Sunroof: ಕೇವಲ ಮೋಜಿಗಾಗಿ ಕಾರಿನಲ್ಲಿ ಸನ್ ರೂಫ್ ಇರುವುದಲ್ಲ, ಇದರ ಹಿಂದೆಯೂ ಇದೆ ದೊಡ್ಡ ಕಾರಣ
ಕಾರುಗಳಲ್ಲಿ ವಿಶೇಷ ಫೀಚರ್ ಗಳನ್ನು ಅಳವಡಿಸುವುದು, ವೈಶಿಷ್ಟ್ಯತೆಗಳಲ್ಲಿ ಬದಲಾವಣೆ ಮಾಡುವುದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಅದಕ್ಕೆ ತಕ್ಕ ಹಾಗೆ ಜನರ ಬೇಡಿಕೆಗಳು ಕೂಡ ಹೆಚ್ಚಾಗುತ್ತವೆ ಜನರ ಬೇಡಿಕೆಯನ್ನು ಈಡೇರಿಸುವುದಕ್ಕಾಗಿ ಕಂಪನಿಗಳು ಹೊಸ ಫೀಚರ್ ಗಳನ್ನು ಕಾರಿನಲ್ಲಿ ಅಳವಡಿಸುತ್ತವೆ. ಅಂತಹ ಒಂದು ಜನರಿಗೂ ಇಷ್ಟವಾಗುವ ವೈಶಿಷ್ಟ್ಯತೆ ಅಂದ್ರೆ ಕಾರ್ ಗಳಲ್ಲಿ ಅಳವಡಿಸುವ ಸನ್ ರೂಫ್. ತುಂಬಾನೇ ಫ್ಯಾನ್ಸಿ ಫೀಚರ್ (Fancy Features) ಆಗಿರುವ ಸನ್ ರೂಫ್ (sunroof) ಇತ್ತೀಚಿಗೆ ಹೆಚ್ಚು ಜನಪ್ರಿಯ ವಾಗುತ್ತಿದೆ. ಜನರು ಕೂಡ ಖರೀದಿಸಲು ಮುಂದಾಗುತ್ತಿದ್ದಾರೆ.
ಕಾರಗಳಲ್ಲಿ ಸನ್ ರೂಫ್ (Sunroof) ಯಾಕೆ ಇರುತ್ತೆ ಗೊತ್ತಾ? ಸಾಮಾನ್ಯವಾಗಿ ಜನರು ಕಾರಿನಲ್ಲಿ ಪ್ರಯಾಣ ಮಾಡುವಾಗ ಹೊರಗೆ ಇಣುಕಿ ಮೋಜು ಮಾಡುವುದೇ ಹೆಚ್ಚು. ಅದರಲ್ಲೂ ಮಕ್ಕಳು ಸನ್ ರೂಫ್ ಇರುವ ಕಾರಣ ಹೆಚ್ಚು ಇಷ್ಟಪಡುತ್ತಾರೆ. ಎಲ್ಲಿಗೆ ಹೋಗುವುದಿದ್ದರು ಸನ್ ರೂಫ್ ನಿಂದ ತಲೆಯ ಹೊರಗೆ ಹಾಕಿ ಖುಷಿ ಪಡುತ್ತಾರೆ. ಹಾಗಾದ್ರೆ ಕಾರಿನಲ್ಲಿ ನಿಜಕ್ಕೂ ಸನ್ ರೂಫ್ ಇರೋದು ಯಾಕೆ ಗೊತ್ತಾ? ಕೇವಲ ಜನರ ಮೋಜಿಗಾಗಿ ಈ ವೈಶಿಷ್ಟ್ಯತೆ ವಿನ್ಯಾಸಗೊಳಿಸಲಾಗಿದ್ಯಾ? ಹಾಗೆ ನೀವು ಭಾವಿಸಿದ್ದರೆ ಖಂಡಿತ ತಪ್ಪು ವೈಶಿಷ್ಟ್ಯತೆಯ ಹಿಂದೆಯೂ ಇದೆ ಒಂದು ವಿಜ್ಞಾನ. ಅದೇನು ಗೊತ್ತಾ?
Sunroof ನ ಹಿಂದಿರುವ ವಿಜ್ಞಾನ ಏನು?
