Karnataka Times
Trending Stories, Viral News, Gossips & Everything in Kannada

Royal Enfield Bike: ರಾಯಲ್ ಎನ್ಫೀಲ್ಡ್ ಬೈಕ್ ಖರೀದಿಸೋ ಮುನ್ನ ಈ ವಿಷಯ ನಿಮಗೆ ಗೊತ್ತಿರಲಿ.

Advertisement

ದೇಶದಲ್ಲಿ ರಾಯಲ್ ಎನ್ಫೀಲ್ಡ್ ಪ್ರಿಯರು ಸಾಕಷ್ಟು ಜನ ಇದ್ದಾರೆ. ಹಾಗಾಗಿ ಈ ಬೈಕ್ ನ ಮಾರಾಟ ಕೂಡ ನಿರಂತರವಾಗಿ ಹೆಚ್ಚಿದೆ. ಪ್ರೀಮಿಯಂ ಹಾಗೂ ಕ್ಲಾಸಿಕ್ ಶ್ರೇಣಿಯ, 350 ಸಿಸಿ ಬುಲೆಟ್ ಬೈಕ್ ಗಳು ಹೆಚ್ಚು ಬೇಡಿಕೆ ಹೊಂದಿವೆ. ರಾಯಲ್ ಎನ್ಫೀಲ್ಡ್ ಬೈಕ್ (Royal Enfield Bike) ನ ನೋಟ ಕಾರ್ಯ ಕ್ಷಮತೆ ಎಲ್ಲವೂ ರಾಯಲ್ ಆಗಿಯೇ ಇರುತ್ತವೆ. ಕೆಲವರು ರಾಯಲ್ ಎನ್ಫೀಲ್ಡ್ ಬೈಕ್ (Royal Enfield Bike) ಬಿಟ್ಟು ಬೇರೆ ಬೈಕ್ ಓಡಿಸೋದೆ ಇಲ್ಲ. ಆದರೆ ಕೆಲವು ಕಾರಣಗಳಿಗೆ ರಾಯಲ್ ಎನ್ಫೀಲ್ಡ್ ಬೈಕ್ ಖರೀದಿಸುವುದು ಅಷ್ಟು ಸೂಕ್ತವಲ್ಲ ಯಾಕೆ ಗೊತ್ತಾ!

ವೇಗ ಹೆಚ್ಚಾದರೆ ವೈಬ್ರೇಶನ್ ಶುರುವಾಗುತ್ತೆ:

ದೂರದ ಪ್ರಯಾಣಕ್ಕೆ ರಾಯಲ್ ಎನ್ಫೀಲ್ಡ್ ಹೆಸರುವಾಸಿಯಾಗಿದೆ. ಆದರೆ ಇದರ ವೇಗಕ್ಕೆ ಸಂಬಂಧಪಟ್ಟ ಹಾಗೆ ಸಮಸ್ಯೆಗಳು ಕೂಡ ಇವೆ ರಾಯಲ್ ಎನ್ಫೀಲ್ಡ್ ಬೈಕ್ (Royal Enfield Bike) ಅನ್ನು 80 ರಿಂದ 90 ಕಿಲೋಮೀಟರ್ ವೇಗದಲ್ಲಿ ಪ್ರಯಾಣ ಮಾಡಿದರೆ ವೈಬ್ರೇಶನ್ ಶುರುವಾಗುತ್ತೆ. ನೀವು ಹ್ಯಾಂಡಲ್ ಬಾರ್ ನಲ್ಲಿ ವೈಬ್ರೇಶನ್ ಫೀಲ್ ಮಾಡಬಹುದು. ಇದರಿಂದ ರಿಯರ್ ವ್ಯೂ ಮಿರರ್ ಚೆಕ್ ಮಾಡೋದು ಕಷ್ಟವಾಗುತ್ತೆ.

