Electric Scooter: ಓಲಾಗೆ ಟಕ್ಕರ್ ಕೊಡಲು ಬಂತು ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್

Advertisement
ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆ ಹೆಚ್ಚಾಗಿದೆ. ಇಂಧನಗಳು ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯೂ ಹೆಚ್ಚಾಗಿದೆ. ಅದರಲ್ಲಿ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಗಳು ಕೂಡ ಲಭ್ಯವಾಗಿದೆ. ಜಪಾನಿನ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿ ಫೂಜಿಯಾಮ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಹೊಂದಿದ್ದು, ಇದೀಗ ಏಕಕಾಲಕ್ಕೆ 5 ಎಲೆಕ್ಟ್ರಿಕಲ್ ಸ್ಕೂಟರ್ ಬಿಡುಗಡೆ ಮಾಡಲಿದೆ.
ಎಲೆಕ್ಟ್ರಿಕ್ ಸ್ಕೂಟರ್ ಗಳ ಬೆಲೆ:
ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಗಳಲ್ಲಿ ಹೆಚ್ಚಿನ ವೇಗ ಮತ್ತು ಕಡಿಮೆ ವೇಗದ ಎಲೆಕ್ಟ್ರಿಕ್ ಸ್ಕೂಟರ್ ನ್ನು ಫೂಜಿಯಾಮಾ (Fujiyama) ಪರಿಚಯಿಸಿದೆ. ಸ್ಪೆಕ್ಟ್ರಾ ಪ್ರೊ (Spectra Pro), ಸ್ಪೆಕ್ಟ್ರಾ ವಿಸ್ಪರ್(Spectra vispera), ಥಂಡರ್ (Thunder) , ಓಝೋನ್ ಪ್ಲಸ್(Ozone Plus) ಶ್ರೇಣಿ ಬಿಡುಗಡೆ ಮಾಡಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೆಲೆ (ಎಕ್ಸ್ ಶೋ ರೂಮ್) 49,499 ರಿಂದ 99,999 ರವರೆಗೆ ಇದೆ.
ಅಧಿಕ ಸಾಮರ್ಥ್ಯ:
ಲೀಥಿಯಂ ಅಯಾನ್ ಬ್ಯಾಟರಿ ಬಳಸಿರುವ ಈ ಸ್ಕೂಟರ್ ಸಾಮರ್ಥ್ಯ ಉತ್ತಮವಾಗಿದೆ. ಈ ಬ್ಯಾಟರಿ ಚಾರ್ಜ್ ಮಾಡಲು ಎರಡರಿಂದ ಮೂರು ಯೂನಿಟ್ (3 Unite) ವಿದ್ಯುತ್ ಬಳಸಲಾಗುತ್ತದೆ. ಈ ಸ್ಕೂಟರ್ ವ್ಯಾಪ್ತಿ 140 ಕಿಲೋಮೀಟರ್. ಫ್ಯೂಚರ್ ಎಲೆಕ್ಟ್ರಿಕ್ ಸ್ಕೂಟರ್ ಮೊದಲ ಮೂರು ಸೇವೆಗಳು ಉಚಿತವಾಗಿರುತ್ತದೆ. ನಂತರ ಸ್ಕೂಟರ್ ಸರ್ವಿಸ್ ಮಾಡಿಸಿದರೆ ಕೇವಲ 249 ರೂಪಾಯಿಗಳ ವೆಚ್ಚ ಅಷ್ಟೇ ಭರಿಸಬೇಕು.
ಈ ಬೈಕ್ ನ ಯೋಜನೆಗಳು:
ಮುಂಬರುವ ದಿನಗಳಲ್ಲಿ ಎರಡು ಈ ಬೈಕ್ ಗಳನ್ನು ಬಿಡುಗಡೆ ಮಾಡುವುದಾಗಿ ಕಂಪನಿ ಘೋಷಿಸಿದೆ. ಅವುಗಳಲ್ಲಿ ಮೊದಲನೆಯದು ಕ್ಲಾಸಿಕ್ ಎಲೆಕ್ಟ್ರಿಕ್ ಸ್ಕೂಟರ್. 160 ಕಿಲೋಮೀಟರ್ ಹೊಂದಿರುವ ಈ ಬೈಕ್ ಬೆಲೆ 70,000 ರೂಪಾಯಿಗಳು. ಈ ಲೋಡರ್ ಮತ್ತು ವಾಣಿಜ್ಯ ಮೂರು ಚಕ್ರ ವಾಹನಗಳನ್ನು ಕೂಡ ಮುಂಬರುವ ದಿನಗಳಲ್ಲಿ ಫ್ಯೂಜಿಯಾಮ ಬಿಡುಗಡೆ ಮಾಡಲಿದೆ. ಇತ್ತೀಚಿಗೆ ರಾಜಸ್ಥಾನದ ಜೈಪುರದಲ್ಲಿ ಡೀಲರ್ ಶಿಪ್ ಆರಂಭಿಸಿದೆ. ಡೀಲರ್ ಶಿಪ್ ನಲ್ಲಿ ಸ್ಕೂಟರ್ ಬುಕ್ ಮಾಡಿದರೆ ಟೆಸ್ಟ್ ರೈಡ್ (Test Ride) ಕೂಡ ಮಾಡಬಹುದು.