- ಮೊದಲನೇದಾಗಿ ಕಾರಿನಲ್ಲಿ ನೈಸರ್ಗಿಕ ಬೆಳಕಿನ ಕೊರತೆ ಆಗದೆ ಇರುವ ರೀತಿಯಲ್ಲಿ ಸನ್ ರೂಫ್ ವಿನ್ಯಾಸಗೊಳಿಸಲಾಗಿರುತ್ತದೆ.
- ಕಾರಿನ ತಾಪವನ್ನು ಕಡಿಮೆ ಮಾಡಲು ಅಳವಡಿಸಲಾಗಿರುತ್ತದೆ. ಇದರಿಂದಾಗಿ ಕ್ಯಾಬಿನ್ ತಾಪಮಾನ ಇದ್ದಕ್ಕಿದ್ದಂತೆ ಕಡಿಮೆ ಆಗುತ್ತದೆ.
- ಸಾಮಾನ್ಯವಾಗಿ ಬೇಸಿಗೆಯಲ್ಲಿ ಅತಿ ಬಿಸಿಲಿರುವ ಜಾಗದಲ್ಲಿ ಕಾರು ನಿಲ್ಲಿಸಿದರೆ ಕ್ಯಾಬಿನ್ ನಲ್ಲಿ ಆಮ್ಲಜನಕದ ಕೊರತೆ ಉಂಟಾಗಬಹುದು ಆದರೆ ಸನ್ ರೂಫ್ ಇರುವ ಕಾರ್ ಗಳಲ್ಲಿ ಈ ಸಮಸ್ಯೆ ಇರುವುದಿಲ್ಲ. ಸನ್ ರೂಫ್ ತೆಗೆಯುವುದರ ಮೂಲಕ ಬಿಸಿ ಅನಿಲ ಹೊರಕೆ ಹೋಗುವಂತೆ ಮಾಡಬಹುದು.
- ಸನ್‌ರೂಫ್ ಇರುವುದರಿಂದ ಕ್ಯಾಬಿನ್‌ನಲ್ಲಿ ಉಸಿರುಗಟ್ಟುವಿಕೆ ಆಗದಂತೆ ತಡೆಯುತ್ತದೆ. ಹಾಗಾಗಿ ಕ್ಯಾಬಿನ್ ನಲ್ಲಿ ಆಮ್ಲಜನಕದ ಸರಿಯಾದ ಪೂರೈಕೆ ಮಾಡಲು ಸಹಾಯ ಮಾಡುತ್ತದೆ.
ಈ ರೀತಿ ಮಾಡಿದರೆ ಅಪಾಯ ಗ್ಯಾರಂಟಿ:
ಸನ್ ರೂಫ್ (sunroof) ಇದ್ರೆ ಮಕ್ಕಳು ಅಥವಾ ವಯಸ್ಸಾದವರು ಸನ್ ರೂಫ್ ನಿಂದ ಹೊರಗೆ ಮುಖ ಹಾಕಿ ಮೋಜು ಮಾಡುವುದನ್ನು ನೀವು ಕಂಡಿರಬಹುದು. ಆದರೆ ಇದು ತುಂಬಾನೇ ಡೇಂಜರಸ್. ಒಂದು ವೇಳೆ ಅಕಸ್ಮಾತ್ ಬ್ರೇಕ್ ಹಾಕಿದ್ರೆ ಇದರಿಂದ ಗಂಭೀರ ಸಮಸ್ಯೆ ಉಂಟಾಗಬಹುದು. ಸನ್ ರೂಫ್ ನಿಂದ ವ್ಯಕ್ತಿ ಹೊರಗೆ ಬಿದ್ದು ಅಪಘಾತ ಉಂಟಾಗಬಹುದು. ಸನ್ ರೂಫ್ ನಿಂದ ಹೊರಗೆ ಇಣುಕುವುದಕ್ಕೂ ಮೊದಲು ಆ ಸ್ಥಳ ಹೇಗಿದೆ? ಎಷ್ಟು ಸ್ಪೀಡ್ ನಲ್ಲಿ ಕಾರ್ ಓಡುತ್ತಿದೆ ಎಂಬುದನ್ನು ತಿಳಿದುಕೊಳ್ಳಿ ಮೋಜು ಮಾಡಲು ಹೋಗಿ ನೀವಾಗಿಯೇ ಅಪಾಯ ತಂದುಕೊಳ್ಳಬೇಡಿ.