ಮೈಲೇಜ್:

ರಾಯಲ್ ಎನ್ಫೀಲ್ಡ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ 1.16 ಲಕ್ಷ ರೂಪಾಯಿಗಳಿಂದ 1.99 ಲಕ್ಷ ರೂಪಾಯಿಗಳವರೆಗೆ ಇದೆ. ಬುಲೆಟ್ 350 ಸಿಸಿ ಥಂಡರ್ಬರ್ಡ್ ಹಾಗೂ ಹಿಮಾಲಯನ್ ವರೆಗೂ ಇದೆ. ಆದರೆ ಈ ಬೈಕ್ ಗಳ ಗರಿಷ್ಠ ಮೈಲೇಜ್ ಪ್ರತಿ ಲೀಟರಿಗೆ 40 ಕಿಲೋಮೀಟರ್ಗಳು ಮಾತ್ರ. ಈ ಬೈಕ್ ಹೆಚ್ಚು ಕಾರ್ಯಕ್ಷಮತೆ ಹೊಂದಿದ್ದರೂ ನೀಡುವ ಮೈಲೇಜ್ ಮಾತ್ರ ಅಷ್ಟಕಷ್ಟೇ ಈ ಕಾರಣಕ್ಕಾಗಿ ಬೈಕ್ ಓಡಿಸುವುದಕ್ಕೆ ದುಬಾರಿ ಎನಿಸುತ್ತದೆ.

ಬ್ರೇಕಿಂಗ್ ವ್ಯವಸ್ಥೆಯಲ್ಲಿಯೂ ಲೋಪ:

ಇತ್ತೀಚಿಗೆ ರಾಯಲ್ ಎನ್ಫೀಲ್ಡ್ ಸಿಗ್ನಲ್ 350 ಬಿಡುಗಡೆಯಾಗಿದೆ. ಇದರಲ್ಲಿ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಹಿಮಾಲಯನ್ ನಲ್ಲಿ ಕ್ಲಾಸಿಕ್ 500 ಎಬಿ ಎಸ್ ವೈಶಿಷ್ಟ್ಯಗಳು ಲಭ್ಯವಿವೆ. ಆದರೆ ಎಬಿಎಸ್ ಅನ್ನು ಕ್ಲಾಸಿಕ್ 350 ಮತ್ತು ಬುಲೆಟ್ ನಲ್ಲಿ ಇದುವರೆಗೆ ಅಳವಡಿಸಲಾಗಿಲ್ಲ. ಹಿಂಭಾಗದ ಡಿಸ್ಕ್ ಬ್ರೇಕ್ ಕೊರತೆ ರಾಯಲ್ ಎನ್ಫೀಲ್ಡ್ ಓಡಿಸುವವರಿಗೆ ನಿರಾಶೆ ಮೂಡಿಸುತ್ತದೆ.

ವೈಶಿಷ್ಟ್ಯತೆಯಲ್ಲಿಯೂ ಕೊರತೆ:

ರಾಯಲ್ ಎನ್ಫೀಲ್ಡ್ ಬೈಕ್ ಗಳು ಅದರ ವಿನ್ಯಾಸ ಹಾಗೂ ವೈಶಿಷ್ಟ್ಯತೆಯಲ್ಲಿ ಇನ್ನೂ ಹಳೆಯ ಸಂಪ್ರದಾಯವನ್ನೇ ಅನುಸರಿಸುತ್ತಿದೆ ಎಂದು ಹೇಳಬಹುದು ಯಾಕೆಂದರೆ ಇದರ ಲುಕ್ ಅಥವಾ ವೈಶಿಷ್ಟ್ಯತೆಯಲ್ಲಿ ಹೆಚ್ಚಿನದಾಗಿ ಕಂಪನಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿಲ್ಲ. ಹಿಮಾಲಯನ್ ಬೈಕ್ ನಲ್ಲಿ ಮಾತ್ರ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಂತಹ ವೈಶಿಷ್ಟ್ಯತೆಗಳನ್ನು ಕಾಣಬಹುದೇ ಹೊರತು ಬೇರೆ ಯಾವ ಹೊಸ ಫೀಚರ್ ಗಳು ಇಲ್ಲ ಹಳೆಯ ಸ್ಪೀಡೋಮೀಟರ್ ಅನ್ನೇ ಈಗಲೂ ಬೈಕ್ನಲ್ಲಿ ಅಳವಡಿಸಲಾಗಿದ್ದು ಈ ಕೆಲವು ದೋಷಗಳಿಂದ ರಾಯಲ್ ಎನ್ಫೀಲ್ಡ್ ಬೈಕ್ ಖರೀದಿಗೆ ಅಷ್ಟು ಸೂಕ್ತವಲ್ಲ ಎನ್ನಬಹುದು.

Leave A Reply

Your email address will not be published.