Karnataka Times
Trending Stories, Viral News, Gossips & Everything in Kannada

Electric Car: 40 ನಿಮಿಷದಲ್ಲಿ ಚಾರ್ಜ ಆಗುವ ಹಾಗೂ 233Km ಮೈಲೇಜ್ ಕೊಡುವ ಕಾರು ಬಿಡುಗಡೆ, ಬೆಲೆ ಕಡಿಮೆ

ಇತ್ತೀಚಿನ ವರ್ಷಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಏರುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ಗಳ ಬೆಲೆಯ ಜೊತೆಗೆ ಏರುತ್ತಿರುವ ಪರಿಸರ ಮಾಲಿನ್ಯದ ಕಾರಣದಿಂದಾಗಿ ಕೂಡ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹಾಗೂ ಖರೀದಿ ಜಾಸ್ತಿ ಆಗುತ್ತಿದೆ. ಇದಕ್ಕಾಗಿ ಪ್ರತಿಯೊಂದು ವಾಹನ ನಿರ್ಮಾಣ ಸಂಸ್ಥೆಗಳು ಕೂಡ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಅದರಲ್ಲೂ ವಿಶೇಷವಾಗಿ Kia ಸಂಸ್ಥೆ Ray Electric Car ಅನ್ನು ಇತ್ತೀಚಿಗಷ್ಟೇ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

Advertisement

Kia Ray ಎಲೆಕ್ಟ್ರಿಕ್ ಕಾರ್ ಡಿಸೈನ್ ನೋಡೋದಾದ್ರೆ ತುಂಬಾನೇ ಸ್ಟೈಲಿಶ್ ಆಗಿ ಮೂಡಿ ಬಂದಿದ್ದು ನೋಡೋದಕ್ಕೆ ಚಿಕ್ಕದಾಗಿ ಕಾಣಿಸಿಕೊಂಡರೂ ಕೂಡ ತುಂಬಾನೇ ಕಂಫರ್ಟ್ ಫೀಲಿಂಗ್ ನೀಡುತ್ತದೆ. ಇನ್ನು ಇದರಲ್ಲಿ ನೀವು ಇನ್ಸ್ಟ್ರುಮೆಂಟಲ್ ಕನ್ಸೋಲ್ ಶಿಫ್ಟ್ ಲಿವರ್ ಪ್ಲೇಟ್ ಫೋಲ್ಡಿಂಗ್ ನಂತಹ ಸಾಕಷ್ಟು ಫೀಚರ್ಸ್ ಗಳನ್ನು ನೀವು ಕಾಣಬಹುದಾಗಿದ್ದು ಈ ಕಾರು ನಿಮಗೆ ಆರು ಬಣ್ಣಗಳಲ್ಲಿ ದೊರಕಲಿದೆ. ನೋಡೋದಕ್ಕೆ ಚಿಕ್ಕದಾಗಿದ್ರು ಇದಕ್ಕೆ ಪವರ್ಫುಲ್ ಬ್ಯಾಟರಿ ಹಾಗೂ ಮೋಟರ್ ಅನ್ನು ಅಳವಡಿಸಲಾಗಿದೆ. 33.2kwh ಲಿಥಿಯಂ ಅಯಾನ್ ಬ್ಯಾಟರಿ ಹಾಗೂ 64.3kW ಮೋಟಾರ್ ಅನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ. 86bhp ಪವರ್ ಹಾಗೂ 143nm ಟಾರ್ಕ್ ಅನ್ನು ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಕೂಡ ಇದು ಹೊಂದಿದೆ. Kia Ray Electric Car ಸಿಂಗಲ್ ಚಾರ್ಜ್ ನಲ್ಲಿ 205 kmಗಳ ವರೆಗೂ ಕೂಡ ಹಾಗೂ ನಗರ ಭಾಗಗಳಲ್ಲಿ 233km ವರೆಗೂ ಕೂಡ ಇದು ಲಾಂಗ್ ರೇಂಜ್ ನೀಡುತ್ತದೆ ಎಂಬುದನ್ನು ಕಂಪನಿ ಹೇಳಿಕೊಂಡಿದೆ. ಈ ಕಾರಿನ ಸೆಗ್ಮೆಂಟ್ ನಲ್ಲಿ ಬೇರೆ ಯಾವುದೇ ಕಾರುಗಳು ಕೂಡ ಈ ರೀತಿಯ ಲಾಂಗ್ ರೇಂಜ್ ಅನ್ನು ನೀಡುತ್ತವೆ ಎಂಬುದನ್ನು ಹೇಳಲು ಖಂಡಿತವಾಗಿ ಸಾಧ್ಯವಿಲ್ಲ ಎಂದು ಹೇಳಬಹುದಾಗಿದೆ. ಇದನ್ನು 7 ಕಿಲೋ ವ್ಯಾಟ್ ಚಾರ್ಜರ್ ನಲ್ಲಿ ಚಾರ್ಜ್ ಮಾಡಿದರೆ ಆರು ಗಂಟೆಗಳಲ್ಲಿ ಫುಲ್ ಚಾರ್ಜ್ ಆಗುತ್ತದೆ ಹಾಗೂ 150 ಕಿಲೋ ವ್ಯಾಟ್ ಚಾರ್ಜ್ನಲ್ಲಿ ಚಾರ್ಜ್ ಮಾಡಿದರೆ ಕೇವಲ 40 ನಿಮಿಷಗಳಲ್ಲಿ ಇದರ ಚಾರ್ಜ್ ಫುಲ್ ಆಗುತ್ತೆ. Kia Ray Electric ಕಾರಿನ ಬಗ್ಗೆ ಇಷ್ಟೊಂದು ಮಾಹಿತಿಗಳನ್ನು ತಿಳಿದುಕೊಂಡ ಮೇಲೆ ಖಂಡಿತವಾಗಿ ಇದರ ಬೆಲೆ ಎಷ್ಟು ಎನ್ನುವುದಾಗಿ ತಿಳಿದುಕೊಳ್ಳುವಂತಹ ಕುತೂಹಲ ಖಂಡಿತವಾಗಿ ನಿಮ್ಮಲ್ಲಿ ಇದ್ದೇ ಇರುತ್ತದೆ. ಹಾಗಿದ್ರೆ ಬನ್ನಿ ಕಾರಿನ ಬೆಲೆ ಎಷ್ಟು ಎಂಬುದನ್ನು ತಿಳಿಯೋಣ.

