರಿಂದ ಇದರಲ್ಲಿ ಹೆಚ್ಚಿನ ಫೀಚರ್ಸ್ ಇಲ್ಲ ಅಷ್ಟೇ ಅಲ್ಲದೆ ಆಕರ್ಷಕ ಡಿಸೈನ್ ಹಾಗೂ ಹೆಚ್ಚುವರಿ ವೈಶಿಷ್ಟ್ಯತೆಗಳನ್ನು ಕೂಡ ಅಳವಡಿಸಲಾಗಿಲ್ಲ. ಚೀನಾದ ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಕೂಡ ಈ ಕಾರಿನಲ್ಲಿ ಅಳವಡಿಸಲಾಗಿದೆಯೇ ಇಲ್ಲವೋ ಎನ್ನುವ ಬಗ್ಗೆಯೂ ಮಾಹಿತಿ ಇಲ್ಲ. ಈ ಕಾರು ಭಾರತೀಯ ಮಾರುಕಟ್ಟೆಗೆ ತರಲು ಕೂಡ ಸಾಧ್ಯವಿಲ್ಲ. ಮೊದಲನೇದಾಗಿ ಕಡಿಮೆ ಬೆಲೆಯ ಕಾರ್ ಆಗಿರುವುದರಿಂದ ಭಾರತಕ್ಕೆ ಅದನ್ನು ತಂದು ಮಾರಾಟ ಮಾಡುವಾಗ ಅದರ ವೆಚ್ಚ ಅಧಿಕವಾಗುತ್ತದೆ ಜೊತೆಗೆ ಆಕರ್ಷಕವಾದ ಲುಕ್ ಇರದೆ ಇರುವ ಕಾರಣ ಜನರು ಈ ಕಾರನ್ನು ಹೆಚ್ಚು ಇಷ್ಟಪಡದೆ ಇರಬಹುದು. ಆದಾಗ್ಯೂ ಬೆಂಗಳೂರಿನಂತಹ ನಗರ ಭಾಗದಲ್ಲಿ ಇರುವ ಟ್ರಾಫಿಕ್ ಹಾಗೂ ವಾಹನಗಳ ನೋಡಿದರೆ ಇಂಥ ಒಂದು ಪುಟಾಣಿ ಕಾರು ಭಾರತೀಯ ಮಾರುಕಟ್ಟೆಗೂ ಬಂದರೆ ಒಳ್ಳೆಯದು ಎನಿಸುತ್ತದೆ.

Leave A Reply

Your email address will not be published.