Advertisement

Image Source: Motor Trend

Advertisement

ಮೊದಲು ಇದನ್ನು ಕೊರಿಯ ದೇಶದಲ್ಲಿ ಲಾಂಚ್ ಮಾಡಲಾಗುತ್ತದೆ ಹಾಗೂ ಸೆಪ್ಟೆಂಬರ್ 12 ರಿಂದ ಇದರ ಬುಕಿಂಗ್ ಕೂಡ ಪ್ರಾರಂಭವಾಗಲಿದೆ. ಇನ್ನು ಭಾರತ ದೇಶದಲ್ಲಿ ಈ ಕಾರ್ ಅನ್ನು ಲಾಂಚ್ ಮಾಡುವ ಕುರಿತಂತೆ ಮಾತನಾಡುವುದಾದರೆ, Kia Ray Electric Car ಅನ್ನು 2025 ರಲ್ಲಿ ಲಾಂಚ್ ಮಾಡುವ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು 17.27 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಈ ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಬರುವಂತಹ ಸಾಧ್ಯತೆ ಇದೆ. ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎಲೆಕ್ಟ್ರಿಕ್ ಕಾರುಗಳ ಬೆಲೆ ಸಾಮಾನ್ಯ ಕಾರುಗಳಿಗಿಂತ ಹೆಚ್ಚಾಗಿ ಇರುತ್ತವೆ ನಿಜ ಆದರೆ ಅದಕ್ಕೆ ಖರೀದಿಸಿದ ನಂತರ ವಿದ್ಯುತ್ ಗಾಗಿ ಖರ್ಚು ಮಾಡುವಂತ ಹಣ ಹಾಗೂ ಮೆಂಟೇನೆನ್ಸ್ ಗಾಗಿ ಖರ್ಚು ಮಾಡುವಂತಹ ಹಣ ಸಾಮಾನ್ಯ ಕಾರುಗಳಿಗಿಂತ ಅತ್ಯಂತ ಕಡಿಮೆಯಾಗಿರುತ್ತದೆ ಎಂಬುದನ್ನು ಕೂಡ ನೀವು ಈ ಸಂದರ್ಭದಲ್ಲಿ ಒಪ್ಪಿಕೊಳ್ಳಬೇಕಾಗಿದೆ.

Advertisement

Also Read: Second Hand Vehicle: ಯಾವುದೇ ಸೆಕೆಂಡ್ ಹ್ಯಾಂಡ ವಾಹನವನ್ನು ಖರೀದಿ ಮಾಡುವಾಗ ಈ ಎಲ್ಲಾ ವಿಷಯಗಳ ಬಗ್ಗೆ ಕೊಂಚ ಗಮನ ಹರಿಸಿ!

Leave A Reply

Your email address will not be published.